ಬ್ಯಾಗ್ ಹ್ಯಾಂಡಲ್‌ನಲ್ಲಿ ಪತ್ತೆಯಾಯ್ತು 64 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿ ನೋಟು..! ಸಿಕ್ಕಿದ್ದು ಹೇಗೆ ನೋಡಿ..
ಕೂಲಂಕುಷ ತನಿಖೆಯ ನಂತರ ನಗದು ನೋಟುಗಳು ಪತ್ತೆಯಾಗಿವೆ ಎಂದು ಸಿಐಎಸ್ಎಫ್ ಪತ್ರಿಕಾ ಹೇಳಿಕೆ ನೀಡಿದೆ. ಇಷ್ಟು ದೊಡ್ಡ ಮೊತ್ತದ ವಿದೇಶಿ ಕರೆನ್ಸಿಯನ್ನು ತಂದಿದ್ದಕ್ಕೆ ಯಾವುದೇ ದಾಖಲೆ ನೀಡಲು ಪ್ರಯಾಣಿಕನಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಕಾನೂನು ಕ್ರಮಕ್ಕಾಗಿ ಆತನನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.

ನವದೆಹಲಿ (ಜನವರಿ 29, 2023): ವಿದೇಶದಿಂದ ಕದ್ದ ಮಾಲುಗಳನ್ನು ತರುವುದು, ಅನುಮತಿಗಿಂತ ಹೆಚ್ಚಿನ ಮೌಲ್ಯದ ವಸ್ತುಗಳನ್ನು ತರುವುದು, ಅಕ್ರಮವಾಗಿ ಚಿನ್ನ, ವಿದೇಶಿ ನೋಟು ಮುಂತಾದವನ್ನು ವಿಮಾನದಲ್ಲಿ ಸಾಗಾಟ ಮಾಡುವ ಘಟನೆಗಳು ಇತ್ತೀಚೆಗೆ ಹೆಚ್ಚಾಗಿ ವರದಿಯಾಗುತ್ತಿದೆ. ಹಲವು ಬುದ್ಧಿವಂತ ಮಾರ್ಗಗಳಲ್ಲಿ ಕಳ್ಳರು, ವಂಚಕರು ಅಕ್ರಮ ಮಾರ್ಗದಲ್ಲಿ ತಂದರೂ ಸಹ ಬಹುತೇಕ ಬಾರಿ ಸಿಕ್ಕಿಬೀಳುತ್ತಾರೆ. ಕಳ್ಳರು ಚಾಪೆ ಕೆಳಗೆ ತೂರಿದರೆ, ಪೊಲೀಸರು ಅಥವಾ ಭದ್ರತಾ ಸಿಬ್ಬಂದಿ ರಂಗೋಲಿ ಕೆಳಗೆ ತೂರುತ್ತಾರೆ ಎಂಬಂತಿದೆ. ಹೀಗ್ಯಾಕಪ್ಪಾ ಈ ಮಾತುಗಳು ಎಂದರೆ, ಲಕ್ಷಗಟ್ಟಲೆ ಮೌಲ್ಯದ ವಿದೇಶಿ ಕರೆನ್ಸಿ ಸಿಕ್ಕಿದೆ.
