ತಾಜಿಕಿಸ್ತಾನ್ ಪ್ರಜೆಗಳಿಂದ ಸುಮಾರು 10 ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಈವರೆಗೆ ಕಸ್ಟಮ್ ಇಲಾಖೆ ವಶಪಡಿಸಿಕೊಂಡ ಗರಿಷ್ಠ ಮೌಲ್ಯದ ವಿದೇಶಿ ಕರೆನ್ಸಿಯಾಗಿದೆ.
ನವದೆಹಲಿ: ತಾಜಿಕಿಸ್ತಾನ್ ಪ್ರಜೆಗಳಿಂದ ಸುಮಾರು 10 ಕೋಟಿ ರು. ಮೌಲ್ಯದ ವಿದೇಶಿ ಕರೆನ್ಸಿಯನ್ನು ದೆಹಲಿ ವಿಮಾನ ನಿಲ್ದಾಣದಲ್ಲಿ ಕಸ್ಟಮ್ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಇದು ಈವರೆಗೆ ಕಸ್ಟಮ್ ಇಲಾಖೆ ವಶಪಡಿಸಿಕೊಂಡ ಗರಿಷ್ಠ ಮೌಲ್ಯದ ವಿದೇಶಿ ಕರೆನ್ಸಿಯಾಗಿದೆ. ಇಸ್ತಾನ್‌ಬುಲ್‌ಗೆ ಪ್ರಯಾಣಿಸುತ್ತಿದ್ದ ತಾಜಿಕಿಸ್ತಾನ್ ಪ್ರಜೆಗಳ ಬ್ಯಾಗ್‌ಗಳನ್ನು ಪರೀಕ್ಷೆ ಮಾಡುವ ವೇಳೆ ಈ ಹಣ ಲಭ್ಯವಾಗಿದೆ. ಬ್ಯಾಗ್‌ನಲ್ಲಿ ಇವರು ಶೂಗಳನ್ನು ಇರಿಸಿಕೊಂಡು ಅದರ ಒಳಗೆ ಹಣ ಬಚ್ಚಿಟ್ಟಿದ್ದಿದು ತಪಾಸಣೆ ವೇಳೆ ಪತ್ತೆ ಆಗಿದೆ. ಜಪ್ತಿ ಮಾಡಲಾದ ಕರೆನ್ಸಿಯಲ್ಲಿ 7.2 ಲಕ್ಷ ಅಮೆರಿಕನ್ ಡಾಲರ್ ಮತ್ತು 4.66 ಲಕ್ಷ ಯುರೋ ಇದ್ದು, ಭಾರತೀಯ ರುಪಾಯಿಯಲ್ಲಿ ಇದರ ಮೌಲ್ಯ ಸುಮಾರು 10 ಕೋಟಿ ರು. ಎಂದು ಕಸ್ಟಮ್ಸ್ ಇಲಾಖೆ ಹೇಳಿದೆ. ಇಷ್ಟು ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬಂಧಿತರಲ್ಲಿ ಒಬ್ಬ ಬಾಲಾರೋಪಿ ಆಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
