- Home
- Karnataka Districts
- Bengaluru: ತೀವ್ರ ಬರಗಾಲದ ನಡುವೆಯೂ ತುಂಬಿದ ಆದಿ ಹೊಸಹಳ್ಳಿ ಕಲ್ಯಾಣಿ; ಇದು ಆರ್ಟ್ ಆಫ್ ಲಿವಿಂಗ್ ಜಲಕ್ರಾಂತಿ
Bengaluru: ತೀವ್ರ ಬರಗಾಲದ ನಡುವೆಯೂ ತುಂಬಿದ ಆದಿ ಹೊಸಹಳ್ಳಿ ಕಲ್ಯಾಣಿ; ಇದು ಆರ್ಟ್ ಆಫ್ ಲಿವಿಂಗ್ ಜಲಕ್ರಾಂತಿ
ತೀವ್ರ ಬರಗಾಲದ ನಡುವೆಯೂ ನೆಲಮಂಗಲದ ಆದಿ ಹೊಸಹಳ್ಳಿ ಗ್ರಾಮದ ಕೆರೆಯ ಕಲ್ಯಾಣಿ ನೀರಿನಿಂದ ತುಂಬಿದೆ. ಆರ್ಟ್ ಆಫ್ ಲಿವಿಂಗ್ ಸಂಸ್ಥೆಯು ಕೈಗೊಂಡ ಜಲ ಸಂರಕ್ಷಣೆ ಮತ್ತು ನದಿ ಪುನಶ್ಚೇತನ ಕಾರ್ಯಕ್ರಮವೇ ಈ ಅದ್ಭುತ ಬದಲಾವಣೆಗೆ ಕಾರಣ. ಇದರಿಂದ ಅಂತರ್ಜಲ ಮಟ್ಟ ಹೆಚ್ಚಾಗಿ ಕೃಷಿ ಮತ್ತು ನೀರಿನ ಸಮಸ್ಯೆ ದೂರವಾಗಿದೆ.

ಬರಗಾಲದಲ್ಲೂ ತುಂಬಿ ತುಳುಕುತ್ತಿರುವ ಈ ಕಲ್ಯಾಣಿಯ ರಹಸ್ಯವೇನು?
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಆದಿ ಹೊಸಹಳ್ಳಿ ಗ್ರಾಮದ ಕಲ್ಯಾಣಿ ಪ್ರದೇಶ ತೀವ್ರ ಬರಗಾಲದ ನಡುವೆಯೂ ತುಂಬಿ ತುಳುಕುತ್ತಿದೆ. ಒಂದು ಕಾಲದಲ್ಲಿ ತೀವ್ರ ನೀರಿನ ಕೊರತೆ, ಒಣ ಭೂಮಿ ಮತ್ತು ಕುಡಿಯುವ ನೀರಿಗೂ ಇಲ್ಲಿ ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈ ವರ್ಷ ಮಳೆ ಕೈಕೊಟ್ಟಿದ್ದರೂ ಇಲ್ಲಿ ನೀರು ಈಗ ಸಮೃದ್ಧವಾಗಿದ್ದು, ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ದೂರವಾಗಿದೆ. ಇದಕ್ಕೆ ಮುಖ್ಯ ಕಾರಣ 2013ರಲ್ಲಿ ಆರ್ಟ್ ಆಫ್ ಲಿವಿಂಗ್ ಸಂಸ್ಥೆ ಕೈಗೊಂಡ ಜಲ ಸಂರಕ್ಷಣೆ ಮತ್ತು ನದಿ ಪುನಶ್ಚೇತನ ಕಾರ್ಯಕ್ರಮ.
ಅಂತರ್ಜಲ ಮಟ್ಟ ಹೆಚ್ಚಳ
ಹೌದು, ಆದಿ ಹೊಸಹಳ್ಳಿಯ ಕಲ್ಯಾಣಿ, ಮತ್ತು ಸುತ್ತಮುತ್ತಲಿನ ಕೆರೆ ಪ್ರದೇಶದಲ್ಲಿ ಜಲಮರುಪೂರಣ ರಚನೆಗಳನ್ನು ನಿರ್ಮಿಸಿ, ಸಾವಿರಾರು ಮರಗಳನ್ನು ನೆಟ್ಟು ಅಂತರ್ಜಲ ಮಟ್ಟವನ್ನು ಹೆಚ್ಚಿಸುವ ಕಾರ್ಯ ಮಾಡಿದೆ. ಇಲ್ಲಿ ಸದ್ಯ ಬೆಳೆದಿರುವ ಪ್ರಕೃತಿಯ ಹಲವು ಪ್ರಾಣಿ, ಪಕ್ಷಿಗಳಿಗೆ ಆಶ್ರಯ ನೀಡುತ್ತಿದೆ. ಪುನಶ್ಚೇತನ ಕೈಗೊಂಡ ಬಳಿಕ ಕೆರೆ ಮತ್ತೆ ನೀರು ತುಂಬಿ ತುಳುಕುತ್ತಿದೆ.
