ತಿರುಪತಿ (ಏ.09): ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಏ.12ರಿಂದಲೇ ಭಕ್ತರಿಗೆ ತಿರುಪತಿ ತಿಮ್ಮಪ್ಪನ ಉಚಿತ ದರ್ಶನಕ್ಕಾಗಿ ನೀಡಲಾಗುವ ಸರ್ವ ದರ್ಶನ ಟೋಕನ್‌ಗಳ ವಿತರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲು ನಿರ್ಧರಿಸಲಾಗಿದೆ.

 ತಿರುಪತಿಯಲ್ಲಿರುವ ಭೂದೇವಿ ಕಟ್ಟಡ ಮತ್ತು ವಿಷ್ಣು ನಿವಾಸಂನಲ್ಲಿ ತಿರುಪತಿ ತಿಮ್ಮಪ್ಪನ ಉಚಿತ ದರ್ಶನ ಕಲ್ಪಿಸುವ ‘ಸರ್ವ ದರ್ಶನ’ದ ಟೋಕನ್‌ಗಳನ್ನು ವಿತರಿಸಲಾಗುತ್ತದೆ. 

ಚೀನಾಗೆ ಸ್ಮಗಲ್ ಆಗುತ್ತಿದೆ ತಿಮ್ಮಪ್ಪನ ಭಕ್ತರ ಮುಡಿ ಕೂದಲು, ಭಾರತಕ್ಕೆ ಕೋಟಿ ಕೋಟಿ ನಷ್ಟ! ...

ಈ ಟೋಕನ್‌ಗಳಿಗಾಗಿ ಸಾವಿರಾರು ಭಕ್ತರು ವಿಷ್ಣು ನಿವಾಸಂ ಮತ್ತು ಭೂದೇವಿ ಕಟ್ಟಡದಲ್ಲಿ ಬೀಡುಬಿಡುತ್ತಿದ್ದು, ಇದರಿಂದ ಮತ್ತಷ್ಟುಮಂದಿಗೆ ಸೋಂಕು ಹಬ್ಬುವ ಭೀತಿ ಎದುರಾಗಿದೆ. ಈ ಹಿನ್ನೆಲೆಯಲ್ಲಿ ಏ.11ರವರೆಗೆ ಮಾತ್ರವೇ ಟೋಕನ್‌ ವಿತರಿಸಲಾಗುತ್ತದೆ. 

ಆ ನಂತರ ಟೋಕನ್‌ ವಿತರಣೆಯನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗುತ್ತದೆ ಟಿಟಿಡಿ ಹೇಳಿದೆ.