Asianet Suvarna News Asianet Suvarna News

Forest Survey report ಪರಿಸರ ಸಂರಕ್ಷಣೆಯಲ್ಲಿ ಭಾರತ, ಕೆಳೆದೆರಡು ವರ್ಷದಲ್ಲಿ ಮರ, ಅರಣ್ಯ ವ್ಯಾಪ್ತಿ ಹೆಚ್ಚಳ!

  • ಕರ್ನಾಟಕದಲ್ಲಿ 3 ಚದರ ಕಿ.ಮೀ ಮ್ಯಾಂಗ್ರೋವ್ ಅರಣ್ಯ ಹೆಚ್ಚಳ
  • ಕಾಡು ಮತ್ತು ಮರಗಳ ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳ
  • ದೇಶದ ಅತೀ ಹೆಚ್ಚು ಅರಣ್ಯ ಹೊಂದಿದ ರಾಜ್ಯ ಮಧ್ಯಪ್ರದೇಶ
Forest Survey report 2021 total forest and tree cover of india increase of 2261 sq km last 2 years ckm
Author
Bengaluru, First Published Jan 13, 2022, 6:58 PM IST

ನವದೆಹಲಿ(ಜ.13): ಪರಿಸರ ಸಂರಕ್ಷಣೆಗೆ ಭಾರತ ಸೇರಿದಂತೆ ಎಲ್ಲಾ ರಾಷ್ಟ್ರಗಳು ತೀವ್ರ ಹೆಣಗಾಡುತ್ತಿದೆ. ಅರಣ್ಯಗಳು ನಾಶವಾಗುತ್ತಿದೆ. ಅಭಿವೃದ್ಧಿ ಹೆಸರಿನಲ್ಲಿ ಮರಗಳನ್ನು ಕಡಿಯಲಾಗುತ್ತಿದೆ. ಇದು ಭಾರತ ಮಾತ್ರವಲ್ಲ ಬಹುತೇಕ ಎಲ್ಲಾ ದೇಶಗಳು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಇದರ ಪರಿಣಾಮ ವಿಶ್ವವೇ ಸಮತೋಲನ ಕಳೆದುಕೊಳ್ಳುತ್ತಿದೆ. ಇದರ ನಡುವೆ ಪರಿಸರ ಸಂರಕ್ಷಣೆಯಲ್ಲಿ ಭಾರತ ಮಹತ್ವದ ಸಾಧನೆ ಮಾಡಿದೆ. ಕಳೆದೆರಡು ವರ್ಷದಲ್ಲಿ ದೇಶದಲ್ಲಿನ ಮರಗಳು, ಅರಣ್ಯ(forest and tree cover) ವ್ಯಾಪ್ತಿಯಲ್ಲಿ 2,261 ಚದರ ಕಿ.ಮೀ ಹೆಚ್ಚಳವಾಗಿದೆ.

ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಇಂದು(ಜ.13) ಇಂಡಿಯಾ ಸ್ಟೇಟ್ ಆಫ್ ಫಾರೆಸ್ಟ್ ರಿಪೋರ್ಟ್ 2021 ಬಿಡುಗಡೆ(Forest Survey report 2021) ಮಾಡಿದ್ದಾರೆ. ಈ ವರದಿ ದೇಶದಲ್ಲಿನ ಅರಣ್ಯ ಸಂಪತ್ತು ಹಾಗೂ ಮರಗಳ ಕುರಿತು ಮಾಹಿತಿ ನೀಡಲಿದೆ. ಈ ಸಂಶೋಧನಾ ವರದಿಯಲ್ಲಿ ಭಾರತದಲ್ಲಿರುವ ಒಟ್ಟು ಅರಣ್ಯ ಹಾಗೂ ಮರಗಳ ವ್ಯಾಪ್ತಿ 90.9 ಮಿಲಿಯನ್ ಹೆಕ್ಟೇರ್. ಇದು ದೇಶದ ಒಟ್ಟು ಭೋಗೋಳಿಕ ಪ್ರದೇಶದ ಶೇಕಡಾ  24.62 ರಷ್ಟಿದೆ. 2019ರಲ್ಲಿ ಬಿಡುಗಡೆಯಾದ ವರದಿಗೆ ಹೋಲಿಸಿದರೆ 2021ರ ವೇಳೆಗೆ ಭಾರತದಲ್ಲಿ  2,261 ಚದರ ಕಿ.ಮೀ ಅರಣ್ಯ ಸಂಪತ್ತು ಹೆಚ್ಚಳವಾಗಿದೆ.

Deemed Forests: ರಾಜ್ಯದಲ್ಲಿ ಡೀಮ್ಡ್ ಅರಣ್ಯ ಮರು ಸಮೀಕ್ಷೆ‌ ನಡೆಸಲು ಡೀಸಿಗಳಿಗೆ ಸಿಎಂ ಸೂಚನೆ!

