Asianet Suvarna News Asianet Suvarna News

Selfie On Railway Track : ಸೆಲ್ಫಿ ತೆಗೆಯುವಾಗ ರೈಲು ಡಿಕ್ಕಿ, ನಾಲ್ವರ ಸಾವು!

ರೈಲ್ವೇ ಟ್ರ್ಯಾಕ್ ನಲ್ಲಿ ಸೆಲ್ಫಿ ತೆಗೆಯುವ ಪ್ರಯತ್ನ
ಚಿತ್ರದಲ್ಲಿ ಬರುತ್ತಿರುವ ಟ್ರೇನ್ ಕೂಡ ಸೆರೆಯಾಗಬೇಕು ಎನ್ನುವ ಯತ್ನದಲ್ಲಿ ಟ್ರ್ಯಾಕ್ ನಲ್ಲೇ ನಿಂತಿದ್ದ ಯುವಕರು
ಗುರುಗ್ರಾಮದ ರೈಲ್ವೇ ಸ್ಟೇಷನ್ ನಲ್ಲಿ ನಡೆದ ಘಟನೆ

Four youths hit by train while taking selfie on railway track in Gurgaon san
Author
Bengaluru, First Published Feb 16, 2022, 6:27 PM IST

ಗುರುಗ್ರಾಮ (ಫೆ. 16): ದೆಹಲಿಯ ಹೊರವಲಯದಲ್ಲಿರುವ ಗುರುಗ್ರಾಮ್‌ನಲ್ಲಿ(Gurgaon) ನಿರ್ಮಾಣ ಹಂತದಲ್ಲಿರುವ ರೈಲ್ವೇ ಮೇಲ್ಸೇತುವೆ (ORB) ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ನಾಲ್ವರು ಯುವಕರಿಗೆ ರೈಲು ಡಿಕ್ಕಿ ಹೊಡೆದ ಪರಿಣಾಮ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸರ್ಕಾರಿ ರೈಲ್ವೆ ಪೊಲೀಸ್ (GRP) ಪ್ರಕಾರ, ಮಂಗಳವಾರ ದೆಹಲಿಯ ಸರಾಯ್ ರೋಹಿಲ್ಲಾದಿಂದ (Sarai Rohilla) ಅಜ್ಮೀರ್‌ಗೆ (Ajmer) ಹೋಗುವ ಜನ ಶತಾಬ್ದಿ ಎಕ್ಸ್‌ಪ್ರೆಸ್ ( Jan Shatabdi Express) ಗುರುಗ್ರಾಮ ರೈಲು ನಿಲ್ದಾಣದಿಂದ ಬಸಾಯಿ ರೈಲು ನಿಲ್ದಾಣದ (Basai railway station) ಕಡೆಗೆ ಸಾಗುತ್ತಿದ್ದ ವೇಳೆ ಸಂಜೆ 5 ಗಂಟೆಗೆ ಅಪಘಾತ ಸಂಭವಿಸಿದೆ.

18 ರಿಂದ 21 ವರ್ಷ ವಯಸ್ಸಿನ ನಾಲ್ವರು ಯುವಕರು ರೈಲು ಸಮೀಪಿಸುತ್ತಿದ್ದಾಗ ಟ್ರ್ಯಾಕ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಾರಂಭಿಸಿದರು. ತಮ್ಮ ಸೆಲ್ಫಿಯಲ್ಲಿ ರೈಲಿನ ಚಿತ್ರಬರಬೇಕು ಎನ್ನುವ ಹಂಬಲದಲ್ಲಿ ರೈಲು ಸಾಕಷ್ಟು ಸಮೀಪ ಬಂದರೂ ಟ್ರ್ಯಾಕ್ ನಿಂದ ಕದಲದೇ ಅಲ್ಲಿಯೇ ನಿಂತಿದ್ದರು. ಆದರೆ, ವೇಗವಾಗಿ ಬಂದ ರೈಲು ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವು ಕಂಡಿದ್ದಾರೆ. ರೈಲು ಚಾಲಕನಿಂದ ಮಾಹಿತಿ ಪಡೆದ ತಕ್ಷಣ, ಜಿಆರ್‌ಪಿ ಪೊಲೀಸ್ ಠಾಣೆಯ ತಂಡವು ಸ್ಥಳಕ್ಕೆ ತಲುಪಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರನ್ನು ದೇವಿಲಾಲ್ ಕಾಲೋನಿ ನಿವಾಸಿಗಳಾದ ಸಮೀರ್ (19), ಮೊಹಮ್ಮದ್ ಅನಸ್ (20), ಯೂಸುಫ್ ಅಲಿಯಾಸ್ ಭೋಲಾ (21) ಮತ್ತು ಯುವರಾಜ್ ಗೋಗಿಯಾ (18) ಎಂದು ಗುರುತಿಸಲಾಗಿದೆ.

