Asianet Suvarna News Asianet Suvarna News

ಬೇಸಿಗೆ ರಜೆಯಲ್ಲಿ ಮಕ್ಕಳ ಜಗಳ ಬಿಡಿಸಿ ಸುಸ್ತಾಗಿದ್ಯಾ... ಹಾಗಿದ್ರೆ ಈ ವಿಡಿಯೋ ನೋಡಿ

ಈಗಂತೂ ಬೇಸಿಗೆ ರಜೆ. ಶಾಲೆಯೂ ಇಲ್ಲದೇ ಮನೆಯಲ್ಲೇ ಇರುವ ಮಕ್ಕಳ ಜಗಳ ಬಿಡಿಸುವುದಕ್ಕಾಗಿಯೇ ಒಬ್ಬರು ಬೇಕು ಎಂಬುದು ಹಲವರು ಪೋಷಕರ ಗೋಳು, ಹೀಗೆ ಮಕ್ಕಳಂತೆ ಪ್ರಾಣಿಗಳು ಕಿತ್ತಾಡ್ತವಾ ಹೌದು ಅಂತಿದೆ ಈ ವೀಡಿಯೋ. 

Fight between baby elephants elderly elephants got in the middle and stopped the fight Viral video akb
Author
First Published Apr 26, 2023, 3:44 PM IST

ಮನೆಯಲ್ಲಿ ಇಬ್ಬರು ಮಕ್ಕಳು ಜಗಳ ಮಾಡುತ್ತಿದ್ದರೆ, ದೊಡ್ಡವರು ಬಂದು ಇಬ್ಬರಿಗೂ ಎರಡೆರಡು ಬಾರಿಸಿ ಜಗಳ ಬಿಡಿಸುವುದನ್ನು ನೀವು ಗಮನಿಸಿರಬಹುದು. ಅಥವಾ ನಿಮ್ಮ ಮನೆಯಲ್ಲೂ ಇದು ಅನುಭವಕ್ಕೆ ಬಂದಿರಬಹುದು. ಈಗಂತೂ ಬೇಸಿಗೆ ರಜೆ. ಶಾಲೆಯೂ ಇಲ್ಲದೇ ಮನೆಯಲ್ಲೇ ಇರುವ ಮಕ್ಕಳ ಜಗಳ ಬಿಡಿಸುವುದಕ್ಕಾಗಿಯೇ ಒಬ್ಬರು ಬೇಕು ಎಂಬುದು ಹಲವರು ಪೋಷಕರ ಗೋಳು, ಅನೇಕರು ಒಮ್ಮೆ ಶಾಲೆ ಶುರುವಾದರೆ ಸಾಕು. ಮಕ್ಕಳ ಕಿತ್ತಾಟ ಬಿಡಿಸಿಯೇ ಸಾಕಾಗ್ತಿದೆ, ಅವರ ಬೊಬ್ಬೆ ಕೇಳಿಯೇ ದೊಡ್ಡ ತಲೆನೋವಾಗ್ತಿದೆ ಎಂದು ಹೇಳುವುದನ್ನು ನೀವು ಕೇಳಿರಬಹುದು. ಅದೆಲ್ಲಾ ಸರಿ ಹೀಗೆ ಮಕ್ಕಳಂತೆ ಪ್ರಾಣಿಗಳು ಕಿತ್ತಾಡ್ತವಾ ಹೌದು ಅಂತಿದೆ ಈ ವೀಡಿಯೋ. 