ಈ ಕೊಡುಗೆಯಲ್ಲಿ ಕರ್ನಾಟಕದ(Karnataka) ಪಾತ್ರವೂ ಪ್ರಮುಖವಾಗಿದೆ. ಕಾರಣ ದೇಶದಲ್ಲಿನ ಮ್ಯಾಂಗ್ರೋವ್ ಫಾರೆಸ್ಟ್(mangrove Forest Cover) ಹೆಚ್ಚಳದಲ್ಲಿ ಕರ್ನಾಟಕ ಪ್ರಮುಖ ಪಾತ್ರ ನಿರ್ವಹಿಸಿದೆ. ದೇಶದ ಹಿನ್ನೀರು ಪ್ರದೇಶದಲ್ಲಿನ ಮ್ಯಾಂಗ್ರೋವ್ ಫಾರೆಸ್ಟ್ ಹೊದಿಕೆಯಲ್ಲಿ 17 ಚದರ ಕಿಮೀ ಹೆಚ್ಚಳವಾಗಿದೆ. 2021ರಲ್ಲಿ ದೇಶದ ಮ್ಯಾಂಗ್ರೋವ್ ಫಾರೆಸ್ಟ್ ವ್ಯಾಪ್ತಿ 4,992 ಚದರ ಕಿ.ಮೀ. ಇದಕ್ಕೆ ಪ್ರಮುಖ ಮೂರು ರಾಜ್ಯಗಳು ಕಾರಣವಾಗಿದೆ. ಒಡಿಶಾದಲ್ಲಿ 8 ಚದರ ಕಿ.ಮೀ, ಮಹಾರಾಷ್ಟ್ರದಲ್ಲಿ 4 ಚದರ ಕಿ.ಮೀ ಹಾಗೂ ಕರ್ನಾಟಕದಲ್ಲಿ 3 ಚದರ ಕಿ.ಮೀ ಹೆಚ್ಚಳವಾಗಿದೆ. ಇನ್ನು ಕರ್ನಾಟಕದ ಅರಣ್ಯ ಸಂಪತ್ತು ಹಾಗೂ ಮರಗಳ ವ್ಯಾಪ್ತಿಯಲ್ಲಿ ಗಣನೀಯ ಏರಿಕೆಯಾಗಿಲ್ಲ. ಆದರೆ ಪ್ರಗತಿ ಸಾಧಿಸಿದೆ. 

ದೇಶದಲ್ಲಿ ದಟ್ಟ ಅರಣ್ಯಗಳ ವ್ಯಾಪ್ತಿ ಹೆಚ್ಚಳದಲ್ಲಿ ಮೂರು ರಾಜ್ಯಗಳು ಮುಂಚೂಣಿಯಲ್ಲಿದೆ. ಆಂಧ್ರ ಪ್ರದೇಶದಲ್ಲಿ ದಟ್ಟ ಅರಣ್ಯ ವ್ಯಾಪ್ತಿ 647 sq km ಹೆಚ್ಚಳವಾಗಿದೆ. ಇನ್ನು ತೆಲಂಗಾಣದಲ್ಲಿ 632 sq km ದಟ್ಟ ಅರಣ್ಯ ವ್ಯಾಪ್ತಿ ಹೆಚ್ಚಳವಾಗಿದೆ. ಇನ್ನು ಒಡಿಶಾದಲ್ಲಿ 537 sq km ದಟ್ಟ ಅರಣ್ಯ ವ್ಯಾಪ್ತಿ ಹೆಚ್ಚಳವಾಗಿದೆ. ದೇಶದಲ್ಲಿ ಅತೀ ಹೆಚ್ಚು ಅರಣ್ಯ ಸಂಪತ್ತು ಹೊಂದಿದ ರಾಜ್ಯದಳ ಪೈಕಿ ಮಧ್ಯ ಪ್ರದೇಶ ಮೊದಲ ಸ್ಥಾನದಲ್ಲಿದೆ. ಇನ್ನು ಆರುಣಾಚಲ ಪ್ರದೇಶ, ಚತ್ತೀಸಘಡ, ಒಡಿಶಾ ಹಾಗೂ ಮಹಾರಾಷ್ಟ್ರ ನಂತರ ಸ್ಥಾನದಲ್ಲಿದೆ.

ಕಾಲುವೆಗಿಳಿದ ಆನೆಗಳು... ಮೇಲೆ ಬರಲಾಗದೇ ಗಜಪಡೆಯ ಪಾಡು... ವಿಡಿಯೋ ವೈರಲ್

17 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಭೌಗೋಳಿಕ ಪ್ರದೇಶದ ಶೇಕಡಾ 33 ರಷ್ಟು ಅರಣ್ಯ ವ್ಯಾಪ್ತಿ ಹೊಂದಿದೆ. ಲಕ್ಷದ್ವೀಪ, ಮಿಜೋರಾಮ್, ಅಂಡಮಾನ್ ನಿಕೋಬಾರ್, ಅರುಣಾಚಲ ಪ್ರದೇಶ ಹಾಗೂ ಮೇಘಾಲಯ ಭೌಗೋಳಿಕ ಪ್ರದೇಶದ ಶೇಕಡಾ 75 ರಷ್ಟು ಅರಣ್ಯ ವ್ಯಾಪ್ತಿ ಹೊಂದಿದೆ. 

ಜಾಗತಿಕ ತಾಪಮಾನ ಹೆಚ್ಚಳ, ಪಾಕೃತಿಕ ವಿಕೋಪ ಸೇರಿದಂತೆ ಹಲವು ಸಮಸ್ಯೆಗಳು ಇದೇ ಪರಿಸರ ಅಸಮತೋಲದಿಂದ ಬರುತ್ತಿದೆ. ಈಗಾಗಲೇ ಹಲವು ಶೃಂಗಸಭೆಗಳಲ್ಲಿ ಜಾಗತಿಕ ತಾಪಮಾನ ಕಡಿಮೆ ಮಾಡಲು, ಹೆಚ್ಚಾಗುತ್ತಿರುವ ಮಾಲಿನ್ಯ ತಡೆಗಟ್ಟಲು ಅವಿರತ ಶ್ರಮಗಳು ನಡೆಯುತ್ತಿದೆ. ಇದರ ನಡುವೆ ಭಾರತದ ಅರಣ್ಯ ಸಂಪತ್ತು ಹೆಚ್ಚಳ ಕೇಂದ್ರ ಸರ್ಕಾರದ ಪ್ರಯತ್ನಕ್ಕೆ ಮತ್ತಷ್ಟು ವೇಗ ನೀಡಲಿದೆ

Follow Us:
Download App:
  • android
  • ios