ಅವರಲ್ಲಿ ಒಬ್ಬರು 9 ನೇ ತರಗತಿ ವಿದ್ಯಾರ್ಥಿಯಾಗಿದ್ದು, ಮತ್ತೊಬ್ಬ ಮೊಬೈಲ್ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಬಲಿಯಾದವರಲ್ಲಿ ಒಬ್ಬನ ತಂದೆ ಬೀದಿಬದಿಯಲ್ಲಿ ತರಕಾರಿ ಮಾರುವವರಾಗಿದ್ದಾರೆ. ಈ ತಿಂಗಳ ಆರಂಭದಲ್ಲಿ ಗಾಜಿಯಾಬಾದ್‌ನಲ್ಲಿ ಹಳಿ ದಾಟುತ್ತಿದ್ದ ಇಬ್ಬರು ವಿದ್ಯಾರ್ಥಿನಿಯರು ರೈಲಿಗೆ ಸಿಲುಕಿ ಸಾವನ್ನಪ್ಪಿದ್ದರು. ಅಂತಹ ಘಟನೆಗಳನ್ನು ರೈಲ್ವೆಯು "ರೈಲು ಅಪಘಾತಗಳು" ಎಂದು ಪರಿಗಣಿಸುವುದಿಲ್ಲ ಮತ್ತು ಸಾವಿಗೀಡಾದವರನ್ನು "ಅತಿಕ್ರಮಣಕಾರರು" ಎಂದು ಕರೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸ್ಥಳದಲ್ಲಿದ್ದ ಅಕ್ಕಪಕ್ಕದಲ್ಲಿದ್ದ ಜನರ ಪ್ರಕಾರ, "ಅವರು ಸ್ಕೂಟರ್‌ನಲ್ಲಿ ಬಂದು ಅದನ್ನು ರೈಲು ಮಾರ್ಗದ ಬಳಿ ನಿಲ್ಲಿಸಿ ನಂತರ ತಮ್ಮ ಫೋನ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದಾಗ ರೈಲಿಗೆ ಡಿಕ್ಕಿ ಹೊಡೆದಿದ್ದಾರೆ" ಎಂದು ಪೊಲೀಸರು ತಿಳಿಸಿದ್ದಾಗಿ ಹೇಳಿದ್ದಾರೆ.

