ಒಂದೇ ಫೋಟೋದಲ್ಲಿ ಐದು ತಲೆಮಾರು: ಆನಂದ್ ಮಹೀಂದ್ರಾ ಏನಂದ್ರು ನೋಡಿ
ಉದ್ಯಮಿ ಮಹೀಂದ್ರಾ ಗ್ರೂಪ್ ಮಾಲೀಕ ಆನಂದ್ ಮಹೀಂದ್ರಾ ಅವರು ಒಂದು ಕುಟುಂಬದ ಐದು ತಲೆಮಾರಿನ ಜನರು ಒಟ್ಟಿಗೆ ಇರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಉದ್ಯಮಿ ಮಹೀಂದ್ರಾ ಗ್ರೂಪ್ ಮಾಲೀಕ ಆನಂದ್ ಮಹೀಂದ್ರಾ ಅವರು ಒಂದು ಕುಟುಂಬದ ಐದು ತಲೆಮಾರಿನ ಜನರು ಒಟ್ಟಿಗೆ ಇರುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾಮಾಜಿಕ ಜಾಲತಾಣದದಲ್ಲಿ ಸದಾ ಆಕ್ಟಿವ್ ಆಗಿರುವ ಆನಂದ್ ಮಹೀಂದ್ರಾ ಅವರು ಆಗಾಗ್ಗೆ ಕೆಲವು ಉತ್ತಮ ಸಂದೇಶ ನೀಡುವ ಸ್ಪೂರ್ತಿದಾಯಕ ವಿಡಿಯೋಗಳನ್ನು ಪೋಸ್ಟ್ ಮಾಡುತ್ತಿರುವುದನ್ನು ನೀವು ನೋಡಿರಬಹುದು. ಈಗ ಅವರು ಅತ್ಯಂತ ಅಪರೂಪವೆನಿಸುವ ಒಂದೇ ಕುಟುಂಬದ ಐದು ತಲೆಮಾರುಗಳು ಇರುವ ವಿಡಿಯೋವನ್ನು ಪೋಸ್ಟ್ ಮಾಡಿದ್ದಾರೆ.
20 ಸೆಕೆಂಡುಗಳ ಈ ಫೋಟೋ ಕುಟುಂಬದ ಕಿರಿಯ ಮಗುವಿನಿಂದ ಆರಂಭವಾಗಿ ಒಟ್ಟು ಆತನಿಗಿಂತ ನಾಲ್ಕು ತಲೆಮಾರಿನ ಹಿರಿಯರು ಒಬ್ಬೊಬ್ಬರಾಗಿ ಬಂದು ಸಾಲಾಗಿ ನಿಲ್ಲುತ್ತಾರೆ. ಪುಟ್ಟ ಮಗು ತನ್ನ ತಂದೆಯನ್ನು ಕರೆಯುತ್ತದೆ. ನಂತರ ಬರುವ ನಾಲ್ಕು ಮೂರು ತಲೆಮಾರಿನವರು ಅವರವರ ತಂದೆಯರನ್ನು ಕರೆಯುತ್ತಾರೆ. ಅಲ್ಲಿಗೆ ವಿಡಿಯೋ ಕೊನೆಗೊಳ್ಳುತ್ತದೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ಆನಂದ್ ಮಹೀಂದ್ರಾ ಅವರು ಎಂಥಹಾ ಆಶೀರ್ವಾದವಿದು. ಒಟ್ಟಿಗೆ 5 ತಲೆಮಾರುಗಳು. ಪ್ರಪಂಚದಾದ್ಯಂತ ಎಷ್ಟು ಕುಟುಂಬಗಳು 5 ತಲೆಮಾರುಗಳ ತಾಯಿ ಅಥವಾ ತಂದೆಯ ಕಡೆಯ ತಲೆಮಾರನ್ನು ಹೊಂದಿವೆ. ಭಾರತದಿಂದಲೂ ಇಂತಹ ವೀಡಿಯೊವನ್ನು ನೋಡಲು ಬಯಸುತ್ತೇನೆ ಎಂದು ಮಹೀಂದ್ರ ಬರೆದಿದ್ದಾರೆ. ವೀಡಿಯೊವನ್ನು 5 ಲಕ್ಷ ಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ.
