Asianet Suvarna News Asianet Suvarna News

Foreign Fund: ಬೆಂಗ್ಳೂರಿನ ಆಕ್ಸ್‌ಫಾಮ್‌ ಸೇರಿ 6,000ಕ್ಕೂ ಹೆಚ್ಚು ಸಂಸ್ಥೆಗಳ ವಿದೇಶಿ ದೇಣಿಗೆ ಲೈಸೆನ್ಸ್‌ ರದ್ದು

*  ಬಹುತೇಕ ಸಂಸ್ಥೆಗಳು ನವೀಕರಣಕ್ಕೆ ಅರ್ಜಿ ಸಲ್ಲಿಸದೆ ರದ್ದು
*  ಅವಧಿ ಮುಗಿದ ಬಗ್ಗೆ ಸಂಸ್ಥೆಗಳಿಗೆ ಸರ್ಕಾರದಿಂದ ಅಲರ್ಟ್‌
*  179 ಎನ್‌ಜಿಎಒಗಳ ಮಾನ್ಯತೆಯು ಸರ್ಕಾರದಿಂದಲೇ ರದ್ದು
 

Foreign Funding License of More Than 6000 Organizations Canceled grg
Author
Bengaluru, First Published Jan 2, 2022, 9:26 AM IST

ನವದೆಹಲಿ(ಜ.02): ಬೆಂಗಳೂರಿನಲ್ಲಿ ಭಾರತೀಯ ಘಟಕದ ಕೇಂದ್ರ ಕಚೇರಿ ಹೊಂದಿರುವ ಆಕ್ಸ್‌ಫಾಮ್‌,ಭಾರತೀಯ ವೈದ್ಯಕೀಯ ಸಂಸ್ಥೆ (IMA), ಐಐಟಿ ದೆಹಲಿ, ಜಾಮಿಯಾ ಮಿಲಿಯಾ ಇಸ್ಲಾಮಿಯಾ, ನೆಹರು ಮೆಮೋರಿಯಲ್‌ ಮ್ಯೂಸಿಯಂ ಮತ್ತು ಗ್ರಂಥಾಲಯ ಸೇರಿದಂತೆ 6000ಕ್ಕೂ ಹೆಚ್ಚು ಸರ್ಕಾರೇತರ ಲಾಭರಹಿತ ಸಂಸ್ಥೆಗಳ (NGO) ವಿದೇಶಿ ದೇಣಿಗೆ ಪಡೆಯುವ ಲೈಸೆನ್ಸ್‌ ರದ್ದುಪಡಿಸಲಾಗಿದೆ.

ಈ ಪೈಕಿ 5789 ಎನ್‌ಜಿಒಗಳು(NGO's) ನವೀಕರಣಕ್ಕೆ ಅರ್ಜಿ ಸಲ್ಲಿಸದ ಕಾರಣ ಅವುಗಳ ಮಾನ್ಯತೆ ರದ್ದಾಗಿದ್ದರೆ, 179 ಎನ್‌ಜಿಒಗಳ ಮಾನ್ಯತೆಯನ್ನು ಸರ್ಕಾರವೇ ರದ್ದುಗೊಳಿಸಿದೆ. ಆಕ್ಸ್‌ಫಾಮ್‌ ಇಂಡಿಯಾ(Oxfam India) ಭಾರತದಲ್ಲಿ(India) ದಲಿತರು(Dalit), ಮಹಿಳೆಯರು(Woman), ಮುಸ್ಲಿಮರ(Muslim) ಏಳ್ಗೆಗೆ ಕುರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದೆ. ಬ್ರಿಟನ್‌(Britain) ಮೂಲದ ಈ ಸಂಸ್ಥೆ ಬಡತನ ಕುರಿತ ಜಾಗತಿಕ ವರದಿಯನ್ನು ಪ್ರತಿ ವರ್ಷ ಬಿಡುಗಡೆ ಮಾಡುತ್ತದೆ.

ಅತ್ತ ಮಿಷನರಿ, ಇತ್ತ ಜಿಹಾದಿ...: ಹಿಂದೂ ಧರ್ಮಕ್ಕೆ ಏನೀ ಆತಂಕ!

ವಿದೇಶಿ ದೇಣಿಗೆ ನಿರ್ಬಂಧ ಕಾಯ್ದೆ (FCRA) ಯ ಅನುಸಾರ ಯಾವುದೇ ಸಂಸ್ಥೆಗಳು ಅಥವಾ ಎನ್‌ಜಿಒಗಳು ವಿದೇಶಿ ದೇಣಿಗೆ ಪಡೆಯಲು ಪರವಾನಗಿ ಹೊಂದಿರುವುದು ಮತ್ತು ಅವಧಿಯ ನಂತರ ಅದನ್ನು ನವೀಕರಣ ಮಾಡುವುದು ಕಡ್ಡಾಯ. ಈ ಹಿನ್ನೆಲೆಯಲ್ಲಿ ಮಾನ್ಯತೆ ಅವಧಿ ಮುಗಿದಿದ್ದ ಎನ್‌ಜಿಒಗಳಿಗೆ ಸರ್ಕಾರ ಪೂರ್ವ ಮಾಹಿತಿ ರವಾನಿಸಿತ್ತು. ಅದರ ಹೊರತಾಗಿಯೂ ಅವುಗಳಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಅವುಗಳಿಗೆ ನೀಡಿದ್ದ ಮಾನ್ಯತೆ ಸ್ವಯಂ ರದ್ದಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ(Ministry of Home Affairs) ಹೇಳಿದೆ.

