ನವದೆಹಲಿ(ನ.19): ಕರ್ನಾಟಕದಲ್ಲಿ 45 ಸೇರಿ ದಕ್ಷಿಣ ಭಾರತದ 600 ಶಿಶುಪಾಲನಾ ಗೃಹಗಳ ಪ್ರತಿ ಮಕ್ಕಳಿಗೆ ವಿದೇಶದಿಂದ ಪ್ರತಿ ವರ್ಷಕ್ಕೆ ಸರಾಸರಿ 6 ಲಕ್ಷ ರು. ದೇಣಿಗೆ ಬರುತ್ತಿದೆ. ಆದರೆ ಈ ಶಿಶುಗೃಹಗಳನ್ನು ನಡೆಸುವ ಎನ್‌ಜಿಒಗಳು ಬರುವ ಹಣವನ್ನು ಪೂರ್ತಿ ಖರ್ಚು ಮಾಡುತ್ತಿಲ್ಲ ಎಂಬ ವಿಚಾರ ಬೆಳಕಿಗೆ ಬಂದಿದೆ.

ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಈ ಕುರಿತು ವರದಿ ಸಿದ್ಧಪಡಿಸಿದ್ದು, ಕೇಂದ್ರ ಮಹಿಳಾ ಹಾಗೂ ಮಕ್ಕಳ ಅಭಿವೃದ್ಧಿ ಸಚಿವಾಲಯಕ್ಕೆ ಕಳಿಸಿದೆ. ಇಂಥ ಎನ್‌ಜಿಒ (ಸ್ವಯಂಸೇವಾ ಸಂಸ್ಥೆ) ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದೆ.

ಉಗ್ರರಿಗೆ ಎನ್‌ಜಿಒ ಹಣ: ಕಾಶ್ಮೀರ, ಬೆಂಗ್ಳೂರಲ್ಲಿ ದಾಳಿ

ತಮಿಳುನಾಡಿನಲ್ಲಿ 274, ಆಂಧ್ರಪ್ರದೇಶದಲ್ಲಿ 145, ಕೇರಳದಲ್ಲಿ 107, ಕರ್ನಾಟಕದ 45 ಹಾಗೂ ತೆಲಂಗಾಣದ 67 ಶಿಶುಪಾಲನಾ ಗೃಹಗಳಲ್ಲಿ ಸಾವಿರಾರು ಮಕ್ಕಳಿದ್ದಾರೆ. ಆದರೆ ಇಲ್ಲಿನ ಮಕ್ಕಳಿಗೆ ಮೂಲಸೌಕರ್ಯ ಕೂಡ ಇಲ್ಲ ಎಂದು ವರದಿ ಹೇಳಿದೆ.

ಕರ್ನಾಟಕದ 45 ಶಿಶುಪಾಲನಾ ಗೃಹಗಳಿಗೆ 2018-19ರಲ್ಲಿ ಬಂದಿದ್ದು 66.62 ಕೋಟಿ ರುಪಾಯಿ. ಇಲ್ಲಿನ ಪ್ರತಿ ಮಕ್ಕಳಿಗೆ 2.14 ಲಕ್ಷ ರು. ಬಂದಂತಾಗುತ್ತದೆ. ಆಂಧ್ರಪ್ರದೇಶ ಕ್ಕೆ ವಿದೇಶದಿಂದ ಹರಿದುಬಂದಿದ್ದು 409.5 ಕೋಟಿ ರುಪಾಯಿ. ಅಂದರೆ ತಲಾ ಮಕ್ಕಳಿಗೆ 6.6 ಲಕ್ಷ ರು. ಬಂದಂತಾಯಿತು.

ಕೇಂದ್ರ ಸಚಿವ ಗಡ್ಕರಿಗೆ ಚಾಲೆಂಜ್ ! ಜನತೆ ಆಕ್ರೋಶ

ಇತರ ರಾಜ್ಯವಾರು ಹೋಲಿಸಿದಾಗ ತೆಲಂಗಾಣದಲ್ಲಿ ಪ್ರತಿ ಮಗುವಿಗೆ 3.88 ಲಕ್ಷ ರು. ಹಾಗೂ ತಮಿಳುನಾಡು, ಕೇರಳದ ಪ್ರತಿ ಮಗುವಿಗೆ 2 ಲಕ್ಷ ರು. ವಿದೇಶೀ ದೇಣಿಗೆ ಬಂದಂತಾಗುತ್ತದೆ. ಆದರೆ ಇಷ್ಟುಹಣವನ್ನು ಅವು ಬಳಸಿಕೊಳ್ಳುತ್ತಿಲ್ಲ. ಹೀಗಾಗಿ ಈ ನಿಟ್ಟಿನಲ್ಲಿ ಸರ್ಕಾರ ಗಂಭೀರ ಕ್ರಮ ಜರುಗಿಸಬೇಕು ಎಂದು ವರದಿ ಶಿಫಾರಸು ಮಾಡಿದೆ.