ಬೆಂಗಳೂರು ಟೆಕ್ಕಿ ಅತುಲ್ ಸುಭಾಷ್‌ ಸಾವಿಗೆ ಶರಣಾದ ಬೆನ್ನಲೇ ಮಾಜಿ ಸಚಿವೆ ರೇಣುಕಾ ಚೌಧರಿ ವೀಡಿಯೋ ವೈರಲ್

ಬೆಂಗಳೂರಿನಲ್ಲಿ ಪತ್ನಿಯ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತು ಸಾವಿಗೀಡಾಗಿರುವ ಟೆಕ್ಕಿ ಅತುಲ್ ಸುಭಾಷ್ ಅವರ ಸಾವು ದೇಶದೆಲ್ಲೆಡೆ ತೀವ್ರ ಚರ್ಚೆಯಾಗುತ್ತಿರುವ ಬೆನ್ನಲೇ ಈಗ ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಗ್ಗೆ ಮಾತನಾಡಿರುವ ಸಂದರ್ಶನದ ತುಣುಕೊಂದು ತೀವ್ರವಾಗಿ ವೈರಲ್ ಆಗುತ್ತಿದೆ.

Former minister Renuka Chaudhary's video goes viral after Bengaluru techie Atul Subhash death

ನವದೆಹಲಿ: ಬೆಂಗಳೂರಿನಲ್ಲಿ ಪತ್ನಿಯ ಕಿರುಕುಳ ಹಾಗೂ ಕೌಟುಂಬಿಕ ದೌರ್ಜನ್ಯದಿಂದ ಬೇಸತ್ತು ಸಾವಿಗೀಡಾಗಿರುವ ಟೆಕ್ಕಿ ಅತುಲ್ ಸುಭಾಷ್ ಅವರ ಸಾವು ದೇಶದೆಲ್ಲೆಡೆ ತೀವ್ರ ಚರ್ಚೆಯಾಗುತ್ತಿರುವ ಬೆನ್ನಲೇ ಈಗ ಕೇಂದ್ರದ ಮಾಜಿ ಸಚಿವೆ ರೇಣುಕಾ ಚೌಧರಿ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಬಗ್ಗೆ ಮಾತನಾಡಿರುವ ಸಂದರ್ಶನದ ತುಣುಕೊಂದು ತೀವ್ರವಾಗಿ ವೈರಲ್ ಆಗುತ್ತಿದೆ. 2006ರ ವೀಡಿಯೋ ಇದಾಗಿದ್ದು, ಆಗಿನ ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವೆಯಾಗಿದ್ದ ರೇಣುಕಾ ಚೌಧರಿಯವರು ಪುರುಷರ ವಿರುದ್ಧದ ಕೌಟುಂಬಿಕ ದೌರ್ಜನ್ಯ ತಡೆ ಕಾಯ್ದೆಯ ಬಗ್ಗೆ ಮಾತನಾಡಿದ ವೀಡಿಯೋ ಇದಾಗಿದ್ದು ಪುರುಷರು ಕೂಡ ಸಂಕಟಪಡಲಿ (Let men suffer)ಎಂದು ಅವರು ವೀಡಿಯೋದಲ್ಲಿ ಹೇಳಿದ್ದಾರೆ.  