Selfie Tragedy: ಸೆಲ್ಫಿ ಹುಚ್ಚಿಗೆ ಯುವಕ ಹೊಗೇನಕಲ್‌ ಜಲಪಾತದಲ್ಲಿ ನೀರುಪಾಲು
ರಾಜ್ಯದಲ್ಲೂ ಸೆಲ್ಫಿ ಗೀಳಿನಿಂದಾಗಿ ಇಂಥ ಘಟನೆಗಳು ವರದಿಯಾಗುತ್ತಲೇ ಇರುತ್ತದೆ. ಕಳೆದ ತಿಂಗಳು ಸೆಲ್ಫಿ(Selfie) ಹುಚ್ಚಿನಿಂದ ಫೋಟೋ ಕ್ಲಿಕ್ಕಿಸಿಕೊಳ್ಳಲು ತೆರಳಿದ್ದ ವಿದ್ಯಾರ್ಥಿ(Student) ನೀರುಪಾಲಾದ ಘಟನೆ ಹೊಗೇನಕಲ್‌ ಜಲಪಾತದಲ್ಲಿ(Hogenakkal Falls) ನಡೆದಿದೆ.  ಮೈಸೂರು(Mysuru) ಮೂಲದ ಉಮಾಶಂಕರ್‌(19) ಎಂಬ ನರ್ಸಿಂಗ್‌ ವಿದ್ಯಾರ್ಥಿ ಈ ವೇಳೆ ಮೃತನಾಗಿದ್ದ. ಸ್ನೇಹಿತರಾದ ರವಿಕುಮಾರ್‌, ಶಿವಪ್ರಸಾದ್‌ ಜತೆ ತೆರಳಿದ್ದ ಉಮಾಶಂಕರ್‌ ಸ್ನೇಹಿತರಿಗೆ ಫೋಟೋ ತೆಗೆಯುವಂತೆ ಹೇಳಿದ್ದಾನೆ. ಸ್ನೇಹಿತರು ಪೋಟೋಗಳನ್ನು ತೆಗೆದ ಬಳಿಕ ಜಲಪಾತದ ಕೊರಕಲಿನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಕಾಲುಜಾರಿ ನೀರಿಗೆ ಬಿದ್ದಿದ್ದಾನೆ. 80 ಅಡಿಗಿಂತಲೂ ಆಳವಾದ ಜಾಗಕ್ಕೆ ಉಮಾಶಂಕರ್‌ ಬಿದ್ದು ಮೃತಪಟ್ಟಿದ್ದ.

Murder in Aurangabad : ಅಕ್ಕನ ತಲೆ ಕಡಿದು ಅಮ್ಮನೊಂದಿಗೆ ಸೆಲ್ಫಿ ತೆಗೆದ 17ರ ತರುಣ
ಇನ್ನು ದಾವಣಗೆರೆಯಲ್ಲೂ ರೈಲಿನ ಮುಂದೆ ಸೆಲ್ಫಿ ತೆಗೆಯಲು ಗೆಳೆಯರೊಂದಿಗೆ ಆಟವಾಡಲು ಹೋಗಿದ್ದ ಬಾಲಕನೊಬ್ಬ ಸೆಲ್ಫಿ ತೆಗೆದುಕೊಳ್ಳುವ ಭರದಲ್ಲಿ ಚಲಿಸುವ ರೈಲಿಗೆ(Train) ಸಿಲುಕಿ ಮೃತಪಟ್ಟಿರುವ ಘಟನೆ ಡಿಸಿಎಂ ಟೌನ್‌ಶಿಪ್‌ ಬಳಿ ನಡೆದಿತ್ತು. ಡಿಸಿಎಂ ಟೌನ್ ಷಿಪ್ ನ ಭಗತ್‌ ಸಿಂಗ್‌ ನಗರದ ಡೇವಿಡ್‌ ಎಂಬುವರ ಮಗ ಸಚಿನ್‌(15) ಮೃತನಾಗಿದ್ದ. ಜ. 23 ರಂದು ರಜೆ ಇದ್ದುದರಿಂದ ಗೆಳೆಯರ ಜೊತೆ ಸುತ್ತಾಡಲು ಹೋಗಿದ್ದ ಸಚಿನ್‌ ರೈಲು ಬರುತ್ತಿದ್ದಾಗಲೇ ಹಳಿ ದಾಟಲು ಮುಂದಾಗಿದ್ದರಿಂದ ರೈಲು ಡಿಕ್ಕಿ ಹೊಡೆದಿದೆ. ಇದರಿಂದ ತಲೆಗೆ ತೀವ್ರ ಪೆಟ್ಟು ಬಿದ್ದು ಬಾಲಕ ಸ್ಥಳದಲ್ಲೇ ಮೃತಪಟ್ಟಿದ್ದ.

Follow Us:
Download App:
  • android
  • ios