ಆನೆಯೊಂದು ಜೆಸಿಬಿಗೆ ಡಿಕ್ಕಿ ಹೊಡೆದಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಚಾಲಕ ಜೆಸಿಬಿಯನ್ನು ಮೇಲಕ್ಕೆತ್ತಿದರೂ, ಆನೆ ಬಲವಾಗಿ ದಾಳಿ ಮಾಡುತ್ತಲೇ ಇರುತ್ತದೆ.
Viral Video: ಆನೆಗಳು ಸ್ವಭಾವದಿಂದ ತುಂಬಾನೇ ಶಾಂತವಾಗಿರುತ್ತವೆ. ಆದರೆ ಆನೆಗಳ ಮುಂದೆ ಹೋಗಲು ಬಹುತೇಕ ಎಲ್ಲರೂ ಸಹ ಹೆದರುತ್ತಾರೆ. ಕಾಡಂಚಿನ ಗ್ರಾಮಸ್ಥರಿಗೆ ಆನೆಗಳು ಅಂದ್ರೆ ಆತಂಕ ಹೆಚ್ಚಾಗುತ್ತದೆ. ಜಮೀನಿಗೆ ಬಂದ್ರೆ ಬೆಳೆಯನ್ನು ಹಾಳು ಮಾಡುತ್ತಿರುತ್ತವೆ. ಹೀಗಾಗಿ ಅರಣ್ಯ ಪ್ರದೇಶದ ಗಡಿಯಲ್ಲಿರುವ ವ್ಯಾಪ್ತಿಯಲ್ಲಿ ಮನುಷ್ಯರು ಮತ್ತು ಪ್ರಾಣಿಗಳ ನಡುವೆ ಸಂಘರ್ಷ ನಡೆಯುತ್ತಲೇ ಇರುತ್ತವೆ. ಗ್ರಾಮ ಮತ್ತು ತೋಟಗಳಿಗೆ ಆನೆಗಳು ನುಗ್ಗಿರುವ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇರುತ್ತವೆ. ಆನೆಗಳ ಹಾವಳಿಯಿಂದ ಕಾಡಂಚಿನ ಜನರು ಮನೆಯಿಂದ ಹೊರಗೆ ಬರಲು ಹೆದರುತ್ತಾರೆ. ಇದೀಗ ಆನೆ ಮತ್ತು ಜೆಸಿಬಿ ನಡುವಿನ ಸಂಘರ್ಷದ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ಆನೆಯೊಂದು ಜೋರಾಗಿ ಜೆಸಿಬಿ ವಾಹನಕ್ಕೆ ಡಿಕ್ಕಿ ಹೊಡೆದಿರೋದನ್ನು ಗಮನಿಸಬಹುದು. ಆನೆ ತಮ್ಮ ಸಮೀಪ ಬರುತ್ತಿರೋದನ್ನು ಗಮನಿಸಿದ ಚಾಲಕ ಜೆಸಿಬಿ ವಾಹನದ ಮುಂಭಾಗವನ್ನು ಮೇಲೆ ಮಾಡುತ್ತಾನೆ. ಆನೆಯೂ ಸಹ ತನ್ನ ಸೊಂಡಿಲಿನಿಂದ ಬಲವಾಗಿಯೇ ದಾಳಿ ಮಾಡುತ್ತದೆ. ಆನೆಯ ಪ್ರಬಲ ದಾಳಿಯಿಂದ ಇಡೀ ಜೆಸಿಬಿ ಅಲುಗಾಡುತ್ತದೆ. ಆನೆಯ ತಳ್ಳುವಿಕೆಯಿಂದ ಜೆಸಿಬಿ ಮೇಲೆ ಹೋಗುತ್ತಿದ್ದಂತೆ ಸುತ್ತಲೂ ಧೂಳು ಉಂಟಾಗುತ್ತದೆ.