ಆನೆಮರಿಗಳೆರಡು (Elephant calf) ಪರಸ್ಪರ ಕಾದಾಡುತ್ತಿರುವ ಈ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.  ಪ್ರಾಣಿಗಳ ಮುದ್ದಾದ ವಿಡಿಯೋಗಳು  ಕ್ಯಾಮರಾದಲ್ಲಿ ಸೆರೆಯಾಗಿ ಆಗಾಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುತ್ತವೆ. ಅರಣ್ಯ ಇಲಾಖೆಯ ಹಲವು ಅಧಿಕಾರಿಗಳು ವನ್ಯಜೀವಿಗಳ ಅಪರೂಪದ ವಿಡಿಯೋ ಫೋಟೋಗಳನ್ನು ಆಗಾಗ ತಮ್ಮ ಸಾಮಾಜಿಕ ಜಾಲತಾಣ (Social Media) ಖಾತೆಗಳಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಅದೇ ರೀತಿ ಈಗ ಆನೆಗಳ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಮನಸ್ಸಿಗೆ ಮುದ ನೀಡುತ್ತಿದೆ. ಈ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆಯ (IFS) ಅಧಿಕಾರಿ ಪರ್ವಿನ್ ಕಸ್ವಾನ್ (Parveen Kaswan) ಅವರು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ್ದಾರೆ. 

ಮಕ್ಕಳು ಇಡೀ ದಿನ ಕಚ್ಚಾಡ್ತಾರಾ? ಅವರ ನಡುವೆ ಪ್ರೀತಿ ತರಲು ಇಲ್ಲಿವೆ vastu tips

23 ಸೆಕೆಂಡ್‌ಗಳ ಈ ವಿಡಿಯೋದಲ್ಲಿ ಆನೆಮರಿಗಳೆರಡು ಪರಸ್ಪರ ಒಬ್ಬರನ್ನೊಬ್ಬರು ತಳ್ಳಾಡಿಕೊಂಡು ಕಾದಾಡುತ್ತಿವೆ. ಇದನ್ನು ನೋಡಿದ  ಹಿರಿಯಾನೆಗಳು ಅವುಗಳತ್ತ ಆಗಮಿಸಿ ಎರಡು ಆನೆ ಮರಿಗಳನ್ನು ದೂರ ದೂರ ಮಾಡುತ್ತವೆ.  ವಿಡಿಯೋದಲ್ಲಿ ಕಾಣಿಸುವಂತೆ ದೊಡ್ಡದಾದ ಕಾಡಿನಲ್ಲಿ ಆನೆಗಳ ದೊಡ್ಡ ಹಿಂಡಿದೆ. ಒಂದೆಡೆ ಹಿರಿಯಾನೆಗಳೆಲ್ಲಾ ಗುಂಪಿನಲ್ಲಿದ್ದುಕೊಂಡು ಏನೋ ಮಾಡುತ್ತಿದ್ದರೆ,  ಇದೆರಡು ಆನೆ ಮರಿಗಳು ಒಬ್ಬರನ್ನೊಬ್ಬರು ತಳ್ಳಾಡುತ್ತಿವೆ.

 ಮೊದಲಿಗೆ  ಪರಸ್ಪರ ಅಭಿಮುಖವಾಗಿ ನಿಂತಿರುವ ಪುಟ್ಟ ಆನೆಗಳು ಒಬ್ಬರನ್ನೊಬ್ಬರು ತಳ್ಳಿಕೊಂಡು ಒಂದು ಆನೆ ಹಿಮ್ಮುಖವಾಗಿ ಹೆಜ್ಜೆ ಹಾಕುತ್ತಿದ್ದರೆ ಅದಕ್ಕಿಂತ ಸ್ವಲ್ಪ ಸಣ್ಣ ಇರುವ ಆನೆ ಅದನ್ನು ತಳ್ಳುತ್ತಾ ಸಾಗುತ್ತಿದೆ. ಆದರೆ ಸ್ವಲ್ಪ ಹೊತ್ತಿನಲ್ಲಿ ಉಲ್ಟಾ ಆಗಿದ್ದು, ಹಿಂದೆ ಹಿಂದೆ ಹೋಗಿದ್ದ ದೊಡ್ಡಾನೆ ಮರಿ ಪುಟ್ಟಾನೆಯನ್ನು ಸೀದಾ ವೇಗವಾಗಿ ತಳ್ಳುತ್ತಾ ಸಾಗಿದೆ. ಇದನ್ನು ಗಮನಿಸಿದ ಆನೆಗಳ ಹಿಂಡಿನಲ್ಲಿದ್ದ ದೊಡ್ಡ ಆನೆ ಮಧ್ಯೆ ಬಂದು ಎರಡು ಮರಿಗಳನ್ನು ಬಿಡಿಸಿ ಜಗಳ ಮಾಡದಂತೆ ದೂರ ಓಡಿಸಿವೆ. ಈ ವಿಡಿಯೋ ಈಗ ಸಾಕಷ್ಟು ವೈರಲ್ ಆಗಿದ್ದು ಅನೇಕರು ಹಲವು ರೀತಿಯ ಕಾಮೆಂಟ್ ಮಾಡಿದ್ದಾರೆ.

