ಉಚಿತ  ಸೀರೆ ಹಾಗೂ ಧೋತಿ ವಿತರಣೆ ವೇಳೆ ಭಾರಿ ಅವಘಡ ಸಂಭವಿಸಿದೆ. ಉಚಿತ ಅನ್ನೋ ಕಾರಣಕ್ಕೆ ಜನ ಕಿಕ್ಕಿರಿದು ಸೇರಿದ್ದಾರೆ. ಇದರಿಂದ ಕಾಲ್ತುಳಿತ ಸಂಭವಿಸಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ.

ಚೆನ್ನೈ(ಫೆ.04): ಉಚಿತ ಸೀರೆ ಹಾಗೂ ಧೋತಿ ಘೋಷಣೆ ಹೊರಬಿದ್ದ ಬೆನ್ನಲ್ಲೇ ಸಾವಿರಾರು ಜನ ಜಮಾಯಿಸಿದ್ದಾರೆ. ನೋಡ ನೋಡುತ್ತಿದ್ದಂತೆ ತಳ್ಳಾಟ ನೂಕೂಟ ಆರಂಭಗೊಂಡಿದೆ. ಕೆಲ ಕ್ಷಣಗಳಲ್ಲೇ ಸಾಗರದಂತೆ ಜನರು ಹರಿದುಬಂದಿದ್ದಾರೆ. ಇದರ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಈ ಕಾಲ್ತುಳಿತದಲ್ಲಿ ನಾಲ್ವರು ಮಹಿಳೆಯರು ಮೃತಪಟ್ಟಿದ್ದಾರೆ. ಇನ್ನು ಹಲವರು ಗಂಭೀರವಾಗಿ ಗಾಯಗೊಂಡಿದ್ದಾರ. ಈ ಘಟನೆ ನಡೆದಿರುವುದು ತಮಿಳುನಾಡಿನ ತ್ರಿಪತ್ತೂರು ಜಿಲ್ಲೆಯಲ್ಲಿ. ಇಲ್ಲಿನ ಅತ್ಯಂತ ಜನಪ್ರಿಯ ತೈಪುಸಮ್ ಹಬ್ಬದ ಪ್ರಯುಕ್ತ ಉದ್ಯಮಿಯೊಬ್ಬರು ಜನರಿಗೆ ಉಚಿತ ಸೀರೆ ಹಾಗೂ ಧೋತಿ ನೀಡಲು ಮುಂದಾಗಿದ್ದಾರೆ. ಆದರೆ ಉದ್ಯಮಿಯ ದಾನ ಧರ್ಮ ಇದೀಗ ನಾಲ್ವರನ್ನು ಬಲಿಪಡೆದಿದೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.

ತಮಿಳನಾಡಿನ ತ್ರಿಪತ್ತೂರು ಜಿಲ್ಲೆಯಲ್ಲಿ ತೈಪುಸಮ್ ಹಬ್ಬವನ್ನು ವಿಜ್ರಂಭಣೆಯಿಂದ ಆಚರಿಸಲಾಗುತ್ತದೆ. ಈ ಹಬ್ಬಕ್ಕೆ ಧಾನ ಧರ್ಮ ಮಾಡುವುದು ವಾಡಿಕೆ. ಜನರು ತಮ್ಮ ತಮ್ಮ ಸಾಮರ್ಥ್ಯ ತಕ್ಕಂತೆ ದಾನಗಳನ್ನು ಮಾಡುತ್ತಾರೆ. ಉದ್ಯಮಿಯೊಬ್ಬರು ತಮ್ಮ ಟೆಕ್ಸ್‌ಟೈಲ್ ಶಾಪ್‌ನಲ್ಲಿ ಮಹಿಳೆಯರಿಗೆ, ಹೆಣ್ಣು ಮಕ್ಕಳಿಗೆ ಉಚಿತ ಸೀರೆ ಹಾಗೂ ಪುರುಷರಿಗೆ ಧೋತಿ ಉಚಿತವಾಗಿ ನೀಡುವುದಾಗಿ ಘೋಷಿಸಿದ್ದಾರೆ. ಉಚಿತ ಘೋಷಣೆ ಕಾಡ್ಗಿಚ್ಚಿನಂತೆ ಹರಡಿದೆ. ಇದರ ಪರಿಣಾಮ ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದಾರೆ.

ಮಕರಸಂಕ್ರಾತಿಗೆ ಒಡಿಶಾದ ಸೇತುವೆ ಬಳಿ ಕಾಲ್ತುಳಿತ, ಇಬ್ಬರು ಭಕ್ತರ ಸಾವು, ಹಲವರು ಗಂಭೀರ!