ಈ ವೀಡಿಯೋ ತುಣುಕು ಈಗ ವೈರಲ್ ಆಗುತ್ತಿದ್ದು, ಸಾಮಾಜಿಕ ಜಾಲತಾಣದಲ್ಲಿ ಮಾಜಿ ಸಚಿವೆಯ ಈ ಮಾತಿಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ವೀಡಿಯೋದಲ್ಲಿ ಪತ್ರಕರ್ತರೊಬ್ಬರು ರೇಣುಕಾ ಚೌಧರಿ ಅವರ ಬಳಿ ಅವರು ಪ್ರಸ್ತಾಪಿಸಲು ಬಯಸಿದ ಈ ಕೌಟುಂಬಿಕ ದೌರ್ಜನ್ಯ ಕಾಯ್ದೆಯ ಕೆಲವು ಭಾಗಗಳ ಬಗ್ಗೆ ಕೇಳುತ್ತಾರೆ, ಅವುಗಳನ್ನು ಜನ ಹೇಗೆ ದುರುಪಯೋಗಪಡಿಸಿಕೊಳ್ಳಬಹುದು ಎಂಬುದಕ್ಕೆ ಉದಾಹರಣೆಗಳನ್ನು ನೀಡಿ ಅದರ ಲೋಪದೋಷಗಳ ಬಗ್ಗೆ ವಿವರಿಸಿ ಹೇಳುತ್ತಾರೆ. ಇದಕ್ಕೆ ಉಡಾಫೆ ಉತ್ತರ ನೀಡುವ ಸಚಿವೆ ಪುರುಷರೂ ಕೂಡ ಸಂಕಷ್ಟಪಡಲಿ ಎಂದು ಹೇಳುವುದನ್ನು ವೀಡಿಯೋದಲ್ಲಿ ಕಾಣಬಹುದು. 

ಜೊತೆಗೆ ಕಾಯ್ದೆಯಲ್ಲಿ ಅವರು ಬದಲಾವಣೆಗಳನ್ನು ಬೆಂಬಲಿಸುವುದನ್ನು ಕೇಳಬಹುದು ಮತ್ತು ಮುಗ್ಧ ಪತಿ ಎಂದು ಕರೆಯಲ್ಪಡುವವರು ಮುಗ್ಧರಾಗಿದ್ದರೆ ಮತ್ತು ಅವರ ನಡವಳಿಕೆ ಮತ್ತು ಸಂಗಾತಿಯ ವರ್ತನೆ ಪರಸ್ಪರ ಗೌರವದಿಂದ ಕೂಡಿದ್ದರೆ, ಯಾವುದೇ ಆತಂಕವಿಲ್ಲ ಮತ್ತು ಪುರುಷರು ಇದ್ದಕ್ಕಿದ್ದಂತೆ ಸಂತ್ರಸ್ತರಂತೆ ಯೋಚಿಸುವ ಅಗತ್ಯವಿಲ್ಲ ಎಂದು ಅವರು ಹೇಳುತ್ತಾರೆ. 

ನಾವು ಮುಂದೆ ಹೋದಂತೆ ಈ ಕಾನೂನಿನಲ್ಲಿ ಯಾವುದೇ ತಿದ್ದುಪಡಿಗಳನ್ನು ತರಲು ಒಪ್ಪುವಿರಾ ಎಂದು ಪತ್ರಕರ್ತರು ಕೇಳಿದಾಗ, ' ನಾವು ಪ್ರಗತಿಯಲ್ಲಿರುವಾಗ ಯಾವುದೇ ಕಾನೂನಿನಲ್ಲಿ ಯಾವಾಗಲೂ ತಿದ್ದುಪಡಿಗಳನ್ನು ತರುವ  ಅಗತ್ಯವಿದೆ, ಸಮಾಜವು ಅಭಿವೃದ್ಧಿ ಹೊಂದುತ್ತದೆ ಮತ್ತು ಅಗತ್ಯಗಳು ಉದ್ಭವಿಸುತ್ತವೆ. ಆದರೆ ಯಾವುದಕ್ಕಾಗಿ? ನಾವು ಸೇತುವೆಯನ್ನು ತಲುಪುವ ಮೊದಲು ಮತ್ತು ಅದನ್ನು ದಾಟುವ ಮೊದಲು ನಾನು ತಿದ್ದುಪಡಿಗಳನ್ನು ಮಾಡಬೇಕೆಂದು ನೀವು ಬಯಸಿದರೆ, ನಾನು ಮಾಡುವುದಿಲ್ಲ ಎಂದು ಅವರು ಉತ್ತರಿಸಿದ್ದಾರೆ. 