ಮಕ್ಕಳ ಜಗಳ ನೀವಂದುಕೊಂಡಷ್ಟು ಸರಳ ಇರೋದಿಲ್ಲ!

ಅನೇಕರು ಈ ವಿಡಿಯೋವನ್ನು ಮನೆಯಲ್ಲಿರುವ ಮಕ್ಕಳ ಕಿತ್ತಾಟಕ್ಕೆ ಹೋಲಿಸಿದ್ದಾರೆ. ಈ ವಿಡಿಯೋವನ್ನು ಪೋಸ್ಟ್ ಮಾಡಿದ ಐಎಫ್‌ಎಸ್ ಅಧಿಕಾರಿ ಪರ್ವಿನ್ ಕಸ್ವಾನ್ ಅವರು ಕಸಿನ್ಸ್‌ಗಳು ಫೈಟ್ ಮಾಡುವಾಗ ದೊಡ್ಡವರು ಮಧ್ಯಪ್ರವೇಶಿಸಲೇಬೇಕಾಗುತ್ತದೆ ಎಂದು ಬರೆದುಕೊಂಡಿದ್ದಾರೆ.  ಅನೇಕರು ತಮ್ಮ ಸಹೋದರ ಸಹೋದರಿಯರ ನಡುವೆ ಆಗುವ ಇದೇ ರೀತಿಯ ಹೊಡೆದಾಟವನ್ನು ನೆನಪು ಮಾಡಿಕೊಂಡಿದ್ದಾರೆ. ಈ ವಿಡಿಯೋ ನನಗೆ ನನ್ನ ದೊಡ್ಡಣ್ಣನನ್ನು ನೆನಪು ಮಾಡಿತು. ಆತ ಈಗ ವಿದೇಶದಲ್ಲಿ ಎಂಎಸ್ ಮಾಡುತ್ತಿದ್ದಾನೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. 

ಸಣ್ಣವರು ಯಾವಾಗಲೂ ಕೀಟಲೆ ಮಾಡಿ ಮುಗ್ಧರಂತೆ ವರ್ತಿಸುತ್ತಾರೆ. ಆದರೆ ಬೈಗುಳ ಪೆಟ್ಟು ಯವಾಗಲೂ ದೊಡ್ಡವರಿಗೆ ಮೀಸಲಿರುತ್ತದೆ ಎಂದು ವಿಡಿಯೋ ನೋಡಿದ ಒಬ್ಬರು ಕಾಮೆಂಟ್ ಮಾಡಿದ್ದಾರೆ.  ಅಲ್ಲದೇ ಆನೆಗಳಲ್ಲೂ ಹಿರಿಯ ಆನೆಗಳಿಗೆ ಯಾವ ಸಮಯದಲ್ಲಿ ಮಧ್ಯ ಪ್ರವೇಶಿಸಬೇಕು ಎಂದು ತಿಳಿದಿರುತ್ತದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ. 

 

Follow Us:
Download App:
  • android
  • ios