Asianet Suvarna News Asianet Suvarna News

Bengaluru Rain: ರೈನ್‌ಕೋಟು ಧರಿಸಿ ನಾಯಿಮರಿ ವಾಕಿಂಗ್ ವೀಡಿಯೋ ವೈರಲ್

ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆ ಹಲವೆಡೆ ಪ್ರವಾಹ ಪರಿಸ್ಥಿತಿಯನ್ನು ಉಂಟು ಮಾಡಿದ್ದು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಹಲವು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ ನಾಯಿಮರಿಯೊಂದು ರೈನ್‌ಕೋಟ್ ಧರಿಸಿ ಓಡಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್‌ ಆಗಿದೆ.

Flood situation in so many areas of Bangalore, a dog wearing rain coat and walks in rain video goes viral akb
Author
First Published Sep 5, 2022, 3:51 PM IST

ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆ ಹಲವೆಡೆ ಪ್ರವಾಹ ಪರಿಸ್ಥಿತಿಯನ್ನು ಉಂಟು ಮಾಡಿದ್ದು, ದೊಡ್ಡ ಅವಾಂತರವನ್ನೇ ಸೃಷ್ಟಿಸಿದೆ. ಹಲವು ಪ್ರದೇಶಗಳಿಗೆ ನೀರು ನುಗ್ಗಿದ್ದು, ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಈ ಮಧ್ಯೆ ನಾಯಿಮರಿಯೊಂದು ರೈನ್‌ಕೋಟ್ ಧರಿಸಿ ಓಡಾಡುತ್ತಿರುವ ವಿಡಿಯೋವೊಂದು ಸಖತ್ ವೈರಲ್‌ ಆಗಿದೆ. ಮಳೆ ಬಂದರೆ ನಾವು ನೀವೆಲ್ಲಾ ಛತ್ರಿಯನ್ನೋ, ರೈನುಕೋಟುಗಳನ್ನೋ ಧರಿಸಿಕೊಂಡು ಮನೆ ಸೇರಿ ಬಿಡುತ್ತೇವೆ. ಅಥವಾ ಸುರಕ್ಷಿತ ಪ್ರದೇಶದಲ್ಲಿ ಮನೆ ನಿಲ್ಲುವವರೆಗೂ ಕಾಯುತ್ತೇವೆ. ಆದರೆ ಪ್ರಾಣಿಗಳೆನೋ ಮಾಡಬೇಕು ಮಳೆಯಲ್ಲಿ ಅಲ್ಲಿಲ್ಲಿ ಒದ್ದೆಯಾಗುತ್ತ ಅವರಿವರು ಓಡಿಸಿದರೆ ಓಡುತ್ತಾ ಸಂಕಟ ಪಡುತ್ತಿರುತ್ತವೆ. 

ಆದರೆ ಪ್ರಾಣಿಗಳಿಗಾಗಿ ಆದರಲ್ಲೂ ನಾಯಿಗಳ ಆರೈಕೆಗಾಗಿ ಹಲವು ಉತ್ಪನ್ನಗಳು ಬಂದಿವೆ. ಬೆಂಗಳೂರು ಸೇರಿದಂತೆ ದೇಶದ ಪ್ರಮುಖ ಮೆಟ್ರೋ ಸಿಟಿಗಳಲ್ಲಿ(Metro city) ಶ್ವಾನ ಪ್ರಿಯರ ಸಂಖ್ಯೆ ಹೆಚ್ಚಿದೆ. ಹೀಗಾಗಿ ಇವರನ್ನೇ ಬಂಡವಾಳವಾಗಿಸಿಕೊಂಡು ಹಲವು ಕಂಪನಿಗಳು ಹಲವು ವಿವಿಧ ರೀತಿಯ ಪ್ರಾಡಕ್ಟ್‌ಗಳನ್ನು ಶ್ವಾನಗಳಿಗಾಗಿ ಹೊರ ತಂದಿವೆ. ಉತ್ತಮ ತಳಿಯ ಶ್ವಾನಗಳನ್ನು ಸಾಕುವುದು ಸುಲಭದ ಮಾತಲ್ಲ. ಅವುಗಳ ಆಹಾರ (Food), ಔಷಧಿ(Medicine), ಲಸಿಕೆಗಾಗಿ ಸಾವಿರಾರು ರೂಪಾಯಿ ಹಣವನ್ನು ಇರಿಸಬೇಕಾಗುತ್ತದೆ. ಶ್ವಾನಪ್ರಿಯರು ಇವುಗಳಿಗ್ಯಾವುದಕ್ಕೂ ತಲೆಕೆಡಿಸಿಕೊಳ್ಳುವುದಿಲ್ಲ. ಶ್ವಾನವನ್ನು ತಮ್ಮ ಮಕ್ಕಳಿಗಿಂತಲೂ ಹೆಚ್ಚಾಗಿ ಪ್ರೀತಿ ಮಾಡುವ ಅವರು ಅವುಗಳಿಗೆ ಸಾಧ್ಯವಾಗುವ ಎಲ್ಲವನ್ನು ನೀಡುತ್ತಾರೆ. 

