Asianet Suvarna News Asianet Suvarna News

ವಂಚನೆ ಪ್ರಕರಣದಲ್ಲಿ ನಿಶ್ಚಿತಾರ್ಥ ಮಾಡಿಕೊಂಡ ಹುಡುಗನ್ನು ಜೈಲಿಗಟ್ಟಿದ ಪೊಲೀಸ್ ಅಧಿಕಾರಿ!

ಜುನ್ಮೋನಿ ದಾಖಲಿಸಿದ ಎಫ್‌ಐಆರ್ ಆಧರಿಸಿ ಆರೋಪಿ ರಾಣಾ ಪೊಗಾಗ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಲಾಗಿದೆ.
 

Assam police sub inspector Junmoni Rabha Arrests Fiance Rana Pogag After Learning He is A fraud san
Author
Bengaluru, First Published May 8, 2022, 12:43 PM IST

ಗುವಾಹಟಿ (ಮೇ. 8): ಅಸ್ಸಾಂನ  (Assam) ಡೇರ್ ಡೆವಿಲ್ ಮಹಿಳಾ ಪೋಲೀಸ್ (Women Police), ಕೆಲವು ತಿಂಗಳ ಹಿಂದೆ ಶಾಸಕರೊಬ್ಬರನ್ನು (MLA) ಎದುರು ಹಾಕಿಕೊಳ್ಳುವ ಮೂಲಕ ಮಾಧ್ಯಮಗಳ ಗಮನ ಸೆಳೆದಿದ್ದರು, ಇದೀಗ ವಂಚನೆ ಆರೋಪದ ಮೇಲೆ ತಾನು ನಿಶ್ಚಿತಾರ್ಥ ಮಾಡಿಕೊಂಡ ಹುಡುಗನನ್ನೇ ಜೈಲಿಗೆ ಕಳುಹಿಸಿದ್ದಾಳೆ.

ನಿಶ್ಚಿತಾರ್ಥ ಮಾಡಿಕೊಂಡ ಬಳಿಕ ಆತ ವಂಚಕ ಎಂದು ಪೊಲೀಸ್ ಸಬ್-ಇನ್‌ಸ್ಪೆಕ್ಟರ್ ಜುನ್ಮೋನಿ ರಾಭಾ ( Junmoni Rabha) ಅವರಿಗೆ ತಿಳಿದಿತ್ತು. ಇದರ ಬೆನ್ನಲ್ಲಿಯೇ ಎಫ್ಐಆರ್ (Fಈಋ) ದಾಖಲಿಸಿದ್ದ ಜನ್ಮೋನಿ, ಆತನನ್ನು ಜೈಲಿಗೆ ಅಟ್ಟಿದ್ದಾರೆ. ಜುನ್ಮೋನಿ ದಾಖಲಿಸಿದ ಎಫ್‌ಐಆರ್ ಆಧರಿಸಿ ಆರೋಪಿ ರಾಣಾ ಪೊಗಾಗ್‌ನನ್ನು ಬಂಧಿಸಲಾಗಿದೆ. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಎರಡು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ.

ಪೊಗಾಗ್ ತಾನು ತೈಲ ಮತ್ತು ನೈಸರ್ಗಿಕ ಅನಿಲ ನಿಗಮದ (ONGC) ಅಧಿಕಾರಿ ಎಂದು ಹೇಳಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.  “ಆರೋಪಿಯು ಜುನ್ಮೋನಿಯನ್ನು ಮೊದಲು ಭೇಟಿಯಾದಾಗ, ಅವನು ತನ್ನನ್ನು ಓಎನ್ ಜಿಸಿ ಅಧಿಕಾರಿ ಎಂದು ಹೇಳಿದ್ದ.  ಜುನ್ಮೋನಿ ಹಾಗೂ ರಾಣಾ ಪೊಗಾಗ್ ಮದುವೆ ನವೆಂಬರ್‌ನಲ್ಲಿ ನಿಗದಿಯಾಗಿತ್ತು. ಆದರೆ ಒಎನ್‌ಜಿಸಿಯಲ್ಲಿ ಉದ್ಯೋಗ ಮತ್ತು ಗುತ್ತಿಗೆ ನೀಡುವುದಾಗಿ ಭರವಸೆ ನೀಡಿ ಕೆಲವರನ್ನು ವಂಚಿಸಿದ್ದಾರೆ ಎಂದು ಜನ್ಮೋನು ತಿಳಿಸಿದ್ದಾರೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಪತ್ರಕರ್ತರಿಗೆ ತಿಳಿಸಿದರು.
ಜುನ್ಮೋನಿ ಆತನ ಬ್ಯಾಗ್ ಅನ್ನು ಪರಿಶೀಲಿಸಿದ ವೇಳೆ ONGC ಯ ಕೆಲವು ನಕಲಿ ಸೀಲುಗಳು ಮತ್ತು ದಾಖಲೆಗಳನ್ನು ಸಿಕ್ಕಿವೆ. ಹಾಗಾಗಿ ಆಕೆ ನಮ್ಮಲ್ಲಿ ಎಫ್‌ಐಆರ್‌ ದಾಖಲಿಸಿದ್ದಾಳೆ. ನಾವು ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಕಳೆದ ವರ್ಷ ನಡೆದ ರಾಜ್ಯ ಚುನಾವಣೆಯ ನಂತರ ಆರೋಪಿಯ ಕುಟುಂಬ ಸದಸ್ಯರು ಆಕೆಯ ನಿವಾಸಕ್ಕೆ ಭೇಟಿ ನೀಡಿದ್ದರು, ನಂತರ ಅಕ್ಟೋಬರ್ 8 ರಂದು ಆಕೆಯ ನಿಶ್ಚಿತಾರ್ಥವಾಗಿತ್ತು. ಆಗ ಅವರು ಮಜುಲಿ ನದಿ ದ್ವೀಪ ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಜುನ್ಮೋನಿ ತಿಳಿಸಿದ್ದಾರೆ.

