ಅಯೋಧ್ಯೆಯಲ್ಲಿ ನೆಲೆಸಿರುವ ಮುಸ್ಲಿಂ ಕುಟುಂಬವೊಂದು ತಲೆ ಮಾರುಗಳಿಂದ ಸಂತರಿಗಾಗಿ ಪಾದುಕೆಗಳನ್ನು ತಯಾರಿಸಿಕೊಡುತ್ತಿದೆ. ಮರದಿಂದ ತಯಾರಿಸಿದ ಚಪ್ಪಲಿಗಳನ್ನು ಸಂತರು, ಸ್ವಾಮಿಗಳಿಗೆ ನೀಡುತ್ತಾ ಬಂದಿದೆ.

ಸುಮಾರು ಐದು ತಲೆ ಮಾರುಗಳಿಂದಲೂ ಚಪ್ಪಲಿಗಳನ್ನು ತಯಾರಿಸಿಕೊಂಡು ಬಂದಿದ್ದು, ನಾನು ಐದನೇ ತಲೆ ಮಾರಿನವ ಎನ್ನುತ್ತಾರೆ ಅಯೋಧ್ಯೆಯಲ್ಲಿ ಪಾದುಕೆ ಮಾರುವ ಮೊಹಮ್ಮದ್ ಅಝಾಮ್.

ರಾಮ ಮಂದಿರ ಭೂಮಿಪೂಜೆ ವೇಳೆ 250 ಮುಸ್ಲಿಮರು ಹಿಂದೂ ಧರ್ಮಕ್ಕೆ ಮತಾಂತರ!

ನಾನು ನನ್ನ ಜೀವನೋಪಾಯಕ್ಕಾಗಿ ಹಿಂದೂ ಸಂತರು ಧರಿಸುವ ಪಾದುಕೆಗಳನ್ನು ತಯಾರಿಸುತ್ತೇನೆ. ನಮ್ಮ ಕುಟುಂಬ 5ನೇ ತಲೆ ಮಾರಾಗಿದ್ದು, ನಮ್ಮ ಪೂರ್ವಜನರ ಕೆಲಸವನ್ನೇ ನಾವು ಮಾಡುತ್ತಾ ಮುಂದುವರಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ.

ಹಿಂದೂ ಸಂಸ್ಕೃತಿಯಲ್ಲಿ ಮರದ ಪಾದುಕೆಗಳಿಗೆ ಬಹಳ ಪ್ರಮುಖ ಸ್ಥಾನವಿದೆ. ರಾಮಾಯಣದಲ್ಲಿ ಶ್ರೀರಾಮನ ಸಹೋದರ ಭರತ ರಾಮನ ಪಾದುಕೆಗಳನ್ನೇ ಸಿಂಹಾನದ ಮೇಲಿಟ್ಟು ರಾಜ್ಯಭಾರ ಮಾಡಿದ್ದ. ಇನ್ನು ಪಾದುಕೆಯನ್ನು ಪೂಜಿಸುವ ಕ್ರಮವೂ ಇದೆ.

ರಾಮ ಭಕ್ತ ಮುಸ್ಲಿಮರು: ಅಯೋಧ್ಯೆ ಮಂದಿರಕ್ಕಾಗಿ ನಡೆಸಿದ್ದರು ಹೋರಾಟ!

ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣವಾದ ಬಳಿಕ ಪಾದುಕೆಗಳ ಮಾರಾಟ ಹೆಚ್ಚುವ ಸಾಧ್ಯತೆ ಇದೆ ಎನ್ನುತ್ತಾರೆ ಅಐಆಮ್.  ಅಝಾಮ್‌ ಜೊತೆಗೆ 7 ಜನರು ಪಾದುಕೆ ತಯಾರಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಾರೆ.

ಕೋಮ ಸೌಹಾರ್ದದ ಬಗ್ಗೆ ಮಾತನಾಡಿದ ಅವರು, ಇಲ್ಲಿ ಹಿಂದೂ ಮತ್ತು ಮುಸ್ಲಿಮರು ಬೇರೆ ಎಂದು ಕಾಣುವುದಿಲ್ಲ. ನಾವು ಜೊತೆಯಾಗಿ ಕೆಲಸ ಮಾಡಿ ಪರಸ್ಪರ ಹಬ್ಬಗಳನ್ನೂ ಜೊತೆಯಾಗಿ ಆಚರಿಸುತ್ತೇವೆ. ನನ್ನೊಂದಿಗೆ ಕೆಲಸ ಮಾಡುವವರು ಹಿಂದೂಗಳೇ. ನಾವೆಲ್ಲರೂ ಶಾಂತಿಯಿಂದ ಬದುಕುತ್ತಿದ್ದೇವೆ ಎಂದಿದ್ದಾರೆ.