Asianet Suvarna News Asianet Suvarna News

ಸಿಖ್ ಯುವತಿಯರ ಅಪಹರಿಸಿ ಮತಾಂತರ ಮಾಡಿ ವೃದ್ಧರ ಜತೆ ಮದುವೆ!

* ಜಮ್ಮು ಕಾಶ್ಮೀರದಲ್ಲಿ ಲವ್ ಜಿಹಾದ್ ನ ಹೊಸ ರೂಪ
* ಸಿಖ್ ಬಾಲಕಿಯ ಅಪಹರಣ ಮಾಡಿ ಬಲವಂತದ ಮದುವೆ
* ಸಿಖ್ ಸಮುದಾಯದಿಂದ ಲೆಫ್ಟಿನೆಂಟ್ ಗವರ್ನರ್ ಭೇಟಿ

Abducted forcibly converted SAD leader Manjinder Singh Sirsa leads protest JK mah
Author
Bengaluru, First Published Jul 2, 2021, 5:21 PM IST

ಶ್ರೀನಗರ (ಜಮ್ಮು ಮತ್ತು ಕಾಶ್ಮೀರ) (ಜು. 02)   ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (ಡಿಎಸ್‌ಜಿಎಂಸಿ) ನಿಯೋಗ ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರನ್ನು ಭೇಟಿ ಮಾಡಿದೆ. ಅಪಹರಣಕ್ಕೆ ಒಳಗಾಗ ಬಲವಂತವಾಗಿ  ಮತಾಂತರ ಮಾಡಲಾದ ಬಾಲಕಿಯರನ್ನು ಸುರಕ್ಷಿತವಾಗಿ ತವರಿಗೆ ಕರೆತರಬೇಕು ಎಂದು ಮನವಿ ಮಾಡಿಕೊಂಡಿದೆ.

ಡಿಎಸ್‌ಜಿಎಂಸಿ ಅಧ್ಯಕ್ಷ ಶಿರೋಮಣಿ ಅಕಾಲಿದಳದ ನಾಯಕ ಮಂಜಿಂದರ್ ಸಿಂಗ್ ಸಿರ್ಸಾ ಕಳವಳ ವ್ಯಕ್ತಪಡಿಸಿದ್ದಾರೆ. ಕಣಿವೆ ಪ್ರದೇಶದಲ್ಲಿ ಸಿಖ್ ಮಹಿಳೆಯರ ಸ್ಥಿತಿಗತಿ ಆತಂಕಕಾರಿಯಾಗಿದೆ ಎಂದಿದ್ದಾರೆ.  ಸಮುದಾಯಕ್ಕೆ ಸೇರಿದ ಇಬ್ಬರು ಯುವತಿಯರನ್ನು ಗನ್ ಪಾಯಿಂಟ್ ನಲ್ಲಿ ಅಪಹರಣ ಮಾಡಿ ಬಲವಂತವಾಗಿ ಬೇರೆ ಸಮುದಾಯದ ವೃದ್ಧರ ಜತೆ ಮದುವೆ ಮಾಡಿ ಮತಾಂತರ ಮಾಡಲಾಗಿದೆ ಎಂದು ಆರೋಪಿಸಿದ್ದಾರೆ. 

ಆಧಾರ್ ಕಾರ್ಡ್ ನಲ್ಲಿ ಮೋರ್ತಜಾ, ಹೊರ ಲೋಕಕ್ಕೆ ಮೃತ್ಯುಂಜಯ

ಜಮ್ಮು ಮತ್ತು ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್  ಗೆ ಧನ್ಯವಾದ ಹೇಳಿರುವ ಸಿರ್ಸಾ, ಸಿಖ್ ಸಮುದಾಯದ ರಕ್ಷಣೆಗೆ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ ಎಂದಿದ್ದಾರೆ.

ಜಮ್ಮು ಮತ್ತು ಕಾಶ್ಮೀರದಲ್ಲಿ ಮತಾಂತರ ನಿಷೇಧ ಕಾಯಿದೆ ಜಾರಿಯಾಗಬೇಕು ಎಂದು ಒತ್ತಾಯ ಮಾಡಿದ್ದಾರೆ.  ಮತಾಂತರವಾಗಬೇಕು ಎಂದರೆ ಪಾಲಕರ ಒಪ್ಪಿಗೆಯೂ  ಮುಖ್ಯ ಎನ್ನುವುದನ್ನು ಪರಿಗಣಿಸಬೇಕು ಎಂದು ಒತ್ತಾಯಿಸಿದ್ದಾರೆ.

ಸಿನ್ಹಾ ಅವರೊಂದಿಗಿನ ಸಭೆಯಲ್ಲಿ ನಿಯೋಗವು ಸ್ಥಳೀಯ ಗುರುದ್ವಾರ ಜಮೀನಿನ ವಿಷಯದ ಬಗ್ಗೆ ಚರ್ಚಿಸಿದೆ. ಅಲ್ಪಸಂಖ್ಯಾತ ಸಿಖ್ಖರ ಸಮಸ್ಯೆಗಳನ್ನು ಪರಿಹರಿಸಲು ಅಲ್ಪಸಂಖ್ಯಾತ ಆಯೋಗವನ್ನು ಸ್ಥಾಪಿಸಲು ಅವರು ಒಪ್ಪಿಕೊಂಡಿದ್ದಾರೆ. ನಿಕಾಹ್  ಹೆಸರಿನಲ್ಲಿ ಅಲ್ಪಸಂಖ್ಯಾತ ಸಿಖ್ ಹುಡುಗಿಯರ ಮತಾಂತರ ಮನ ಮೇಲೆ ಮತಾಂತರಗೊಳ್ಳುವವರ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದು ಸಿರ್ಸಾ ತಿಳಿಸಿದ್ದಾರೆ.

ಜಮ್ಮು ಕಾಶ್ಮೀರದ ಅಲ್ಪಸಂಖ್ಯಾತ ಸಮುದಾಯದ ಸಿಖ್ ಯುವತಿ ಮದುವೆಯ ಬಗ್ಗೆ ಶಿರೋಮಣಿ ಅಕಾಲಿ ದಳದ ಅಧ್ಯಕ್ಷ (ಎಸ್‌ಎಡಿ) ಸುಖ್ಬೀರ್ ಸಿಂಗ್ ಬಾದಲ್ ಕೂಡ  ಆಘಾತ ವ್ಯಕ್ತಪಡಿಸಿದ್ದರು.  ಮನ್ಮೀತ್ ಕೌರ್ ಅವರನ್ನು ಅಪಹರಿಸಿ ಶ್ರೀನಗರದಲ್ಲಿ ಬೇರೆ ಸಮುದಾಯದ ವೃದ್ಧನ ಜತೆ ಬಲವಂತವಾಗಿ ಮದುವೆ ಮಾಡಲಾಗಿತ್ತು ಎನ್ನುವುದು ದೊಡ್ಡ ಸುದ್ದಿಯಾಗಿತ್ತು.

 

Follow Us:
Download App:
  • android
  • ios