ಪುಟ್ಟ ಬಾಲಕ ಬರೆದ ಕ್ಷಮಾಪಣೆ ಪತ್ರ ವೈರಲ್‌

"ನಿಶ್ಚಿತಾರ್ಥದ ನಂತರ, ನಾನು ನನ್ನ ಪೋಸ್ಟಿಂಗ್ ಸ್ಥಳಕ್ಕೆ ಹಿಂತಿರುಗಿದೆ. ಅವನು (ದಕ್ಷಿಣ ಅಸ್ಸಾಂನ) ಸಿಲ್ಚಾರ್‌ನಲ್ಲಿ ಪೋಸ್ಟ್ ಆಗಿದೆ ಎಂದು ನನಗೆ ಸುಳ್ಳು ಹೇಳಿದ್ದ. ಅವನು ಕರ್ತವ್ಯಕ್ಕೆ ವರದಿ ಮಾಡಿಕೊಳ್ಳದೇ ಇದ್ದಾಗ ನಾನು ಕಾರಣಗಳನ್ನು ಕೇಳಿದ್ದೆ. ಆಗ ಆತ, ನಾನು ನಿನಗೆ ಬೇಕಿದ್ದರೆ, ಸಾಧ್ಯವಾದಷ್ಟು ನನ್ನಿಂದ ದೂರವೇ ಇರು ಎಂದಿದ್ದ' ಎಂದು ನಾಗೋನ್ ಪೊಲೀಸ್ ಮಹಿಳಾ ಸೆಲ್‌ನ ಇನ್ಸ್‌ಪೆಕ್ಟರ್ ಇನ್‌ಸ್ಪೆಕ್ಟರ್ ಆಗಿರುವ ಜುನ್ಮೋನಿ ಹೇಳಿದ್ದಾರೆ. ಈತನ ವಿಚಾರದಲ್ಲಿ ನನ್ನ ಕಣ್ತೆರೆಸಿದ ಮೂವರು ಅನಾಮಧೇಯ ವ್ಯಕ್ತಿಗಳಿಗೆ ಜುನ್ಮೋನಿ ಧನ್ಯವಾದ ಕೂಡ ಹೇಳಿದ್ದಾರೆ.
ಈ ವರ್ಷದ ಜನವರಿಯಲ್ಲಿ ಅವರು ಮಜುಲಿಯಲ್ಲಿದ್ದಾಗ, ಬಿಹ್ಪುರಿಯ ಶಾಸಕ ಅಮಿಯಾ ಕುಮಾರ್ ಭುಯಾನ್ ಅವರೊಂದಿಗಿನ ಅವರ ದೂರವಾಣಿ ಸಂಭಾಷಣೆಯು ಸಾಮಾಜಿಕ ಮಾಧ್ಯಮದಲ್ಲಿ ಸೋರಿಕೆಯಾಗಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು.

ವಾರಣಾಸಿ ಗ್ಯಾನವಾಪಿ ಮಸೀದಿ ಬಳಿ ಪುರಾತನ ಸ್ವಸ್ತಿಕ್ ಪತ್ತೆ, ಸರ್ವೇ ಸ್ಥಗಿತ!

ಮಿಶಿಂಗ್ ಬುಡಕಟ್ಟು ಜನಾಂಗದವರು ತಮ್ಮ ಪ್ರಯಾಣಕ್ಕಾಗಿ ಹೆಚ್ಚಾಗಿ ಬೋಟ್ ಗಳನ್ನು ಅವಲಂಬಿಸಿದ್ದರು. ಆದರೆ, ಈ ಬೋಟ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದರು. ಈ ವೇಳೆ ಪೊಲೀಸರಿಗೆ ಎಚ್ಚರಿಕೆ ನೀಡಿದ್ದ ಶಾಸಕ ಅಮಿಯಾ ಕುಮಾರ್, ಬುಡಕಟ್ಟು ಜನಾಂಗದವರಿಗೆ ಸಹಾಯ ಮಾಡದಂತೆ ಹೇಳಿದ್ದರು. ಇದಕ್ಕೆ ಖಡಕ್ ಆಗಿ ಉತ್ತರ ನೀಡಿದ್ದ ಜನ್ಮೋನಿ, ಚುನಾಯಿತ ಪ್ರತಿನಿಧಿಯಾಗಿ ನೀವೇ ಪೋಲೀಸರಿಗೆ ನಿಯಮ ಹಾಗೂ ನಿಬಂಧನೆಗಳನ್ನು ಮುರಿಯಿರಿ ಎಂದು ಹೇಳಬಾರದು ಎಂದಿದ್ದರು. ದೋಣಿ ಅಪಘಾತದ ನಂತರ ಬ್ರಹ್ಮಪುತ್ರದಲ್ಲಿ ಏಕ-ಎಂಜಿನ್ ಯಾಂತ್ರೀಕೃತ ದೋಣಿಗಳ ಸಂಚಾರವನ್ನು ನಿಷೇಧಿಸಲಾಗಿದೆ.

Follow Us:
Download App:
  • android
  • ios