ಅಂಬಾಲಾ(ಜು.29): ತನ್ನ ಬತ್ತಳಿಕೆಗೆ ವಿಶ್ವದ ಅತ್ಯಾಧುನಿಕ ಯುದ್ಧ ವಿಮಾನವಾದ ರಫೇಲ್‌ ಹೊಂದುವ ಭಾರತೀಯ ವಾಯುಪಡೆಯ ಕನಸು ಕೊನೆಗೂ ನನಸಾಗುವ ಕ್ಷಣ ಸನ್ನಿಹಿತವಾಗಿದೆ.

"

ಫ್ರಾನ್ಸ್‌ನ ಡಸಾಲ್ಟ್‌ ಏವಿಯೇಷನ್‌ ನಿರ್ಮಿತ ಒಂದು ಸೀಟಿನ 3 ಮತ್ತು 2 ಸೀಟಿನ 3 ವಿಮಾನಗಳು ಬುಧವಾರ ಹರ್ಯಾಣದ ಅಂಬಾಲಾ ವಾಯುನೆಲೆಗೆ ಆಗಮಿಸಲಿದ್ದು, ಅದನ್ನು ಸ್ವಾಗತಿಸಲು ಸಕಲ ಸಿದ್ಧತೆಗಳು ನಡೆದಿವೆ.

ಸೋಮವಾರ ಫ್ರಾನ್ಸ್‌ನಿಂದ ಹೊರಟಿದ್ದ ವಿಮಾನಗಳು ಸಂಚಾರದ ವೇಳೆಯೇ 30000 ಅಡಿ ಎತ್ತರದಲ್ಲಿ ಇಂಧನ ಭರ್ತಿಯ ಸಾಹಸವನ್ನೂ ಪ್ರದರ್ಶಿಸಿ ಒಟ್ಟಾರೆ 7000 ಕಿ.ಮೀ. ಸಂಚರಿಸಿ ಯುಎಇ ತಲುಪಿವೆ. ಅವೆಲ್ಲಾ ಬುಧವಾರ ಅಂಬಾಲಾಕ್ಕೆ ಬಂದಿಳಿಯಲಿವೆ.

ಭಾರತಕ್ಕೆ 5 ರಪೇಲ್ ಯುದ್ಧ ವಿಮಾನ: ಕ್ಷಣಗಣನೆ ಆರಂಭ!

ಈ ಹಿನ್ನೆಲೆಯಲ್ಲಿ ವಾಯುನೆಲೆ ಸುತ್ತಮುತ್ತಲ ಪ್ರದೇಶಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಯಾರೂ ವಿಮಾನಗಳ ಫೋಟೋ, ವಿಡಿಯೋ ಸೆರೆ ಹಿಡಿಯದಂತೆ, ಡ್ರೋನ್‌ಗಳನ್ನು ಹಾರಿಸದಂತೆ ಜಿಲ್ಲಾಡಳಿತ ಸೂಚಿಸಿದೆ.

4 ವರ್ಷಗಳ ಹಿಂದೆ ಭಾರತ ಸರ್ಕಾರ 59000 ಕೋಟಿ ರು. ವೆಚ್ಚದಲ್ಲಿ 36 ರಫೇಲ್‌ ಖರೀದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಪೈಕಿ ಮೊದಲ 5 ವಿಮಾನ ಇದೀಗ ಹಸ್ತಾಂತರವಾಗಿದೆ. ಉಳಿದ ಎಲ್ಲಾ ವಿಮಾನಗಳು 2021ರ ಅಂತ್ಯದೊಳಗೆ ಭಾರತಕ್ಕೆ ಬರಲಿವೆ.

"

ಜು.29ಕ್ಕೆ ಬರುವ ರಫೇಲ್‌ ವಿಮಾನ ಚೀನಾ ಗಡಿಯಲ್ಲಿ ನಿಯೋಜನೆಗೆ ಚಿಂತನೆ!

ರಫೇಲ್‌ ವಿಮಾನಗಳನ್ನು ಗೋಲ್ಡನ್‌ ಆ್ಯರೋ ಎಂದು ಕರೆಯಲಾಗುವ ನಂ.17 ಸ್ಕಾ್ಯ್ವಡ್ರನ್‌ಗೆ ಸೇರಿಸಿ ಅದನ್ನು ಅಂಬಾಲಾ ನೆಲೆಯಲ್ಲಿ ನಿಯೋಜಿಸಲು ವಾಯುಪಡೆ ನಿರ್ಧರಿಸಿದೆ. ಈ ವಿಮಾನಗಳು ಭಾರತೀಯ ವಾಯುಪಡೆ ಸಾಮರ್ಥ್ಯವನ್ನು ಇನ್ನಷ್ಟು ಹೆಚ್ಚಿಸಲಿವೆ.