ಕೃಷಿ ಚಟುವಟಿಕೆಗಳಿಗೂ ಪೂರಕ
ಆದಿ ಹೊಸಹಳ್ಳಿಯ ಕಲ್ಯಾಣಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಮರುಪೂರಣ ರಚನೆಗಳನ್ನು ನಿರ್ಮಿಸಲಾಗಿತ್ತು. ಅಲ್ಲದೇ ಸಾವಿರಾರು ಸಸಿಗಳನ್ನು ನಾಟಿ ಮಾಡಿ ಬೆಳೆಸಿದ್ದರು. ಇದರಿಂದ ಸುತ್ತಮುತ್ತಿನ ಪ್ರದೇಶದಲ್ಲಿ ಅಂತರ್ಜಲ ಮಟ್ಟವನ್ನು ಹೆಚ್ಚಿಸಿದೆ. ಸ್ಥಳೀಯರು ಹೇಳುವಂತೆ, ಈ ಹಿಂದೆ ಈ ಪ್ರದೇಶದಲ್ಲಿ ನೀರಿಗಾಗಿ ದೂರ ಅಲಿಯಬೇಕಾದ ಸ್ಥಿತಿ ಇತ್ತು. ಆದರೆ ಈಗ ಕಲ್ಯಾಣಿ ಸೇರಿದಂತೆ ಸುತ್ತಮುತ್ತಲಿನ ಬಾವಿಗಳಲ್ಲಿ ನೀರು ಲಭ್ಯವಾಗಿದೆ. ಇದರಿಂದ ಕೃಷಿ ಚಟುವಟಿಕೆ ಕಾರ್ಯಗಳು ಉತ್ತಮವಾಗಿದೆ.
13 ವರ್ಷಗಳ ಕಾಲ ನಡೆಸಿದ ನಿರಂತರ ಪ್ರಯತ್ನ
ಆರ್ ಆಫ್ ಲಿವೀಂಗ್ ಸಂಸ್ಥೆಯೂ 2017ರಲ್ಲಿ ಈ ಪ್ರದೇಶದ ಸುಮಾರು 50 ಎಕರೆ ವಿಸ್ತೀರ್ಣ ಕೆರೆಯನ್ನು ಪುನರುಜ್ಜೀವನ ಮಾಡುವ ಕೆಲಸ ಆರಂಭಿಸಲಾಗಿತ್ತು. ಕೆರೆಯ ಮಧ್ಯದಲ್ಲಿ ನೀರಿನ ಕೊಳವನ್ನು ನಿರ್ಮಿಸಿಲಾಗಿತ್ತು. ಇಲ್ಲಿ ಫೀಡರ್ ಸ್ಟೀಮ್‌ಗಳಲ್ಲಿ ಕೆಲಸ ಮಾಡಲಾಗಿತ್ತು. ಕೆರೆ ಸಂಪೂರ್ಣವಾಗಿ ಒಣಗಿ ಹೇಗಿತ್ತು. ಆದರೆ ಸತತವಾಗಿ 13 ವರ್ಷಗಳ ಕಾಲ ನಡೆಸಿದ ನಿರಂತರ ಪ್ರಯತ್ನ ಈ ವರ್ಷ ಫಲ ನೀಡಿತ್ತು. ಬರಗಾಲದ ಸಮಯದಲ್ಲೂ ನೀರಿಗೆ ಸಮಸ್ಯೆ ಇಲ್ಲದಂತಾಗಿದೆ.
8ಕ್ಕೂ ಹೆಚ್ಚು ರಾಜ್ಯಗಳಲ್ಲಿ ಜಲಮರುಪೂರಣ
ಒಂದು ಗಮನಿಸಬೇಕಾದ ಮಹತ್ವದ ಅಂಶವೆಂದರೆ, ಕರ್ನಾಟಕದ 12 ನದಿ ಮತ್ತು ಹಳ್ಳಗಳ ಪ್ರದೇಶಗಳಲ್ಲಿ ಆರ್ಟ್ ಆಫ್ ಲಿವಿಂಗ್ 43,717ಕ್ಕೂ ಹೆಚ್ಚು ಜಲಮರುಪೂರಣ ನಿರ್ಮಿಸಿದೆ. ಅಲ್ಲದೇ 1.17 ಲಕ್ಷಕ್ಕೂ ಹೆಚ್ಚು ಮರಗಳನ್ನು ನಾಟಿ ಮಾಡಿ ಫೋಷಣೆ ಮಾಡಿದೆ. ಶ್ರೀ ರವಿಶಂಕರ್ ಗುರೂಜಿ ಅವರ ಮಾರ್ಗದರ್ಶನದಲ್ಲಿ 2013ರಿಂದ ಪುನರುಜ್ಜೀವನ ಕಾರ್ಯಕ್ರಮವನ್ನು ಆರೋಜಿಸಲಾಗುತ್ತಿತ್ತು. ಕರ್ನಾಟಕ ಮಾತ್ರವಲ್ಲದೆ, ಮಹಾರಾಷ್ಟ್ರ, ತಮಿಳುನಾಡು, ಕೇರಳ ಸೇರಿದಂತೆ 8ಕ್ಕೂ ಹೆಚ್ಚು ರಾಜ್ಯಗಳಲ್ಲಿ 70ಕ್ಕೂ ಹೆಚ್ಚು ನದಿ, ಉಪನದಿ ಹಾಗೂ ಕಲ್ಯಾಣಿಗಳ ಪುನಃ ಮರುಪಿಸುವ ಕಾರ್ಯಗಳನ್ನು ಮಾಡಲಾಗುತ್ತಿದೆ.

