Asianet Suvarna News Asianet Suvarna News

Alka Mittal : ದೇಶದ ಮಹಾರತ್ನ ONGC ಕಂಪನಿಗೆ ಅಲ್ಕಾ ಮಿತ್ತಲ್ CMD, ಇವರ ಬಗ್ಗೆ ನಿಮಗೆಷ್ಟು ಗೊತ್ತು?

ಸರ್ಕಾರಿ ಒಡೆತನದ ಮಹಾರತ್ನ ಕಂಪನಿ ಒಎನ್ ಜಿಸಿ
ಮುಖ್ಯಸ್ಥರಿಲ್ಲದೆ ನಾಲ್ಕು ದಿನ ಕಳೆದಿದ್ದ ಒಎನ್ ಜಿಸಿ ಕಂಪನಿ
ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿದ್ದ ಅಲ್ಕಾ ಮಿತ್ತಲ್

Alka Mittal has become the first woman to head the government owned Oil and Natural Gas Corporation Limited san
Author
Bengaluru, First Published Jan 4, 2022, 3:12 PM IST

ನವದೆಹಲಿ (ಜ.4): ಸರ್ಕಾರಿ ಒಡೆತನದ ಮಹಾರತ್ನ ಕಂಪನಿ ತೈಲ ಮತ್ತು ನೈಸರ್ಗಿಕ ಅನಿಲ ನಿಗಮ ಲಿಮಿಟೆಡ್ (Oil and Natural Gas Corporation Limited) (ಒಎನ್ ಜಿಸಿ) ಕೊನೆಗೂ ಮುಖ್ಯಸ್ಥರ ನೇಮಕವಾಗಿದೆ. ಕಳೆದ ನಾಲ್ಕು ದಿನಗಳಿಂದ ಖಾಲಿ ಉಳಿದಿದ್ದ ಚೇರ್ಮನ್ ಹಾಗೂ ವ್ಯವಸ್ಥಾಪಕ ನಿರ್ದೇಶಕ (ಸಿಎಂಡಿ) ಸ್ಥಾನಕ್ಕೆ ಅಲ್ಕಾ ಮಿತ್ತಲ್ (Alka Mittal) ಅವರನ್ನು ನೇಮಕ ಮಾಡಲಾಗಿದೆ. ಆ ಮೂಲಕ 65 ವರ್ಷಗಳ ಇತಿಹಾಸದ ಕಂಪನಿ ಹಾಗೂ ದೇಶದ ಮಹಾರತ್ನ ಕಂಪನಿಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಸಿಎಂಡಿ (Chairman and Managing Director) ಸ್ಥಾನಕ್ಕೆ ಮಹಿಳೆಯೊಬ್ಬರ ನೇಮಕವಾದಂತಾಗಿದೆ. ಒಎನ್ ಜಿಸಿಯ (ONGC) ಮಾನವ ಸಂಪನ್ಮೂಲ (HR) ವಿಭಾಗದಲ್ಲಿ ನಿರ್ದೇಶಕಿಯಾಗದ್ದ (Director) ಅಲ್ಕಾ ಮಿತ್ತಲ್ ಅವರಿಗೆ ಹೆಚ್ಚುವರಿಯಾಗಿ ಸಿಎಂಡಿ ಜವಾಬ್ದಾರಿಯನ್ನು ನೀಡಲಾಗಿದೆ.

