ಜೈಪುರ(ಆ.06): ದೇಶದಲ್ಲಿ ಭವ್ಯ ರಾಮ ಮಂದಿರಕ್ಕೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಗಸ್ಟ್ 5ರಂದು ಶಿಲಾನ್ಯಾಸ ನೆರವೇರಿಸಿದ್ದಾರೆ. ಹೀಗಿರುವಾಗ ರಾಜಸ್ಥಾನದಷ ಬರ್ಮರ್‌ನ ಸುಮಾರು 50 ಕುಟುಂಬದ 250 ಮಂದಿ ಇಸ್ಲಾಂನಿಂದ ಇಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ. ಅಲ್ಲದೇ ತಾವು ಮೂಲತಃ ಹಿಂದೂಗಳಾಗಿದ್ದು, ಯಾವುದೇ ಒತ್ತಾಯವಿಲ್ಲದೇ ಸ್ವಂತ ಇಚ್ಛೆಯಿಂದ ಮತಾಂತರಗೊಂಡಿರುವುದಾಗಿ ಕುಟುಂಬದ ಹಿರಿಯ ಸದಸ್ಯರು ತಿಳಿಸಿದ್ದಾರೆ.

ಲಾಹೋರ್ ಗುರುದ್ವಾರವ ಮಸೀದಿಯಾಗಿಸಲು ಮುಂದಾದ ಪಾಕ್‌ಗೆ ಭಾರತದ ಬಿಸಿ

ಇನ್ನು ಈ ಸಂಬಂಧ ಪ್ರತಿಕ್ರಿಯಿಸಿರುವ ಹಿಂದೂ ಧರ್ಮಕ್ಕೆ ಮತಾಂತರಗೊಂಡ ಸುಭಾನ್ರಮ್ 'ಮೊಘಲರ ಆಳ್ವಿಕೆ  ಸಂದರ್ಭದಲ್ಲಿ ನಮ್ಮ ವಂಶಸ್ಥರನ್ನು ಒತ್ತಾಯಪೂರ್ವಕವಾಗಿ ಇಸ್ಲಾಂ ಧರ್ಮ್ಕಕೆ ಮತಾಂತರಗೊಳಿಸಲಾಗಿತ್ತು. ಆದರೆ ನಾವು ಮೂಲತಃ ಹಿಂದೂ ಧರ್ಮದವರು, ಹೀಗಾಗಿ ಮುಸಲ್ಮಾನರು ನಮ್ಮಿಂದ ಅಂತರ ಕಾಯ್ದುಕೊಳ್ಳುತ್ತಿದ್ದರು. ಇತಿಹಾಸದಿಂದಲೂ ನಾವು ಹಿಂದೂಗಳೆಂದು ತಿಳಿದು ಬಂತು. ಹೀಗಾಗಿ ನಾವು ಮರಳಿ ಹಿಂದೂ ಧರ್ಮಕ್ಕೆ ಹೋಗಬೇಕೆಂದು ಅಂದುಕೊಂಡೆವು. ಅಲ್ಲದೇ ನಾವು ಅನುಸರಿಸುತ್ತಿದ್ದ ಅನೇಕ ಸಂಪ್ರದಾಯ ಹಾಗೂ ಪದ್ಧತಿಗಳು ಹಿಂದೂ ಧರ್ಮಕ್ಕೆ ಹೋಲಿಕೆಯಾಗುತ್ತಿದ್ದವು. ಹೀಗಾಗಿ ಇಡೀ ಕುಟುಂಬವೇ ಹಿಂದೂ ಧರ್ಮಕ್ಕೆ ಮರಳುವ ಆಕಾಂಕ್ಷೆ ವ್ಯಕ್ತಪಡಿಸಿತು. ಈ ನಿಟ್ಟಿನಲ್ಲಿ ಯಜ್ಞ, ಹವನ ನೆರವೇರಿಸಿ, ಜನಿವಾರ ಧರಿಸಿ 250 ಮಂದಿ ಹಹಿಂದೂ ಧರ್ಮಕ್ಕೆ ಮರಳಿದ್ದೇವೆ' ಎಂದಿದ್ದಾರೆ.

ಇನ್ನು ಈ ಕುಟುಂಬ ಸದಸ್ಯರು ಅನೇಕ ವರ್ಷಗಳಿಂದ ಹಿಂದೂ ಸಂಪ್ರದಾಯವನ್ನೇ ಅನುಸರಿಸುತ್ತಿದ್ದರು. ಹಿಂದೂ ಹಬ್ಬವನ್ನು ಆಚರಿಸುತ್ತಿದ್ದರು. ಮುಸಲ್ಮಾನರಾಗಿದ್ದರೂ ಅವರು ಈ ಧರ್ಮದ ಅನ್ವಯ ಯಾವುದೇ ಆಚರಣೆ ಮಾಡುತ್ತಿರಲಿಲ್ಲ ಎಂಬುವುದು ಗ್ರಾಮಸ್ಥರ ಮಾತಾಗಿದೆ.