ಇದಲ್ಲದೆ, ಕಾಯಿದೆಯು ಬದಲಾವಣೆಗೆ ಒಳಗಾಗುವ ಮೊದಲು ಪುರುಷರು ಸಂಕಷ್ಟ ಅನುಭವಿಸಬೇಕೇ ಎಂಬ ಪತ್ರಕರ್ತರ ಪ್ರಶ್ನೆಗೆ, ಅವರು ಉಢಾಪೆ ಉತ್ತರ ನೀಡಿದ್ದು, ಪುರುಷರ ಬಗ್ಗೆ ನನಗೆ  ಅನುಕಂಪವಿದೆಯೇ ಹೊರತು ಅದು ಕೆಟ್ಟ ಆಲೋಚನೆಯಲ್ಲ, ಮಹಿಳೆಯರನ್ನು ರಕ್ಷಿಸುವ ವಿಚಾರ ಬಂದಾಗ, ಕಾನೂನೇ ಇಲ್ಲದೇ ಇರುವುದಕ್ಕಿಂತ ಇರುವ ಯಾವುದೇ ಕಾನೂನು  ಉತ್ತಮವಾಗಿದೆ ಎಂದು ಅವರು ಹೇಳಿದರು. 

ಆದರೆ ಈ ವೀಡಿಯೋ ಈಗ ವೈರಲ್ ಆಗುತ್ತಿದ್ದು, ರೇಣುಕಾ ಚೌಧರಿ ಅವರ ಆಗಿನ ಹೇಳಿಕೆಗೆ ಇದು ಕೇವಲ ಹೇಳಿಕೆಯಲ್ಲ, ಇದು ಪ್ರತೀಕಾರಕ್ಕಾಗಿ ನ್ಯಾಯವನ್ನು ಹೇಗೆ ಬದಿಗೊತ್ತಲಾಗಿದೆ ಎಂಬುದರ ತಣ್ಣನೆಯ ಪ್ರತಿಬಿಂಬವಾಗಿದೆ.  ಕೌಟುಂಬಿಕ ಹಿಂಸಾಚಾರವು ನಿಜ, ಮತ್ತು ಮಹಿಳೆಯರ ಸುರಕ್ಷತೆಯು ನಿರ್ಣಾಯಕವಾಗಿದೆ, ಆದರೆ ನ್ಯಾಯವನ್ನು ತ್ಯಾಗ ಮಾಡಬೇಕೇ? ಎಂದು ಪ್ರಶ್ನೆ ಮಾಡಿದ್ದಾರೆ. 

ಓರ್ವ ಚಿಕ್ಕ ಹುಡುಗನ ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಹಾಗೂ ಜೊತೆಗೆ ಆತನ ತಂದೆಯನ್ನು ಅಂತ್ಯವಿಲ್ಲದ ಕಾನೂನು ಸಮರಕ್ಕೆ ಎಳೆಯಲಾಗಿದೆ ಎಂದಾದರೆ ಊಹಿಸಿ ಅದು ಹೇಗೆ ಪ್ರಗತಿಯಾಗುತ್ತದೆ. ಕಾನೂನುಗಳು ಯಾವಾಗಲೂ ಎಲ್ಲರನ್ನೂ ಒಂದು ಮಾಡಬೇಕು. ದೂರ ಮಾಡಬಾರದು ಸರ್ಕಾರವೂ ಪ್ರತಿಯೊಬ್ಬರಿಗೂ ನ್ಯಾಯ ಒದಗಿಸಬೇಕು ಕೇವಲ ಕೆಲ ವ್ಯಕ್ತಿಗಳಿಗೆ ಮಾತ್ರ ಅಲ್ಲ, ಆದರೆ ಅವರಿನ್ನೂ ಅದನ್ನು ಮಾಡಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಇಂತಹ ಕಾನೂನುಗಳನ್ನು ತರುವುದು ತುಂಬಾ ಸುಲಭ, ಆದರೆ ಇವುಗಳ ದುರುಪಯೋಗವನ್ನು ತಡೆಯುವುದು ಕಷ್ಟವೇ? ಪ್ರಸ್ತುತ ಸರ್ಕಾರವು ಈ ಕಾನೂನುಗಳಿಗೆ ರಕ್ಷಣಾತ್ಮಕ ಕ್ರಮಗಳನ್ನು ಏಕೆ ಸೇರಿಸುತ್ತಿಲ್ಲ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ. 