ಡಿಸೆಂಬರ್ 31 ರಂದು ಹೆಚ್ಚುವರಿ ಸಿಎಂಡಿ ಆಗಿದ್ದ ಸುಭಾಶ್ ಕುಮಾರ್ (Subhash Kumar) ತಮ್ಮ ಹುದ್ದೆಯಿಂದ ನಿವೃತ್ತರಾದ ಬಳಿಕ ಕಳೆದ ನಾಲ್ಕು ದಿನಳಿಂದ ದೇಶದ ಅತ್ಯಂತ ಮೌಲ್ಯಯುತ ಸಾರ್ವಜನಿಕ ವಲಯದ ಕಂಪನಿಗೆ ಅಕ್ಷರಶಃ ಯಾರೊಬ್ಬರೂ ಮುಖ್ಯಸ್ಥರಿರಲಿಲ್ಲ. ಕೇಂದ್ರ ಸರ್ಕಾರ ಕೂಡ ಸುಭಾಶ್ ಕುಮಾರ್ ನಿವೃತ್ತಿಯ ಬೆನ್ನಲ್ಲೇ ತಕ್ಷಣಕ್ಕೆ ಬೇರೊಬ್ಬರ ನೇಮಕವನ್ನೂ ಘೋಷಣೆ ಮಾಡಿರಲಿಲ್ಲ. ಮಂಗಳವಾರ ಈ ಕುರಿತಾಗಿ ಟ್ವೀಟ್ ಮಾಡಿದ ಒಎನ್ ಜಿಸಿ, "ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿಯಾಗಿರುವ ಅಲ್ಕಾ ಮಿತ್ತಲ್, ಒಎನ್ ಜಿಸಿಯ ಸಿಎಂಡಿ ಆಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಇಂಧನ ಕ್ಷೇತ್ರದ ಮಹಾರತ್ನ ಕಂಪನಿಗೆ ಮುಖ್ಯಸ್ಥರಾದ ಮೊದಲ ಮಹಿಳೆ ಇವರಾಗಿದ್ದಾರೆ' ಎಂದು ಬರೆದಿದೆ.

2022ರ ಜನವರಿ 1 ರಿಂದ ಅನ್ವಯವಾಗುವಂತೆ ಮುಂದಿನ ಆರು ತಿಂಗಳವರೆಗೆ ಮಿತ್ತಲ್ ಅವರು ಹೊಸ ಹೆಚ್ಚುವರಿ ಜವಾಬ್ದಾರಿಯನ್ನು ನಿಭಾಯಿಸಲಿದ್ದಾರೆ. ಈ ಅವಧಿಯಲ್ಲಿ ಸರ್ಕಾರ ಪೂರ್ಣ ಪ್ರಮಾಣದ ಸಿಎಂಡಿ ನೇಮಕ ಮಾಡಲಿದೆ. 6 ತಿಂಗಳ ಒಳಗಾಗಿ ಪೂರ್ಣ ಪ್ರಮಾಣದ ಸಿಎಂಡಿ ನೇಮಕವಾದಲ್ಲಿ, ಆ ದಿನಕ್ಕೆ ಅಲ್ಕಾ ಮಿತ್ತಲ್ ಅವರ ಜವಾಬ್ದಾರಿ ಕೊನೆಗೊಳ್ಳಲಿದೆ ಎಂದು ಸರ್ಕಾರ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
 


