ಜಮ್ಮು ಕಾಶ್ಮೀರದಲ್ಲಿ ಸಿಖ್ ಯುವತಿಯರ ಬಲವಂತದ ಮತಾಂತರ ಕಿಡ್ನಾಪ್ ಮಾಡಿ ಇಸ್ಲಾಂಗೆ ಮತಾಂತರ ಮಾಡುತ್ತಿರುವುದನ್ನು ವಿರೋಧಿ ಸಿಖ್ ಪ್ರತಿಭಟನೆ 13 ಸದಸ್ಯರ ಸಿಖ್ ನಿಯೋಗ ಭೇಟಿಯಾದ ಕೇಂದ್ರ ಗೃಹ ಸಚಿವ ಅಮಿತ್ ಶಾ
ನವದೆಹಲಿ(ಜು.04): ಜಮ್ಮು ಮತ್ತು ಕಾಶ್ಮೀರದ ಸಿಖ್ ಸಮುದಾಯ ಸಂಕಷ್ಟದಲ್ಲಿದೆ. ಸಿಖ್ ಸಮುದಾಯದ ಹಲ್ಲೆ, ದೌರ್ಜನ್ಯ ಒಂದೆಡೆಯಾದರೆ ಇದೀಗ ಸಿಖ್ ಯುವತಿಯರನ್ನು ಕಿಡ್ನಾಪ್ ಮಾಡಿ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡಲಾಗುತ್ತಿದೆ. ಬಳಿಕ ಮುಸ್ಲಿಮ್ ವೃದ್ಧರಿಗೆ ಮದುವೆ ಮಾಡಿಸಲಾಗುತ್ತಿದೆ. ಈ ಕುರಿತು ಪ್ರತಿಭಟನೆ ನಡೆಸುತ್ತಿರುವ ಸಿಖ್ ಸಮದಾಯಕ್ಕೆ ಇಂದು ಕೆಲ ಆಶ್ವಾಸನೆ ದೊರೆತಿದೆ. ಕಾಶ್ಮೀರದ 13 ಮಂದಿ ಸಿಖ್ ನಿಯೋಗವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿದ್ದಾರೆ.
ಸಿಖ್ ಯುವತಿಯರ ಅಪಹರಿಸಿ ಮತಾಂತರ ಮಾಡಿ ವೃದ್ಧರ ಜತೆ ಮದುವೆ!
ಜಮ್ಮು ಮತ್ತು ಕಾಶ್ಮೀರದಲ್ಲಿ ಸಿಖ್ ಸಮುದಾಯದ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ ಇದೀಗ ಭುಗಿಲೆದ್ದಿರುವ ಮತಾಂತರ ಸಮಸ್ಯೆಯನ್ನು ನಿಯೋಗ, ಅಮಿತ್ ಶಾ ಮುಂದೆ ತೆರೆದಿಟ್ಟಿದ್ದಾರೆ. ಈ ಕುರಿತು ಕಠಿಣ ಕ್ರಮ ಕೈಗೊಂಡು, ಸಿಖ್ ಸಮುದಾಯವನ್ನು ರಕ್ಷಿಸಬೇಕು ಎಂದು ನಿಯೋಗ ಮನವಿ ಮಾಡಿಕೊಂಡಿದೆ.
ನಿಯೋಗದ ಮನವಿ ಆಲಿಸಿದ ಅಮಿತ್ ಶಾ, ಮಹತ್ವದ ಭರವಸೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಬಲವಂತದ ಮತಾಂತರ ಕುರಿತು ಸರ್ಕಾರ ಸೂಕ್ಷ್ಮವಾಗಿ ಪರಿಶೀಲನೆ ನಡೆಸಿದೆ. ಇಂತಹ ಘಟನೆಗಳು ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು. ಕಣಿವೆ ರಾಜ್ಯದಲ್ಲಿರುವ ಸಿಖ್ ಸಮುದಾಯದ ರಕ್ಷಣೆಗೆ ಸರ್ಕಾರ ಬದ್ಧವಾಗಿದೆ ಎಂದು ಅಮಿತ್ ಶಾ ಹೇಳಿದ್ದಾರೆ.
ಸಿಖ್ ಮಹಿಳೆ, ಇಬ್ಬರು ಮಕ್ಕಳನ್ನು ಬಲತ್ಕಾರವಾಗಿ ಇಸ್ಲಾಂಗೆ ಮತಾಂತರ; ನಾಲ್ವರ ಬಂಧನ!
ಕೇಂದ್ರಾಡಳಿತ ಪ್ರದೇಶದಲ್ಲಿ ಸಿಖ್ ಮಹಿಳೆಯರನ್ನು ಮತಾಂತರಗೊಳಿಸಿದ ಘಟನೆಗಳಲ್ಲಿ ಅಪರಾಧಿಗಳಾಗಿರುವ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಅಮಿತ್ ಶಾ ಭರವಸೆ ನೀಡಿದ್ದಾರೆ.
ಕಳೆದ ವಾರ ಸಿಖ್ ಸಮುದಾಯ ಇಸ್ಲಾಂ ಬಲವಂತದ ಮತಾಂತರ ವಿರುದ್ಧ ಪ್ರತಿಭಟನೆ ಮಾಡಿತ್ತು. ಜಮ್ಮು, ಉದ್ಧಂಪುರ, ಕತುವಾ, ಶ್ರೀನಗರ, ರೆಸಾ.ಿ ಅನಂತನಾಗ್ ವಲಯದಲ್ಲಿ ಪ್ರತಿಭಟನೆ ನಡೆಸಿತ್ತು. ಕತುವಾ ಹಾಗೂ ಜಮ್ಮು ನಡುವಿನ ಹೆದ್ದಾರಿ ಬಂದ್ ಮಾಡಿ ಪ್ರತಿಭಟನೆ ನಡೆಸಿತ್ತು.