ಶುಕ್ರವಾರದವರೆಗೆ ದೇಶದಲ್ಲಿ 22,762 ಎನ್‌ಜಿಒಗಳು ಎಫ್‌ಸಿಆರ್‌ಎ ಅಡಿ ನೋಂದಣಿಯಾಗಿದ್ದವು. ಪ್ರಸ್ತುತ ಅವುಗಳ ಸಂಖ್ಯೆ 16,829ಕ್ಕೆ ಕುಸಿದಿದೆ.

ಅತಿದೊಡ್ಡ ಮತಾಂತರ ದಂಧೆ ಪತ್ತೆ: ಇಸ್ಲಾಂಮಿಕ್‌ ವಿದ್ವಾಂಸ ಕಲೀಂ ಸಿದ್ಧಿಕಿ ಬಂಧನ!

ಲಖನೌ: ಮತಾಂತರ(Religious Conversion) ವಿಷಯ ದೇಶಾದ್ಯಂತ ದೊಡ್ಡ ಮಟ್ಟದಲ್ಲಿ ವಿವಾದ ಸೃಷ್ಟಿಸಿರುವ ಹೊತ್ತಿನಲ್ಲೇ, ಉತ್ತರಪ್ರದೇಶದ(Uttar Pradesh) ಅತಿದೊಡ್ಡ ಧಾರ್ಮಿಕ ಮತಾಂತರ ದಂಧೆಯೊಂದನ್ನು ಪತ್ತೆ ಹಚ್ಚಿರುವುದಾಗಿ ರಾಜ್ಯದ ಭಯೋತ್ಪಾದನಾ ನಿಗ್ರಹ ಪಡೆ ಘೋಷಿಸಿದೆ. ಅಲ್ಲದೆ ಈ ಸಂಬಂಧ ಇಸ್ಲಾಂಮಿಕ್‌ ವಿದ್ವಾಂಸ ಮೌಲಾನಾ ಕಲೀಮ್‌ ಸಿದ್ಧಿಕಿ (Maulana Kaleem Siddiqui ) ಎಂಬಾತನನ್ನು 2020 ರ ಸೆ.23 ರಂದು ರಾತ್ರಿ ಮೇರಠ್‌(Meerut)ನಲ್ಲಿ ಬಂಧಿಸಿರುವುದಾಗಿ ತಿಳಿಸಿತ್ತು. 

ಬಂಧಿತ ಸಿದ್ಧಿಕಿ ತನ್ನ ಟ್ರಸ್ಟ್‌, ಎನ್‌ಜಿಒಗಳಿಗೆ ವಿದೇಶಗಳಿಂದ ಭಾರೀ ಪ್ರಮಾಣದ ದೇಣಿಗೆ ಸಂಗ್ರಹಿಸುತ್ತಿದ್ದ. ಬಳಿಕ ಆ ಹಣವನ್ನು ಲಕ್ಷಾಂತರ ಜನರನ್ನು ಇಸ್ಲಾಂಗೆ ಮತಾಂತರ ಮಾಡಲು ಬಳಸುತ್ತಿದ್ದ ಎಂಬ ವಿಷಯ ತಿಳಿದುಬಂದಿದೆ ಎಂದು ಎಟಿಎಸ್‌ ಮಹಾ ನಿರ್ದೇಶಕ ಜಿ.ಕೆ.ಗೋಸ್ವಾಮಿ ತಿಳಿಸಿದ್ದರು.  

ಯಾರು ಈ ಸಿದ್ದಿಕಿ

ಈಗ ಮುಜಫ್ಫರ್‌ ಜಿಲ್ಲೆಯ ನಿವಾಸಿ. ಬಿಎಸ್‌ಇ ಪದವೀಧರ. ಇಸ್ಲಾಮಿಕ ವಿಧ್ವಾಂಸನಾಗಿರುವ ಈತ ಜಾಮಿಯಾ ಇಮಾಮ್‌ ವಲ್ಲಿಯುಲ್ಲಾ ಟ್ರಸ್ಟ್‌ ಮತ್ತು ಹಲವು ಎನ್‌ಜಿಒಗಳನ್ನು ನಡೆಸುತ್ತಿದ್ದಾನೆ. ಪಶ್ಚಿಮ ಉತ್ತರ ಪ್ರದೇಶದಲ್ಲಿ ಅತ್ಯಂತ ಪ್ರಭಾವಿ ಇಸ್ಲಾಮಿಕ್‌ ಧಾರ್ಮಿಕ ನಾಯಕ.