2001ರಲ್ಲಿ ದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಿಂದ ( Jamia Millia Islamia) ಬ್ಯುಸಿನೆಸ್/ಕಾಮರ್ಸ್, ಕಾರ್ಪೋರೇಟ್ ಗವರ್ನೆನ್ಸ್ ವಿಭಾಗದಲ್ಲಿ ಡಾಕ್ಟರೇಟ್ ಪದವಿ ಪೂರೈಸಿರುವ ಅಲ್ಕಾ ಮಿತ್ತಲ್, 1983ರಲ್ಲಿ ಡೆಹ್ರಾಡೂನ್ ಎಂಕೆಪಿಪಿಜಿ ಕಾಲೇಜಿನಲ್ಲಿ (M.K.P.P.G College) ಅರ್ಥಶಾಸ್ತ್ರದ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಮುಗಿಸಿದ್ದಾರೆ.
2018ರಲ್ಲಿ ಒಎನ್ ಜಿಸಿಯ ಮಾನವ ಸಂಪನ್ಮೂಲ ವಿಭಾಗದಲ್ಲಿ ನಿರ್ದೇಶಕಿಯಾಗಿ ಸೇರಿದ್ದ ಅಲ್ಕಾ ಮಿತ್ತಲ್, ಒಎನ್ ಜಿಸಿ ಇತಿಹಾಸದಲ್ಲಿಯೇ ಎಚ್ ಆರ್ ವಿಭಾಗದಲ್ಲಿ ಪೂರ್ಣ ಪ್ರಮಾಣದ ನಿರ್ದೇಶಕ ಸ್ಥಾನವನ್ನು ವಹಿಸಿಕೊಂಡ ಮೊದಲ ಮಹಿಳೆ ಎನಿಸಿದ್ದರು. ಎಚ್ ಆರ್ ವಿಭಾಗದ ನಿರ್ದೇಶಿಯಾಗಿ ಸೇರುವ ಮುನ್ನ, ಒಎನ್ ಜಿಸಿ ಕಂಪನಿಯಲ್ಲಿ ಮುಖ್ಯ ಕೌಶಲ್ಯ ಅಭಿವೃದ್ಧಿ (ಸಿಎಸ್ ಡಿ) ಆಗಿ ಕಾರ್ಯ ನಿರ್ವಹಿಸಿದ್ದರು.  ಸಿಎಸ್‌ಡಿಯಾಗಿ ಅವರ ಸಾಮರ್ಥ್ಯದಲ್ಲಿ, ಚಟುವಟಿಕೆಗಳನ್ನು ಸುವ್ಯವಸ್ಥಿತಗೊಳಿಸುವ ಮತ್ತು ಒಎನ್‌ಜಿಸಿಯ ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಕೆಲಸದಲ್ಲಿ ಏಕರೂಪತೆಯನ್ನು ತಂದ ಕೀರ್ತಿ ಅವರಿಗೆ ಸಲ್ಲುತ್ತದೆ. ಈ ಅವಧಿಯಲ್ಲಿ, ಅವರು ಒಎನ್ ಜಿಸಿ ಯಲ್ಲಿ ರಾಷ್ಟ್ರೀಯ ಅಪ್ರೆಂಟಿಸ್‌ಶಿಪ್ ಪ್ರಮೋಷನ್ ಸ್ಕೀಮ್ (NAPS) ಅನ್ನು ಸಹ ಜಾರಿಗೊಳಿಸಿದ್ದಾರೆ, ಎಲ್ಲಾ ಕೆಲಸದ ಕೇಂದ್ರಗಳಲ್ಲಿ 5000 ಕ್ಕೂ ಹೆಚ್ಚು ಅಪ್ರೆಂಟಿಸ್‌ಗಳನ್ನು ತೊಡಗಿಸಿಕೊಂಡಿದ್ದಾರೆ.

 Apple Market Value: 3 ಲಕ್ಷ ಕೋಟಿ ಮೌಲ್ಯದ ಗಡಿ ಮುಟ್ಟಿದ ವಿಶ್ವದ ಮೊದಲ ಕಂಪನಿ!
ಇದಕ್ಕೂ ಮುನ್ನ ಕಾರ್ಪೊರೇಟ್ ಕಚೇರಿಯಲ್ಲಿ ಮುಖ್ಯ ಸಿಎಸ್ಆರ್ ಆಗಿಯೂ ಕೆಲಸ ಮಾಡಿದ್ದ ಅವರು, ಭಾರತದಾದ್ಯಂತ ಪ್ರಮುಖ ಸಿಎಸ್ಆರ್ ಯೋಜನೆಗಳನ್ನು ಕೈಗೊಂಡಿದ್ದರು. ಮಿತ್ತಲ್ ಅವರು ವಡೋದರಾ, ಮುಂಬೈ, ದೆಹಲಿ ಮತ್ತು ಜೋರ್ಹತ್ ಸೇರಿದಂತೆ ಪ್ರದೇಶಗಳಲ್ಲಿ ವಿವಿಧ ಸಾಮರ್ಥ್ಯಗಳಲ್ಲಿ ಎಚ್ ಆರ್-ಇಆರ್ (HR-ER) ಕಾರ್ಯಗಳನ್ನು ಹೊಂದಿದ್ದರು ಮತ್ತು 2009 ರಲ್ಲಿಒಎನ್ ಜಿಸಿಯಲ್ಲಿ ಕಾರ್ಪೊರೇಟ್ ಸಂವಹನಗಳ ಮುಖ್ಯಸ್ಥರಾಗಿದ್ದರು.

Follow Us:
Download App:
  • android
  • ios