ನವದೆಹಲಿ(ಜು.21): ಗಲ್ವಾನ್‌ನಲ್ಲಿ ಚೀನಾದೊಂದಿಗೆ ಗಡಿ ಘರ್ಷಣೆ ನಡೆದ ಬಳಿಕ ವಾಸ್ತವ ಗಡಿ ನಿಯಂತ್ರಣ ರೇಖೆ ಬಳಿ ಹದ್ದಿನ ಕಣ್ಣಿಡಲು ಭಾರತೀಯ ಸೇನೆ ಯೋಜನೆ ಹಾಕಿಕೊಂಡಿದ್ದು, ಇದಕ್ಕಾಗಿ ಚೀನಾ ಗಡಿಯಲ್ಲಿ ಅತ್ಯಾಧುನಿಕ ರಫೇಲ್‌ ಯುದ್ಧ ವಿಮಾನಗಳನ್ನು ನಿಯೋಜಿಸಲು ಮುಂದಾಗಿದೆ.

ಫ್ರಾನ್ಸ್‌ನಿಂದ ಹಾರಾಟ ಆರಂಭಿಸಿರುವ 5 ರಾಫೆಲ್ ಯುದ್ಧ ವಿಮಾನ ಜುಲೈ 29ಕ್ಕೆ ಭಾರತದಲ್ಲಿ ಲ್ಯಾಂಡ್!

ಭದ್ರತಾ ವ್ಯವಸ್ಥೆಗಳ ಪರಿಶೀಲನೆಗೆ ಬುಧವಾರದಿಂದ ಮೂರು ದಿನಗಳ ಕಾಲ ನಡೆಯುವ ಭಾರತೀಯ ವಾಯುಪಡೆಯ ಉನ್ನತ ಕಮಾಂಡರ್‌ಗಳ ಸಭೆಯಲ್ಲಿ, ಗಡಿಯಲ್ಲಿ ರಫೇಲ್‌ ನಿಯೋಜಿಸುವ ಬಗ್ಗೆ ಮಾತುಕತೆ ನಡೆಯುವ ಸಂಭವವಿದೆ. ಲಡಾಖ್‌ ಸೆಕ್ಟರ್‌ನಲ್ಲಿ ಒಟ್ಟು ಆರು ರಫೇಲ್‌ಗಳನ್ನು ನಿಯೋಜಿಸುವ ಸಾಧ್ಯತೆ ಇದೆ ಎಂದು ಸೇನಾ ಮೂಲಗಳಿಂದ ಗೊತ್ತಾಗಿದೆ. ಪ್ರಸಕ್ತ ಯೋಜನೆ ಅನ್ವಯ ಜುಲೈ 29ಕ್ಕೆ್ಕ ಫ್ರಾನ್ಸ್‌ನಿಂದ ಭಾರತಕ್ಕೆ ರಫೇಲ್‌ ವಿಮಾನಗಳ ಹಸ್ತಾಂತರವಾಗಲಿದ್ದು, ಆಗಸ್ಟ್‌ನಲ್ಲಿ ಚೀನಾದ ಗಡಿಯಲ್ಲಿ ನಿಯೋಜನೆಗೊಳ್ಳುವ ಸಾಧ್ಯತೆ ಇದೆ.

ಫ್ರಾನ್ಸ್‌ನಿಂದ ಹಾರಾಟ ಆರಂಭಿಸಿರುವ 5 ರಾಫೆಲ್ ಯುದ್ಧ ವಿಮಾನ ಜುಲೈ 29ಕ್ಕೆ ಭಾರತದಲ್ಲಿ ಲ್ಯಾಂಡ್!

ಈಗಾಗಲೇ ಪೂರ್ವ ಲಡಾಖ್‌ನಲ್ಲಿ ಸುಖೋಯ್‌ 30 ಎಂಕೈ, ಜಾಗ್ವಾರ್‌, ಮಿರಾಜ್‌ 2000 ಸೇರಿದಂತೆ ತನ್ನೆಲ್ಲಾ ಪ್ರಮುಖ ಯುದ್ಧ ವಿಮಾನಗಳನ್ನು ಈಗಾಗಲೇ ಭಾರತ ನಿಯೋಜಿಸಿದೆ.