ಚಂದ್ರಬಾಬು ನಾಯ್ಡು ರ್‍ಯಾಲಿ ವೇಳೆ ಮತ್ತೆ ಕಾಲ್ತುಳಿತ: ಮೂವರ ಸಾವು, ಹಲವರಿಗೆ ಗಾಯ
ಜನವರಿ 1 ರಂದು ಸಂಜೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಸಭೆಯಲ್ಲಿ ಈ ಕಾಲ್ತುಳಿತದ ಘಟನೆ ವರದಿಯಾಗಿದೆ.
ಆಂಧ್ರ ಪ್ರದೇಶದ (Andhra Pradesh) ಗುಂಟೂರಿನಲ್ಲಿ (Guntur) ಚಂದ್ರಬಾಬು ನಾಯ್ಡು (Chandrababu Naidu) ಅವರ ರ್‍ಯಾಲಿ (Rally) ವೇಳೆ ಕಾಲ್ತುಳಿತ (Stampede) ಸಂಭವಿಸಿದ್ದು, ಮೂವರು ಮೃತಪಟ್ಟಿದ್ದಾರೆ (Death). ಅಲ್ಲದೆ, ಈ ಘಟನೆಯಲ್ಲಿ ಹಲವರು ಗಾಯಗೊಂಡಿದ್ದು (Injured), ಆಸ್ಪತ್ರೆಗೆ (Hospital) ದಾಖಲಾಗಿದ್ದಾರೆ. ಜನವರಿ 1 ರಂದು ಸಂಜೆ ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಸಭೆಯಲ್ಲಿ ಈ ಕಾಲ್ತುಳಿತದ ಘಟನೆ ವರದಿಯಾಗಿದೆ. ಗಾಯಾಳುಗಳು ಸರ್ಕಾರಿ ಜನರಲ್ ಆಸ್ಪತ್ರೆಯಲ್ಲಿ (ಜಿಜಿಹೆಚ್) ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಸ್ಥಳದಿಂದ ತೆರಳಿದ ಬಳಿಕ ಈ ಕಾಲ್ತುಳಿತ ಸಂಭವಿಸಿದೆ ಎಂದು ವರದಿಯಾಗಿದೆ. ಟಿಡಿಪಿ ಆಯೋಜಿಸಿದ್ದ ಸಂಕ್ರಾಂತಿ ಕಾನುಕ (ವಿಶೇಷ ಪಡಿತರ ಕಿಟ್) ವಿತರಣಾ ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ಈ ವೇಳೆ ಕಾಲ್ತುಳಿತ ಸಂಭವಿಸಿದೆ ಎಂದು ತಿಳಿದುಬಂದಿದೆ.
ಇದನ್ನು ಓದಿ: ಚಂದ್ರಬಾಬು ನಾಯ್ಡು ರೋಡ್‌ಶೋದಲ್ಲಿ ಭೀಕರ ಕಾಲ್ತುಳಿತ, 8 ಸಾವು ಹಲವರು ಗಂಭೀರ!
ಈ ಘಟನೆ ಬಗ್ಗೆ ಮಾಹಿತಿ ನೀಡಿದ ಆಂಧ್ರ ಪ್ರದೇಶದ ಗುಂಟೂರು ಎಸ್‌ಪಿ, ಗುಂಟೂರು ಜಿಲ್ಲೆಯಲ್ಲಿ ನಡೆದ ಟಿಡಿಪಿ ನಾಯಕ ಚಂದ್ರಬಾಬು ನಾಯ್ಡು ಅವರ ಸಾರ್ವಜನಿಕ ಸಭೆಯ ವೇಳೆ 3 ಜನರು ಮೃತಪಟ್ಟಿದ್ದು ಹಾಗೂ ಹಲವರು ಗಾಯಗೊಂಡಿದ್ದಾರೆ ಎಂದು ಗುಂಟೂರು ಎಸ್‌ಪಿ ಆರಿಫ್ ಹಫೀಜ್ ಮಾಹಿತಿ ನೀಡಿದ್ದಾರೆ.