ಮಕ್ಕಳಿಗಾಗಿ ವಿದೇಶದಿಂದ ದೇಣಿಗೆ ಪಡೆದು ಬಳಸದ ಕರ್ನಾಟಕದ 45 ಎನ್‌ಜಿಒಗಳು!

ಮತಾಂತರ ಹೇಗೆ?

ಈತ ತನ್ನ ಟ್ರಸ್ಟ್‌ಗಳಿಗೆ ವಿದೇಶಗಳಿಂದ ಕೋಟ್ಯಂತರ ರು. ದೇಣಿಗೆ ಸಂಗ್ರಹಿಸುತ್ತಿದ್ದ. ದಾರುಲ್‌ ಉಲೂಂ ಸೇರಿದಂತೆ ಹಲವು ದೇಶಿ ಮತ್ತು ವಿದೇಶಿ ಸಂಸ್ಥೆಗಳು ಈತನಿಗೆ ದೇಣಿಗೆ ನೀಡುತ್ತಿದ್ದವು. ಈತನ ಸಂಗಡಿಗರು ಕೆಳವರ್ಗದ ಬಡ ಹಿಂದೂಗಳನ್ನು ಗುರುತಿಸಿ ಅವರಿಗೆ ಆಮಿಷ ಒಡ್ಡಿ ಇಸ್ಲಾಂ ಧರ್ಮಕ್ಕೆ ಮತಾಂತರ(Conversion) ಮಾಡುತ್ತಿದ್ದರು. ಇದಕ್ಕಾಗಿ ಹಲವು ಮದ್ರಸಾಗಳಿಗೆ ಭಾರೀ ಪ್ರಮಾಣದಲ್ಲಿ ಹಣವನ್ನು ನೀಡಲಾಗುತ್ತಿತ್ತು. ಉತ್ತರಪ್ರದೇಶ, ಮಧ್ಯಪ್ರದೇಶ, ಛತ್ತೀಸ್‌ಗಢ, ಪಂಜಾಬ್‌, ಹರ್ಯಾಣ, ಒಡಿಶಾ ಸೇರಿ ಹಲವು ರಾಜ್ಯಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಜನರನ್ನು ಈತ ಇಸ್ಲಾಂಗೆ(Islam) ಮತಾಂತರ ಮಾಡಿರುವ ಶಂಕೆ ಇದೆ.

ಪತ್ತೆ ಹೇಗೆ?

ಮೂಗ ಮತ್ತು ಕಿವುಡ ಮಕ್ಕಳನ್ನು ಇಸ್ಲಾಂಗೆ ಮತಾಂತರ ಮಾಡುವ ದಂಧೆಯೊಂದು ಕಳೆದ ಜೂನ್‌ನಲ್ಲಿ ಪತ್ತೆಯಾಗಿತ್ತು. ಆ ಪ್ರಕರಣದಲ್ಲಿ ಉಮರ್‌ ಗೌತಮ್‌ ಸೇರಿದಂತೆ ಹಲವರನ್ನು ದೆಹಲಿಯಲ್ಲಿ ಬಂಧಿಸಲಾಗಿತ್ತು. ಇವರಿಗೂ ವಿದೇಶಗಳಿಂದ ಕೋಟ್ಯಂತರ ಹಣ ಮತಾಂತರಕ್ಕೆ ರವಾನೆಯಾಗಿತ್ತು. ವಿಚಾರಣೆ ವೇಳೆ ಆತ ಸಿದ್ಧಿಕಿ(Maulana Kaleem Siddiqui) ಹೆಸರು ಬಹಿರಂಗಪಡಿಸಿದ್ದ. ಅಂದಿನಿಂದ ಸಿದ್ಧಿಕಿ, ಆತನ ಚಲನವಲನ, ಹಣಕಾಸು ಚಟುವಟಿಕೆ ಮೇಲೆ ಎಟಿಎಸ್‌ ಕಣ್ಣಿಟ್ಟಿತ್ತು. ರಹಸ್ಯ ತನಿಖೆಯಲ್ಲಿ ಆತನ ವ್ಯವಸ್ಥಿತ ಮತ್ತು ಸಂಘಟಿತ ಮತಾಂತರ ದಂಧೆ ಖಚಿತಪಟ್ಟ ಹಿನ್ನೆಲೆಯಲ್ಲಿ ಮಂಗಳವಾರ ಆತನನ್ನು ಮೇರಠ್‌ನಲ್ಲಿ ಬಂಧಿಸಲಾಯ್ತು.
 

Follow Us:
Download App:
  • android
  • ios