ಸುರಕ್ಷಿತವಾಗಿ ಸುತ್ತಿ ಬ್ಯಾಗ್‌ನ (Bag) ಹ್ಯಾಂಡಲ್‌ನಲ್ಲಿ (Handle) ಇರಿಸಿ ವಿದೇಶಿ ಕರೆನ್ಸಿಯನ್ನು (Foreign Currency) ಸಾಗಾಟ (Transport) ಮಾಡುತ್ತಿದ್ದು ಪತ್ತೆಯಾಗಿದ್ದು, ಇದು ಸ್ವತ: ವಿಮಾನ ನಿಲ್ದಾಣದ ಅಧಿಕಾರಿಗಳನ್ನೇ (Airport Officials) ಅಚ್ಚರಿಗೀಡುವಂತೆ ಮಾಡಿದೆ. ಹೌದು, ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (Delhi’s Indira Gandhi International Airport) ಭದ್ರತಾ ಅಧಿಕಾರಿಗಳು (Security Officials) ಭಾನುವಾರ ಬೆಳಗ್ಗೆ ಬ್ಯಾಂಕಾಕ್‌ಗೆ ತೆರಳುತ್ತಿದ್ದ ಪ್ರಯಾಣಿಕರ ಟ್ರಾಲಿ ಬ್ಯಾಗ್‌ನ ಲೋಹದ ಪೈಪ್‌ಗಳಲ್ಲಿ 64 ಲಕ್ಷ ರೂಪಾಯಿ ಮೌಲ್ಯದ ವಿದೇಶಿ ಕರೆನ್ಸಿಯನ್ನು ಪತ್ತೆ ಮಾಡಿದ್ದಾರೆ.
ಇದನ್ನು ಓದಿ: ಮಾಜಿ ಸಚಿವ MB Patil ಮನೆಯಲ್ಲಿ ವಾಚ್, ವಿದೇಶಿ ಕರೆನ್ಸಿ ಕದ್ದ ಕೆಲಸಗಾರ!
ಪ್ರಯಾಣಿಕರ ಟ್ರಾಲಿ ಬ್ಯಾಗ್ ಹ್ಯಾಂಡಲ್‌ನ ಟೊಳ್ಳಾದ ಪೈಪ್‌ಗಳ ಒಳಗೆ ಬ್ಯಾಗನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರ ವಿದೇಶಿ ಹಣದ ನೋಟುಗಳನ್ನು ಮಡಚಿ, ಪ್ಲಾಸ್ಟಿಕ್‌ನಲ್ಲಿ ಲೇಪಿತವಾಗಿರುವುದನ್ನು ಅಧಿಕಾರಿಗಳು ಪತ್ತೆ ಮಾಡಿದರು. ಅಂತಾರಾಷ್ಟ್ರೀಯ ಡಿಪಾರ್ಚರ್ ಕಸ್ಟಮ್ಸ್ ಕಚೇರಿಯ ಭದ್ರತಾ ಸಿಬ್ಬಂದಿ ಬ್ಯಾಗ್‌ನ ಹ್ಯಾಂಡಲ್ ಅನ್ನು ತೆಗೆದುಹಾಕಿ ಮತ್ತು ಉದ್ದನೆಯ ಸೂಜಿಯೊಂದಿಗೆ ಕಂತುಗಟ್ಟಲೆ ನೋಟನ್ನು ಹೊರತೆಗೆದರು ಎಂದು ತಿಳಿದುಬಂದಿದೆ. ಒಟ್ಟು 68,400 ಯೂರೋಗಳು (200-ಯೂರೋ ಡಿನಾಮಿನೇಷನ್‌ನ 342 ನೋಟುಗಳು) ಮತ್ತು 5,000 ನ್ಯೂಜಿಲೆಂಡ್ ಡಾಲರ್‌ಗಳು (100 ಯೂರೋ ಡಿನಾಮಿನೇಷನ್‌ನ 50 ನೋಟುಗಳು), ಇದರ ಮೌಲ್ಯ 64 ಲಕ್ಷ ರೂ. ಎಂದು ತಿಳಿದುಬಂದಿದೆ.
ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್) ಪ್ರಕಾರ, ವಿಮಾನ ನಿಲ್ದಾಣದ ಅಧಿಕಾರಿಗಳು ಆರಂಭದಲ್ಲಿ ಸುರಿಂದರ್ ಸಿಂಗ್ ರಿಹಾಲ್ ಎಂದು ಗುರುತಿಸಲ್ಪಟ್ಟ ಪ್ರಯಾಣಿಕ ಮಧ್ಯರಾತ್ರಿ 1:15 ಕ್ಕೆ ವಿಚಿತ್ರ ನಡವಳಿಕೆ ಪ್ರದರ್ಶಿಸಿದಾಗ ಅನುಮಾನಗೊಂಡು ಟ್ರಾಲಿ ಬ್ಯಾಗನ್ನು ಪರಿಶೀಲಿಸಿದ್ದಾರೆ. ಆರೋಪಿ ಥಾಯ್ ಏರ್‌ಲೈನ್ಸ್ ಫ್ಲೈಟ್ ನಂ. TH-332 ನಲ್ಲಿ ಬ್ಯಾಂಕಾಕ್‌ಗೆ ಪ್ರಯಾಣ ಮಾಡಬೇಕಿತ್ತು. ಆದರೆ ರ್ಯಾಂಡಮ್ ಸ್ಕ್ರೀನಿಂಗ್‌ಗಾಗಿ ಮರುನಿರ್ದೇಶಿಸಲಾಯಿತು. ನಂತರ ಭೌತಿಕ ಮತ್ತು ವಿದ್ಯುನ್ಮಾನ ವೀಕ್ಷಣೆಯ ಅಡಿಯಲ್ಲಿ ತನ್ನ ಪ್ರಯಾಣವನ್ನು ಮುಂದುವರಿಸಲು ಅವರಿಗೆ ಅವಕಾಶ ನೀಡಲಾಯಿತು. ಇನ್ನು, ಗ್ರಾಹಕನು ತನ್ನ ದಾಖಲೆಗಳ ಸಮಸ್ಯೆಯಿಂದಾಗಿ ಏರ್‌ಲೈನ್ ಚೆಕ್-ಇನ್ ಅನ್ನು ಕ್ಲಿಯರ್ ಮಾಡಲು ಸಾಧ್ಯವಾಗದಿದ್ದಾಗ, ಸಿಐಎಸ್‌ಎಫ್ ಮತ್ತು ಕಸ್ಟಮ್ಸ್ ಅಧಿಕಾರಿಗಳು ಅವರನ್ನು ಅಂತಾಷ್ರಾಷ್ಟ್ರೀಯ ನಿರ್ಗಮನ ಕಸ್ಟಮ್ಸ್ ಕಚೇರಿಗೆ ಸಾಗಿಸಿದರು.
ಇದನ್ನೂ ಓದಿ: ಬೆಂಗಳೂರು: ಭದ್ರತೆಯ ಹೆಸರಲ್ಲಿ ಯುವತಿಯ ಶರ್ಟ್ ತೆಗೆಸಿದ ಏರ್‌ಪೋರ್ಟ್ ಸಿಬ್ಬಂದಿ ವಿರುದ್ಧ ಯುವತಿ ಗರಂ..!
ಈ ವೇಳೆ, ಕೂಲಂಕುಷ ತನಿಖೆಯ ನಂತರ ನಗದು ನೋಟುಗಳು ಪತ್ತೆಯಾಗಿವೆ ಎಂದು ಸಿಐಎಸ್ಎಫ್ ಪತ್ರಿಕಾ ಹೇಳಿಕೆ ನೀಡಿದೆ. ಇಷ್ಟು ದೊಡ್ಡ ಮೊತ್ತದ ವಿದೇಶಿ ಕರೆನ್ಸಿಯನ್ನು ತಂದಿದ್ದಕ್ಕೆ ಯಾವುದೇ ದಾಖಲೆ ನೀಡಲು ಪ್ರಯಾಣಿಕನಿಗೆ ಸಾಧ್ಯವಾಗಲಿಲ್ಲ. ಈ ಹಿನ್ನೆಲೆ ಕಾನೂನು ಕ್ರಮಕ್ಕಾಗಿ ಆತನನ್ನು ಕಸ್ಟಮ್ಸ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಹೊರಗೆ ಪಾನ್ ಒಳಗೆ 'ಲಕ್ಷ್ಮಿ' ಬ್ಯಾಕಾಂಕ್‌ಗೆ ಹೊರಟವ ಏರ್‌ಪೋರ್ಟ್‌ನಲ್ಲಿ ಅಂದರ್