ಮಂಗಳವಾರ ಬೆಳಗ್ಗೆ ಒಎನ್‌ಜಿಸಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿದ್ದು, ಒಎನ್‌ಜಿಸಿ ಕಂಪನಿಯ ಮೂವರು ಉದ್ಯೋಗಿಗಳು ಹಾಗೂ ತೈಲ ಕಂಪನಿಯ ಗುತ್ತಿಗೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ.
ಮುಂಬೈ (ಜೂನ್ 28): ಒಎನ್‌ಜಿಸಿ (ONGC) ಸಂಸ್ಥೆಯ ಪವನ್ ಹನ್ಸ್ (Pawan Hans)ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ (hopper emergency landing) ವೇಳೆ ಸಂಭವಿಸಿದ ದುರಂತದಲ್ಲಿ ನಾಲ್ವರು ಸಾವಿಗೀಡಾಗಿದ್ದು, ಐವರು ಪ್ರಾಣಾಪಾಯದಿಂದ ಪಾರಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಂಗಳವಾರ ಬೆಳಗ್ಗೆ 11.45ರ ಸುಮಾರಿಗೆ ಈ ಘಟನೆ ಸಂಭವಿಸಿದೆ. ಅರಬ್ಬಿ ಸಮುದ್ರದಲ್ಲಿ (arabian sea) ತುರ್ತು ಲ್ಯಾಂಡಿಂಗ್ ಮಾಡುವ ಪ್ರಯತ್ನದಲ್ಲಿ ಇಬ್ಬರು ಪೈಲಟ್‌ಗಳು (Pilots) ಹಾಗೂ 7 ಜನ ಪ್ರಯಾಣಿಕರಿದ್ದ ಪವನ್ ಹನ್ಸ್ ಹೆಲಿಕಾಪ್ಟರ್ ಅಪಘಾತ ಕಂಡಿದೆ. ಒಎನ್‌ಜಿಸಿ ಆಫ್‌ಶೋರ್ ರಿಗ್ (ONGC OffShore Rig) ಸಾಗರ್ ಕಿರಣ್‌ನಿಂದ (Sagar Kiran) ಅರಬ್ಬಿ ಸಮುದ್ರದ ಕಡೆಯ ಒಂದು ನಾಟಿಕಲ್ ಮೈಲು ದೂರದಲ್ಲಿ ಘಟನೆ ಸಂಭವಿಸಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ. ಗಾಯಾಳುಗಳನ್ನು ಮುಂಬೈನ ನಾನಾವತಿ ಆಸ್ಪತ್ರೆಯಲ್ಲಿ (Nanavati Hospital) ಕರೆತಂದರೂ, ಅಷ್ಟರಲ್ಲಾಗಲೇ ಅವರು ಸಾವು ಕಂಡಿದ್ದರು ಎಂದು ವೈದ್ಯರು ಹೇಳಿದ್ದಾರೆ.
ಮೃತರನ್ನು ಮುಖೇಶ್ ಪಟೇಲ್ (Mukesh Patel), ವಿಜಯ್ ಮಂಡ್ಲೋಯ್ (Vijay Mandloi), ಸತ್ಯಂಬಾದ್ ಪಾತ್ರ (Satyambad Patra ) ಮತ್ತು ಸಂಜು ಫ್ರಾನ್ಸಿಸ್ (Sanju Francis) ಎಂದು ಗುರುತಿಸಲಾಗಿದೆ. ಇವರೆಲ್ಲರೂ ವಿವಿಧ ರಾಜ್ಯಗಳಿಂದ ಬಂದವರಾಗಿದ್ದಾರೆ. ಇಬ್ಬರು ಪೈಲಟ್‌ಗಳು ಮತ್ತು ಆರು ಮಂದಿ ಒಎನ್‌ಜಿಸಿ ಉದ್ಯೋಗಿಗಳು ಸೇರಿದಂತೆ ಏಳು ಮಂದಿಯೊಂದಿಗೆ ಹೆಲಿಕಾಪ್ಟರ್ ಮುಂಬೈ ಕರಾವಳಿಯಿಂದ ಸುಮಾರು 50 ನಾಟಿಕಲ್ ಮೈಲು ದೂರದಲ್ಲಿ ಅರಬ್ಬಿ ಸಮುದ್ರಕ್ಕೆ ಬಿದ್ದಿತು ಆದರೆ ಜೋಡಿಸಲಾದ ಫ್ಲೋಟರ್‌ಗಳ ಸಹಾಯದಿಂದ ತೇಲುವಲ್ಲಿ ಯಶಸ್ವಿಯಾಗಿದೆ. ಮೃತರಲ್ಲಿ ಮೂವರು ಒಎನ್‌ಜಿಸಿ ಉದ್ಯೋಗಿಗಳಾಗಿದ್ದರೆ, ನಾಲ್ಕನೆಯವರು ತೈಲ ಕಂಪನಿಯಿಂದ ಗುತ್ತಿಗೆ ಪಡೆದಿದ್ದರು.ಮಂಗಳವಾರ ಬೆಳಗ್ಗೆ ಒಎನ್‌ಜಿಸಿ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ವೇಳೆ ಅಪಘಾತ ಸಂಭವಿಸಿದ್ದು, ಒಎನ್‌ಜಿಸಿ ಕಂಪನಿಯ ಮೂವರು ಉದ್ಯೋಗಿಗಳು ಹಾಗೂ ತೈಲ ಕಂಪನಿಯ ಗುತ್ತಿಗೆಯಲ್ಲಿದ್ದ ಇನ್ನೊಬ್ಬ ವ್ಯಕ್ತಿ ಸಾವಿಗೀಡಾಗಿದ್ದಾನೆ.