ಉಚಿತ ಘೋಷಣೆಯಿಂದ ಉದ್ಯಮಿಯ ಟೆಕ್ಸ್‌ಟೈಲ್ ಅಂಗಡಿಗೆ ಜನರು ಹರಿದುಬಂದಿದ್ದಾರೆ. ಟೋಕನ್ ಪಡೆದು ಸೀರೆ ಹಾಗೂ ಧೋತಿ ಪಡೆಯಬೇಕಿತ್ತು. ಜನರನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಬಂದವರಿಗ ಉಚಿತ ಸೀರೆ ಹಾಗೂ ಧೋತಿ ಟೋಕನ್ ವಿತರಿಸಲಾಗಿದೆ. ಆದರೆ ಜನರ ಸಂಖ್ಯೆ ಹೆಚ್ಚಾಗಿದೆ. ಈ ವೇಳೆ ನೂಕಾಟ ತಳ್ಳಾಟ ಶುರುವಾಗಿದೆ. ಪರಿಸ್ಥಿತಿ ನಿಯಂತ್ರಣ ತಪ್ಪುತ್ತಿದ್ದಂತೆ ಜನರನ್ನು ನಿಯಂತ್ರಿಸಲು ಉದ್ಯಮಿಯ ಶಾಪ್ ಸಿಬ್ಬಂದಿಗಳು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲೇ ಪರಿಸ್ಥಿತಿ ಕೈಮೀರಿದೆ. ಹೀಗಾಗಿ ನಿಯಂತ್ರಣ ಸಾಧ್ಯವಾಗಿಲ್ಲ.

Scroll to load tweet…

ಇತ್ತ ಪೊಲೀಸರಿಗೂ ಈ ಕುರಿತು ಯಾವುದೇ ಮಾಹಿತಿ ಇರಲಿಲ್ಲ. ಉಚಿತ ಘೋಷಣೆಯ ಬ್ಯಾನರ್ ಹಾಕಲಾಗಿತ್ತು. ಆದರೆ ಈ ಮಟ್ಟಿಗೆ ಜನ ಸೇರಲಿದ್ದಾರೆ ಅನ್ನೋ ಮಾಹಿತಿ ಇರಲಿಲ್ಲ. ಇಷ್ಟೇ ಅಲ್ಲ ಉದ್ಯಮಿ ಆಗಮಿಸುವ ಜನರ ಸುರಕ್ಷತೆಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರ ಪರಿಣಾಮ ನೂಕು ನುಗ್ಗಲು ಸಂಭವಿಸಿದೆ. ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಭೀಕರ ಕಾಲ್ತುಳಿತದಲ್ಲಿ ಹಲವರು ಗಾಯಗೊಂಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಗುಂಪು ಚದುರಿಸಿ ಗಾಯಗೊಂಡವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ

ಚಂದ್ರಬಾಬು ನಾಯ್ಡು ರ್‍ಯಾಲಿ ವೇಳೆ ಮತ್ತೆ ಕಾಲ್ತುಳಿತ: ಮೂವರ ಸಾವು, ಹಲವರಿಗೆ ಗಾಯ

ಭೀಕರ ಕಾಲ್ತುಳಿತಕ್ಕೆ ನಾಲ್ವರು ಮಹಿಳೆಯರು ಬಲಿಯಾಗಿದ್ದಾರೆ. ಇನ್ನೂ ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಹಲವು ಸ್ಥಿತಿ ಚಿಂತಾಜನಕವಾಗಿದೆ. 

ಇತ್ತಿಚೆಗೆ ಒಡಿಶಾ ಕಟಕ್‌ನಲ್ಲಿ ಮಕರ ಸಂಕ್ರಾಂತಿ ಮೇಳದ ವೇಳೆ ಉಂಟಾದ ಭಕ್ತರ ನೂಕುನುಗ್ಗಾಟದಲ್ಲಿ ಒರ್ವ ಸಾವನ್ನಪ್ಪಿದ್ದರೆ, 20 ಜನರು ಗಾಯಗೊಂಡ ಘಟನೆ ನಡೆದಿತ್ತು. ಕಟಕ್‌ನಲ್ಲಿ ಸಂಕ್ರಮಣದ ನಿಮಿತ ಸಿಂಘನಾಥ್‌ ದೇಗುಲದಲ್ಲಿ ಇತ್ತು. ಈ ವೇಳೆ ಸಿಂಘನಾಥ್‌ ದೇವರ ದರ್ಶನ ಪಡೆಯಲು ಮಧ್ಯಾಹ್ನ ಬಡಂಬಾ-ಗೋಪಿನಾಥಪುರ ಟಿ-ಸೇತುವೆ ಮೇಲೆ ಏಕಾಏಕಿ ಭಾರಿ ಭಕ್ತಸಾಗರ ಹರಿದುಬಂತು. ಆಗ ಪರಿಸ್ಥಿತಿ ನಿಯಂತ್ರಣ ತಪ್ಪಿ ನೂಕುನುಗ್ಗಲು ಉಂಟಾಯಿತು. ಈ ವೇಳೆ ಸಾವು ನೋವಿ ಸಂಭವಿಸಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಮೃತರ ಕುಟುಂಬಕ್ಕೆ ಸರ್ಕಾರ 5 ಲಕ್ಷ ರು. ಪರಿಹಾರ ಪ್ರಕಟಿಸಿದೆ. ಘಟನೆಯ ತನಿಖೆಗೆ ಆದೇಶಿಸಿದೆ.