ಇನ್ನು, ಒಂದು ವಾರದೊಳಗೆ ಇದು ಎರಡನೇ ಘಟನೆಯಾಗಿದ್ದು, ಇದಕ್ಕೂ ಮುನ್ನ, ಆಂಧ್ರ ಪ್ರದೇಶದ ನೆಲ್ಲೂರು ಜಿಲ್ಲೆಯ ಕಂದುಕೂರು ಎಂಬಲ್ಲಿ ಬುಧವಾರ ಸಂಜೆ ಚಂದ್ರಬಾಬು ನಾಯ್ಡು ಅವರ ರೋಡ್‌ಶೋ ವೇಳೆ ನೂಕುನುಗ್ಗಲು ಉಂಟಾಗಿ 8 ಮಂದಿ ಮೃತಪಟ್ಟು, ಐವರು ಗಂಭೀರವಾಗಿ ಗಾಯಗೊಂಡಿದ್ದರು. ರೋಡ್‌ಶೋ ವೇಳೆ ನೂಕುನುಗ್ಗಲು ಉಂಟಾಗಿ ಕಾಲುವೆಗೆ ಬಿದ್ದು ಇಬ್ಬರು ಮಹಿಳೆಯರು ಸೇರಿ 8 ಮಂದಿ ಬಲಿಯಾಗಿದ್ದರು. ಈ ಸ್ಥಳದಲ್ಲಿ ಹೆಚ್ಚು ಜನರು ಸೇರಿದ್ದರು ಎಂದು ತಿಳಿದುಬಂದಿದ್ದು, ಈ ಕಾರ್ಯಕ್ರಮದ ವೇಳೆ ಜನರ ನಡುವೆ ನೂಕುನುಗ್ಗಲು ಉಂಟಾಗಿ ಕಾಲ್ತುಳಿತ ಉಂಟಾಗಿ ತೆರೆದ ಕಾಲುವೆಗೆ ಬಿದ್ದಿದ್ದರು ಎಂದು ಆಂಧ್ರ ಪ್ರದೇಶ ಪೊಲೀಸರು ಮಾಹಿತಿ ನೀಡಿದ್ದರು.
ಬುಧವಾರ ನಡೆದ ಕಾಲ್ತುಳಿತದ ಬಳಿಕ ಆಂಧ್ರ ಪ್ರದೇಶ ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅವರು ಸಭೆಯನ್ನು ತಕ್ಷಣವೇ ರದ್ದುಗೊಳಿಸಿದರು. ಮತ್ತು ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ ₹ 24 ಲಕ್ಷ ಪರಿಹಾರವನ್ನು ಘೋಷಿಸಿದ್ದರು. ಇದೊಂದು ದುಃಖದ ಘಟನೆ. ಇದರ ಬಗ್ಗೆ ನನಗೆ ತುಂಬಾ ವಿಷಾದವಿದೆ ಎಂದೂ ಅವರು ಹೇಳಿದ್ದರು.
ಇದನ್ನೂ ಓದಿ: ಹ್ಯಾಲೋವೀನ್ ಆಚರಣೆ ವೇಳೆ ಭೀಕರ ಕಾಲ್ತುಳಿತ, 24ರ ಹರೆಯದ ನಟ-ಗಾಯಕ ಲಿ ಜಿಹಾನ್ ನಿಧನ!
ಆದರೆ, ಆಡಳಿತಾರೂಢ ವೈಎಸ್‌ಆರ್ ಕಾಂಗ್ರೆಸ್ ಚಂದ್ರಬಾಬು ನಾಯ್ಡು ಅವರನ್ನು ವೈಎಸ್‌ಆರ್ ಕಾಂಗ್ರೆಸ್ ತೀವ್ರವಾಗಿ ಟೀಕಿಸಿತ್ತು. ಆಂಧ್ರ ಪ್ರದೇಶ ಮುಖ್ಯಮಂತ್ರಿ ಜಗನ್ಮೋಹನ್ ರೆಡ್ಡಿ ಅವರು ಕಾಲ್ತುಳಿತದಲ್ಲಿ ಜನರು ಬಲಿಯಾಗಿರುವುದಕ್ಕೆ ತೆಲುಗು ದೇಶಂ ಪಕ್ಷದ ಮುಖ್ಯಸ್ಥರನ್ನು ದೂಷಿಸಿದರು. ಅವರ ಪ್ರಚಾರದ ಉನ್ಮಾದ ಈ ದುರಂತಕ್ಕೆ ಕಾರಣವಾಯಿತು ಎಂದು ಆರೋಪಿಸಿದ್ದರು. ಹಾಗೂ, ತಕ್ಷಣ ಸಾರ್ವಜನಿಕವಾಗಿ ಕ್ಷಮೆಯಾಚಿಸಬೇಕು ಎಂದೂ ಜಗನ್ಮೋಹನ್ ರೆಡ್ಡಿ ಅವರು ಒತ್ತಾಯಿಸಿದ್ದರು.
ಇದನ್ನೂ ಓದಿ: Indonesia ಫುಟ್ಬಾಲ್ ಪಂದ್ಯದ ವೇಳೆ ಕಾಲ್ತುಳಿತ: 174 ಜನರು ಬಲಿ