ಮಂಗಳವಾರ ಬೆಳಗ್ಗೆ ಘಟನೆ ನಡೆದ ಬಳಿಕ, ರಿಗ್‌ನಿಂದ ನೌಕಾಪಡೆಯ ಹೆಲಿಕಾಪ್ಟರ್‌ನಲ್ಲಿ ನಾಲ್ವರನ್ನು ಕರೆದುಕೊಂಡು ಪವನ್ ಹನ್ಸ್ ವಾಯುನೆಲೆಗೆ ಕರೆದೊಯ್ಯಲಾಯಿತು. ಅಲ್ಲಿಂದ ನಾಲ್ಕು ಆಂಬುಲೆನ್ಸ್‌ಗಳು ಅವರನ್ನು ನಾನಾವತಿ ಆಸ್ಪತ್ರೆಗೆ ಕರೆದೊಯ್ದರು, ಅಲ್ಲಿ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಮುಂಬೈ ಪೊಲೀಸರು ಆಕಸ್ಮಿಕ ಸಾವಿನ ಕೇಸ್ ದಾಖಲಿಸಿಕೊಂಡಿದ್ದಾರೆ.
Alka Mittal : ದೇಶದ ಮಹಾರತ್ನ ONGC ಕಂಪನಿಗೆ ಅಲ್ಕಾ ಮಿತ್ತಲ್ CMD, ಇವರ ಬಗ್ಗೆ ನಿಮಗೆಷ್ಟು ಗೊತ್ತು?
ಪ್ರಾದೇಶಿಕ ಕಾಂಟಿಜೆನ್ಸಿ ಪ್ಲ್ಯಾನ್ ಅನ್ನು (ಪಶ್ಚಿಮ) (RCP) ತಕ್ಷಣವೇ ಸಕ್ರಿಯಗೊಳಿಸಲಾಗಿದೆ. ಘಟನೆಯ ಬಗ್ಗೆ ಭಾರತೀಯ ನೌಕಾಪಡೆ ಮತ್ತು ಕೋಸ್ಟ್ ಗಾರ್ಡ್‌ಗೆ ಮಾಹಿತಿ ನೀಡಲಾಗಿದೆ. ಸ್ಥಳದ ಸಮೀಪ ಒಎನ್‌ಜಿಸಿ ಹಡಗುಗಳನ್ನು ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಗಾಗಿ ಸಜ್ಜುಗೊಳಿಸಲಾಯಿತು. ತ್ವರಿತ ಕ್ರಮದೊಂದಿಗೆ, ಒಎನ್‌ಜಿಸಿ ರಿಗ್ ಸಾಗರ್ ಕಿರಣ್‌ನಿಂದ ಉಡಾವಣೆಯಾದ ಲೈಫ್ ಬೋಟ್‌ನಿಂದ ಒಬ್ಬ ವ್ಯಕ್ತಿಯನ್ನು ರಕ್ಷಿಸಲಾಯಿತು ಮತ್ತು ಒಎನ್‌ಜಿಸಿ ಸ್ಟ್ಯಾಂಡ್-ಬೈ ನೌಕೆ ಮಾಲ್ವಿಯಾ 16 ಮೂಲಕ ನಾಲ್ವರನ್ನು ರಕ್ಷಿಸಲಾಯಿತು. ಪ್ರತಿಕೂಲ ಹವಾಮಾನದ ನಡುವೆಯೂ ರಕ್ಷಣಾ ಕಾರ್ಯಾಚರಣೆಯನ್ನು ಅತ್ಯಂತ ವೇಗವಾಗಿ ನಡೆಸಲಾಯಿತು.
ವಂಚನೆ ಪ್ರಕರಣದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ್ನು ಜೈಲಿಗಟ್ಟಿದ ಪೊಲೀಸ್ ಅಧಿಕಾರಿ!
ನೌಕಾಪಡೆಯು ತನ್ನ ಹಡಗುಗಳು ಮತ್ತು ಹೆಲಿಕಾಪ್ಟರ್ ಅನ್ನು ನಿಯೋಜಿಸಿತು ಆದರೆ ಕೋಸ್ಟ್ ಗಾರ್ಡ್ ಅದರ ಹಡಗುಗಳು ಮತ್ತು ವಿಮಾನವನ್ನು ಘಟನೆ ನಡೆದ ಸ್ಥಳಕ್ಕೆ ತಿರುಗಿಸಿದ್ದವು. ನೌಕಾಪಡೆಯ ಹೆಲಿಕಾಪ್ಟರ್‌ನಿಂದ ರಕ್ಷಿಸಲ್ಪಟ್ಟ ನಾಲ್ವರನ್ನು ಬೇಸ್‌ಗೆ ಕರೆತಂದು ಆಸ್ಪತ್ರೆಗೆ ಕರೆದೊಯ್ಯಲಾಯಿತು. ದುರದೃಷ್ಟವಶಾತ್, ಅವರು ಬದುಕುಳಿಯಲಿಲ್ಲ. ಸಂಸ್ತೆಯ ನಾಲ್ವರ ಸಾವಿನ ಬಗ್ಗೆ ಒಎನ್‌ಜಿಸಿ ಸಂತಾಪ ಸೂಚಿಸುತ್ತದೆ. ಸಂತ್ರಸ್ತ ಕುಟುಂಬಕ್ಕೆ ಸಾಧ್ಯವಾದಷ್ಟು ಎಲ್ಲಾ ನೆರವು ನೀಡಲಿದ್ದು, ಘಟನೆ ಕುರಿತಾಗಿ ವಿಚಾರಣೆಗೆ ಆದೇಶಿಸಲಾಗಿದೆ ಎಂದು ಒಎನ್‌ಜಿಸಿ ಹೇಳಿದೆ.