ಇದಾದ ಬಳಿಕ ಆನೆ ಹಿಂದಕ್ಕೆ ಹೋಗುತ್ತದೆ. ನಂತರ ತನ್ನಪಾಡಿಗೆ ತಾನು ಹೋಗಲಾರಂಭಿಸುತ್ತದೆ. ಆದ್ರೆ ಚಾಲಕ ಇಷ್ಟಕ್ಕೆ ಸುಮ್ಮನಾಗದೇ ಆನೆಯನ್ನು ಹಿಮ್ಮೆಟ್ಟಿಸಿಕೊಂಡು ಹೋಗುತ್ತಾನೆ. ಈ ವಿಡಿಯೋದಲ್ಲಿ ಕಾಣುವ ನಾಲ್ಕೈದು ಜನರು, ಜೋರಾಗಿ ಧ್ವನಿ ಮಾಡುತ್ತಾ ಆನೆಯ ಹಿಂದೆ ಓಡುತ್ತಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಕಾರಣವಾಗಿದೆ. ನೆಟ್ಟಿಗರು ಆನೆಯ ಶಕ್ತಿಯನ್ನು ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ತನ್ನ ಸಂಘರ್ಷ ಮುಂದುವರಿಸಿದ್ರೆ ಬಹುಶಃ ಜೆಸಿಬಿ ಅಪ್ಪಚ್ಚಿಯಾಗುತ್ತಿತ್ತು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಅತ್ತೆ-ಸೊಸೆ ಮೊಟ್ಟೆ ಕಥೆಯಲ್ಲಿ ಇಂಗು ತಿಂದ ಮಂಗನಾದ ಬಡಪಾಯಿ ಗಂಡ; ವಿಡಿಯೋ ನೋಡಿ
ವೈರಲ್ ಆಗಿರುವ ವಿಡಿಯೋವನ್ನು @sujandutta.pc._lover_ ಹೆಸರಿನ ಇನ್ ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಳ್ಳಲಾಗಿದೆ. JCV Vs Elephant ಶೀರ್ಷಿಕೆಯಡಿ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋಗೆ 4.1 ಲಕ್ಷಕ್ಕೂ ಅಧಿಕ ಲೈಕ್ಸ್ ಮತ್ತು ಅನೇಕ ಕಮೆಂಟ್‌ಗಳು ಬಂದಿವೆ. ಅರಣ್ಯ ಇಲಾಖೆ ಅಥವಾ ಸಂಬಂಧಿಸಿದ ಅಧಿಕಾರಿಗಳು ಜೆಸಿಬಿ ಚಾಲಕನ ವಿರುದ್ದ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಜರುಗಿಸಬೇಕು ಎಂದು ಕೆಲ ನೆಟ್ಟಿಗರು ಆಗ್ರಹಿಸಿದ್ದಾರೆ. ಈ ಕಮೆಂಟ್‌ಗೆ ಹಲವರು ಸಹಮತ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಈ ಸಂಘರ್ಷದಲ್ಲಿ ಆನೆ ಅಥವಾ ಮನುಷ್ಯರಿಗೆ ಏನಾದ್ರೂ ಅಪಾಯ ಆಗುವ ಸಾಧ್ಯತೆಗಳಿದ್ದವು. ಆನೆ ಮತ್ತು ಜೆಸಿಬಿ ಚಾಲಕ ಸೇಫ್ ಆಗಿದ್ದಾರೆ ಎಂದು ಭಾವಿಸುತ್ತೇವೆ ಎಂದು ಹಲವರು ಕಮೆಂಟ್ ಮಾಡಿದ್ದಾರೆ.
ಈ ಘಟನೆ ಒಡಿಶಾ ಮೂಲದ್ದು ಎಂದು ಹೇಳಲಾಗುತ್ತಿದ್ದು, ಆದ್ರೆ ಈ ಬಗ್ಗೆ ಸ್ಪಷ್ಟತೆ ಇಲ್ಲ. ಅಲ್ಲಿರುವ ಜನರೇ ಆನೆಯನ್ನು ಕೋಪಗಳಿಸಿರಬಹುದು ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ. ಇನ್ನು ಕೆಲವರು ಆನೆ ಪರಿಸ್ಥಿತಿ ಕಂಡು ಭಾವುಕರಾಗಿದ್ದಾರೆ.
ಇದನ್ನೂ ಓದಿ: ಹೆಂಡ್ತಿಯ ಕಿತಾಪತಿಯಿಂದ ಬೇಸತ್ತು ನಿನ್ನೊಂದಿಗೆ ಮಲಗಲ್ಲ ಎಂದು ಎದ್ದು ಹೋದ ಗಂಡ