 

ಇದೇ ಕಾರಣಕ್ಕೆ ಶ್ವಾನಗಳು ಮಕ್ಕಳಂತೆ ಬಟ್ಟೆ ಧರಿಸಿ ಓಡಾಡುತ್ತಿರುವ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ(Social Media) ಸಾಕಷ್ಟಿವೆ. ಬಟ್ಟೆಯ ಜೊತೆಗೆ ಶ್ವಾನಗಳಿಗಾಗಿ ಶೂಗಳು ಈಗ ಬಂದಿವೆ. ಇದರ ಜೊತೆಗೆ ಈಗ ಮಳೆಗೆ ಒದ್ದೆಯಾಗದಂತೆ ರೈನ್‌ಕೋಟುಗಳು ಕೂಡ ಬಂದಿದ್ದು, ಪುಟ್ಟ ಪಮೋರಿಯನ್‌ ತಳಿಯ ಶ್ವಾನವೊಂದು ರೈನ್‌ಕೋಟು ಧರಿಸಿ ಪುಟಪುಟನೇ ಓಡಾಡುತ್ತಿದೆ. ಹಳದಿ ಬಣ್ಣದ ನೋಡಲು ಸಣ್ಣ ಕೊಡೆಯಂತೆ ಕಾಣುವ ರೈನ್‌ಕೋಟನ್ನು ಶ್ವಾನಕ್ಕೆ(Dog)  ಧರಿಸಲಾಗಿದೆ. ಶ್ವಾನವೂ ಇದನ್ನು ಧರಿಸಿ ಓಡಾಡುವುದನ್ನು ನೋಡುವುದೇ ಒಂದು ಮಜಾ. 

ನಾಯಿಯನ್ನು ಒಳಗೆ ಬಿಡದ ಪಬ್‌ಗೆ ಬರೋಬ್ಬರಿ 4.3 ಲಕ್ಷ ದಂಡ

ಡಾಗ್ಸ್ ಆಫ್ ಇನ್ಸ್ಟಾಗ್ರಾಮ್ ಪೇಜ್‌ನಿಂದ (Instagram Page) ಈ ವಿಡಿಯೋವನ್ನು ಅಪ್‌ಲೋಡ್ ಮಾಡಲಾಗಿದ್ದು, ನಿಮ್ಮ ಶ್ವಾನ ಮಳೆಯನ್ನು ಇಷ್ಟಪಡುತ್ತದೆಯೋ ಎಂದು ಕ್ಯಾಪ್ಷನ್ ನೀಡಲಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿದಾಗಿನಿಂದ 1.6 ಮಿಲಿಯನ್ ಜನ ವೀಕ್ಷಿಸಿದ್ದು, 98 ಸಾವಿರಕ್ಕೂ ಹೆಚ್ಚು ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅನೇಕರು ನಮ್ಮ ಶ್ವಾನಕ್ಕೂ ಇಂತದೊಂದು ರೈನ್‌ಕೋಟ್‌ನ (raincoat) ಅಗತ್ಯವಿತ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಬೆಂಗಳೂರಿನಲ್ಲಿ ಮಳೆಯಾರ್ಭಟ:

ಇತ್ತ ಬೆಂಗಳೂರು ನಗರದಲ್ಲಿ ಭಾನುವಾರವೂ ಮಳೆರಾಯನ ಅರ್ಭಟ ಜೋರಾಗಿದ್ದು, ಹತ್ತಕ್ಕೂ ಅಧಿಕ ಕಡೆ ಮರ ಹಾಗೂ ಮರದ ರೆಂಬೆ ಕೊಂಬೆಗಳು ಧರೆಗುರುಳಿದ ವರದಿಯಾಗಿದೆ. ಉಳಿದಂತೆ ರಸ್ತೆ, ಅಂಡರ್‌ ಪಾಸ್‌ ಹಾಗೂ ಮೇಲ್ಸೇತುವೆಗಳ ಮೇಲೆ ನೀರು ನಿಂತು ವಾಹನ ಸಂಚಾರಕ್ಕೆ ತೊಂದರೆ ಉಂಟಾಗಿದೆ. ಸಂಜೆ 7 ಗಂಟೆ ಸುಮಾರಿಗೆ ಮೋಡ ಕವಿದ ವಾತಾವರಣ ಸೃಷ್ಟಿಯಾಗಿ ಒಮ್ಮೆಲೇ ಧಾರಾಕಾರವಾಗಿ ಮಳೆ ಸುರಿಯಿತು. ದೇವರಜೀವನಹಳ್ಳಿ, ಆರ್‌ಟಿನಗರ, ಕೋರಮಂಗಲ ಸೇರಿದಂತೆ ನಗರದ ವಿವಿಧ ಕಡೆ 10ಕ್ಕೂ ಅಧಿಕ ಮರ ಹಾಗೂ ಮರದ ರಂಬೆ ಕೊಂಬೆಗಳು ಮುರಿದು ಬಿದ್ದಿವೆ.

ಸಿಪಿಆರ್ ಮಾಡಲು ಕಲಿತ ಶ್ವಾನ: ಹಸ್ಕಿ ನಾಯಿಯ ಮುದ್ದಾದ ವಿಡಿಯೋ ವೈರಲ್

ನಗರದ ಕಸ್ತೂರಿ ಬಾ ರಸ್ತೆ, ರಿಚ್‌ಮಂಡ್‌ ರಸ್ತೆ ಸಂಪೂರ್ಣವಾಗಿ ಜಲಾವೃತವಾಗಿದ್ದವು. ತುಮಕೂರು ರಸ್ತೆ, ಮಲ್ಲೇಶ್ವರ, ಎಂಜಿ ರಸ್ತೆ, ಡಬ್ಬಲ್‌ ರೋಡ್‌, ಆನಂದ್‌ ರಾವ್‌ ವೃತ್ತ ಸೇರಿದಂತೆ ನಗರದ ಪ್ರಮುಖ ರಸ್ತೆಗಳು ಹಾಗೂ ಅಂಡರ್‌ ಪಾಸ್‌ನಲ್ಲಿ ನೀರು ನಿಂತುಕೊಂಡ ಪರಿಣಾಮ ವಾಹನ ಸಂಚಾರಕ್ಕೆ ಸಮಸ್ಯೆ ಎದುರಾಯಿತು. ಶಿವಾನಂದ ವೃತ್ತದ (Shivananda circle) ಬಳಿ ಮ್ಯಾನ್‌ ಹೋಲ್‌ನಿಂದ ನೀರು ಹೊರ ಬಂದು ಸಮಸ್ಯೆ ಉಂಟಾಯಿತು.
 

Follow Us:
Download App:
  • android
  • ios