ಕೆಲ ದಿನಗಳ ಹಿಂದೆ ಆನಂದ್ ಮಹೀಂದ್ರ ಪುಟ್ಟ ಬಾಲಕನೋರ್ವ ಶ್ರಮಪಟ್ಟು ಮೀನು ಹಿಡಿಯುವ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದರು. ಪುಟ್ಟ ಬಾಲಕನೋರ್ವ ಮೀನು ಹಿಡಿಯುವ ವಿಡಿಯೋ ಇದಾಗಿದೆ. ಈ ವಿಡಿಯೋದಲ್ಲಿ ಕಾಣಿಸುವಂತೆ ಬಾಲಕ ನದಿ ಅಥವಾ ಕೆರೆಯ ಬಳಿ ತೆರಳಿ ಮೀನು ಹಿಡಿಯುವ ಸ್ವಯಂ ನಿರ್ಮಿತ ಉಪಕರಣವನ್ನು ಕಿನಾರೆಯ ಬಳಿ ಇಟ್ಟು ಅದಕ್ಕೆ ಗುದ್ದಲಿಯಿಂದ ಹೊಡೆದು ಗಟ್ಟಿಯಾಗಿ ನಿಲ್ಲುವಂತೆ ಮಾಡುತ್ತಾನೆ. ನಂತರ ಮೀನು ಹಿಡಿಯುವುದಕ್ಕಾಗಿ ಮನೆಯಿಂದ ಪಾತ್ರೆಯೊಂದರಲ್ಲಿ ತೆಗೆದುಕೊಂಡು ಬಂದಂತಹ ಆಹಾರವನ್ನು ಮೀನು ಹಿಡಿಯುವ ಗಾಳದ ತುದಿಗೆ ಸಿಕ್ಕಿಸುತ್ತಾನೆ. ನಂತರ ಗಾಳವನ್ನು ತುಂಬಾ ವೇಗವಾಗಿ ನೀರಿನತ್ತ ಎಸೆಯುತ್ತಾನೆ. ಹೀಗೆ ಎಸೆದ ಕೆಲ ಸೆಕೆಂಡುಗಳಲ್ಲಿ ಬಾಲಕ ಗಾಳವನ್ನು ಶ್ರಮಪಟ್ಟು ಹಿಡಿದು ಎಳೆಯುತ್ತಾನೆ. ಈ ವೇಳೆ ಗಾಳದಲ್ಲಿ ಎರಡು ದೊಡ್ಡದಾದ ಮೀನುಗಳು ಸಿಲುಕಿಕೊಳ್ಳುತ್ತದೆ. ನಂತರ ಗಾಳದಿಂದ ಮೀನನ್ನು ತೆಗೆಯುವ ಬಾಲಕ ತನ್ನ ಚೀಲಕ್ಕೆ ಮೀನನ್ನು ತುಂಬಿಸುತ್ತಾನೆ.
ಹಾಲು ತರಕಾರಿ ತರಲಿಕ್ಕೂ ಸ್ಕೂಟರ್ ಬಳಸೋ ತಲೆಮಾರು ಬೇಗ ಕಾಯಿಲೆಗೆ ತುತ್ತಾಗುತ್ತೆ!
ಈ ವಿಡಿಯೋ ನೋಡುವುದಕ್ಕೆ ಸರಳವಾಗಿ ಕಾಣಬಹುದು. ಆದರೆ ಅದರ ಹಿಂದೆ ಯಶಸ್ಸಿನತ್ತ ಸಾಗಲು ಏನು ಬೇಕು ಎಂಬ ಬಗ್ಗೆ ಒಂದು ಆಳವಾದ ಸಂದೇಶವಿದೆ. ಈ ವಿಡಿಯೋ ನನ್ನ ಇನ್‌ಬಾಕ್ಸ್‌ಗೆ ಬಂದಿದೆ. ಹೆಚ್ಚುತ್ತಿರುವ ಸಂಕೀರ್ಣ ಜಗತ್ತಿನಲ್ಲಿ ಇದೊಂದು ವಿಚಿತ್ರವಾಗಿದೆ. ದೃಢಸಂಕಲ್ಪ + ಜಾಣ್ಮೆ + ತಾಳ್ಮೆ = ಯಶಸ್ಸು ಅಂದರೆ ದೃಢಸಂಕಲ್ಪ , ಜಾಣ್ಮೆ , ತಾಳ್ಮೆ ಯಶಸ್ಸು ಜೊತೆ ಗೂಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬುದು ಈ ವಿಡಿಯೋದ ಸಂದೇಶವಾಗಿದೆ ಎಂದು ಬರೆದುಕೊಂಡು ಆನಂದ್ ಮಹೀಂದ್ರಾ ಈ ವಿಡಿಯೋವನ್ನು ಟ್ವಿಟ್ ಮಾಡಿದ್ದಾರೆ. 2 ನಿಮಿಷಗಳ ಈ ವಿಡಿಯೋವನ್ನು ಟ್ಟಿಟ್ಟರ್‌ನಲ್ಲಿ ಲಕ್ಷಾಂತರ ಮಂದಿ ವೀಕ್ಷಿಸಿದ್ದು, ಬಾಲಕನ ಪರಿಶ್ರಮಕ್ಕೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ. 66 ವರ್ಷದ ಉದ್ಯಮಿ ಆನಂದ್ ಮಹೀಂದ್ರ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಸದಾ ಇಂತಹ ವಿಡಿಯೋಗಳನ್ನು ಪೋಸ್ಟ್ ಮಾಡಿ ಯುವ ಸಮುದಾಯಕ್ಕೆ ಸ್ಪೂರ್ತಿ ತುಂಬುತ್ತಿರುತ್ತಾರೆ.
Russia Ukraine War ಯುದ್ಧದಿಂದ ರಷ್ಯಾ ಮುಂದಿನ ತಲೆಮಾರು ವಿನಾಶ: ಜೆಲೆನ್‌ಸ್ಕಿ ಎಚ್ಚರಿಕೆ!