ಕೆಲ ದಿನಗಳ ಹಿಂದೆ ಉತ್ತರ ಪ್ರದೇಶದ ಜೌನ್‌ಪುರ ಮೂಲದ ಹಾಗೂ ಬೆಂಗಳೂರಿನಲ್ಲಿ ಟೆಕ್ಕಿಯಾಗಿ ಕೆಲಸ ಮಾಡುತ್ತಿದ್ದ ಅತುಲ್ ಸುಭಾಷ್‌ ಅವರು ಪತ್ನಿಯಿಂದ ಕಿರುಕುಳದ ಆರೋಪ ಮಾಡಿ ಸಾವಿಗೆ ಶರಣಾಗಿದ್ದರು. ಸಾಯುವುದಕ್ಕೂ ಮೊದಲು ಅವರು 24 ಪುಟಗಳ ಡೆತ್‌ನೋಟ್ ಬರೆದಿಟ್ಟಿದ್ದರು. ಜೊತೆಗೆ ಜಸ್ಟೀಸ್‌ ಈಸ್‌ ಡ್ಯೂ ಎಂದು ಪೇಪರ್‌ಅನ್ನು ಬರೆದು ಅದನ್ನು ತನ್ನ ಟಿ-ಶರ್ಟ್‌ ಮೇಲೆ ಅಂಟಿಸಿಕೊಂಡು ಸಾವಿಗೆ ಶರಣಾಗಿದ್ದರು. .ಸಾವಿಗೂ ಮುನ್ನ ತನ್ನ ಮನೆಯಲ್ಲಿಯೇ ಒಂದುಗಂಟೆಗೂ ಹೆಚ್ಚಿನ ಕಾಲ ಅವರು ವಿಡಿಯೋ ರೆಕಾರ್ಡ್‌ ಮಾಡಿದ್ದು, ಎಲ್ಲವನ್ನೂ ಸಂಪೂರ್ಣವಾಗಿ ವಿವರಿಸಿದ್ದಾರೆ. ಅದರಲ್ಲಿ ಪತ್ನಿ ನೀಡಿದ ಕಮಾನಸಿಕ ಕಿರುಕುಳ ಹಾಗೂ ಮಗನ ಮೇಲಿನ ಪ್ರಿತಿ ಹಾಗೂ ಕೌಟುಂಬಿಕ ದೌರ್ಜನ್ಯ ಕಾಯ್ದೆಯಿಂದ ಪುರುಷರು ಹಾಗೂ ಅವರ ಕುಟುಂಬದವರು ಅನುಭವಿಸುತ್ತಿರುವ ಗೋಳನ್ನು ಅವರು ಸಂಪೂರ್ಣವಾಗಿ ತಮ್ಮ ಡೆತ್‌ನೋಟ್‌ನಲ್ಲಿ ವಿವರಿಸಿದ್ದರು. 

ಇದನ್ನೂ ಓದಿ:Justice is Due ಎಂದು ಬರೆದು ಸಾವಿಗೆ ಶರಣಾದ ಯುವಕನ 12 ಕೊನೆಯ ಆಸೆ, ಈಡೇರಿಸುತ್ತಾ ನಮ್ಮ ಸಮಾಜ?

ಇದನ್ನೂ ಓದಿ:ಬೆಂಗಳೂರಿನಲ್ಲಿ ಉತ್ತರ ಭಾರತದ ಟೆಕ್ಕಿಯ ದುರಂತ ಅಂತ್ಯ; ಹೆಂಡತಿಯ ಕರಾಳತೆ ಬಿಚ್ಚಿಟ್ಟ ಡೆತ್ ನೋಟ್!
 

 

Latest Videos
Follow Us:
Download App:
  • android
  • ios