SSLC ಪರೀಕ್ಷೆ: ಮಗನನ್ನು ಕೂರಿಸಿ 3 ದಿನ 105 ಕಿ.ಮೀ ಸೈಕಲ್ ತುಳಿದ ತಂದೆ

ಮಗನನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಬಡ ತಂದೆ 4 ದಿನ 105 ಕಿಲೋ ಮೀಟರ್ ದೂರ ಸೈಕಲ್ ತುಳಿದಿದ್ದಾರೆ. ಸಾರ್ವಜನಿಕ ಸಾರಿಗೆ ಸೌಕರ್ಯವಿಲ್ಲದೆ, ಪರೀಕ್ಷೆ ಬರೆಯಲು ಮಗನನ್ನು ಕೂರಿಸಿಕೊಂಡು ಸೈಕಲ್ ತುಳಿದಿದ್ದಾರೆ.

father takes his son on bicycle rides 105 km  to attend class 10 exam

ಭೋಫಾರ್ಳ(ಆ.20): ಮಗನನ್ನು ಎಸ್‌ಎಸ್‌ಎಲ್‌ಸಿ ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಬಡ ತಂದೆ 4 ದಿನ 105 ಕಿಲೋ ಮೀಟರ್ ದೂರ ಸೈಕಲ್ ತುಳಿದಿದ್ದಾರೆ. ಸಾರ್ವಜನಿಕ ಸಾರಿಗೆ ಸೌಕರ್ಯವಿಲ್ಲದೆ, ಪರೀಕ್ಷೆ ಬರೆಯಲು ಮಗನನ್ನು ಕೂರಿಸಿಕೊಂಡು ಸೈಕಲ್ ತುಳಿದಿದ್ದಾರೆ.

ಮಧ್ಯಪ್ರದೇಶದ ಬಾಲಕ ಎಸ್‌ಎಸ್‌ಎಲ್‌ಸಿ ಪುನರ್ ಪರೀಕ್ಷೆ ಬರೆಯಬೇಕಿತ್ತು. ಆದರೆ ಲಾಕ್‌ಡೌನ್‌ನಿಂದಾಗಿ ಬಸ್‌ಗಳಿರಲಿಲ್ಲ. ಆದರೂ ಹಠ ಬಿಡದ ತಂದೆ ಮಗನನ್ನೂ ಕೂರಿಸಿ ಸ್ವತಃ ಪರೀಕ್ಷೆ ಕೇಂದ್ರಕ್ಕೆ ತಲುಪಿಸಿದ್ದಾರೆ.

ಅನಾರೋಗ್ಯ ಪೀಡಿತ ಅಪ್ಪನನ್ನು 7 ದಿನ ಸೈಕಲ್ ತುಳಿದು ಮನೆಗೆ ಕರೆತಂದ 13ರ ಮಗಳು!

ಪರೀಕ್ಷೆಯಲ್ಲಿ ಫೇಲ್ ಆದ ವಿದ್ಯಾರ್ಥಿಗಳಿಗಾಗಿ ಮಧ್ಯ ಪ್ರದೇಶದ ಸರ್ಕಾರ ಮಾಡಿದ ರುಕ್‌ ಜಾನಾ ನಹಿ ಯೋಜನೆಯಡಿ ಮತ್ತೊಮ್ಮೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುವುದಕ್ಕಾಗಿ 30 ವರ್ಷದ ವ್ಯಕ್ತಿ ಶೋಬ್ ರಾಮ್ ಮಗನನ್ನು ಧಾರ್ ಟೌನ್‌ ತನಕ ಸೈಕಲ್‌ನಲ್ಲಿ ಕರೆದೊಯ್ದಿದ್ದಾರೆ.

ಮೊದಲ ಪ್ರಯತ್ನದಲ್ಲಿ ಪರೀಕ್ಷೆಯಲ್ಲಿ ಉತ್ತೀರ್ಣರಾಗದಿದ್ದಲ್ಲಿ, ಮತ್ತೊಮ್ಮೆ ಪರೀಕ್ಷೆ ಬರೆಯುವ ಅವಕಾಶವಿದು. ಬಸ್‌ ಸೇರಿ ಯಾವುದೇ ಸಾರ್ವಜನಿಕ ವಾಹನಗಳು ಓಡಾಡುತ್ತಿಲ್ಲ. ಈ ಅವಕಾಶ ಕಳೆದುಕೊಂಡರೆ ನನ್ನ ಮಗನ ಒಂದು ವರ್ಷ ವ್ಯರ್ಥವಾಗುತ್ತದೆ. ಹಾಗಾಗಿ ಸೈಕಲ್‌ನಲ್ಲಿಯೇ ಮಗನನ್ನು ಕರೆದೊಯ್ಯಲು ನಿರ್ಧರಿಸಿದೆ ಎನ್ನುತ್ಥಾರೆ ಶೋಭ್ ರಾಮ.

ಶಾಲೆಗೆ ನಿತ್ಯ 24 ಕಿ.ಮೀ. ಸೈಕಲ್‌ ತುಳಿದಾಕೆ ಟಾಪರ್‌!

ಬೈಕ್ ತೆಗೆದುಕೊಳ್ಳುವಷ್ಟು ಹಣ ನಮ್ಮಲ್ಲಿಲ್ಲ. ಯಾರೂ ಸಹಾಯವೂ ಮಾಡುವುದಿಲ್ಲ. ಮಗನನ್ನು ಪರೀಕ್ಷೆಗೆ ಕರೆತರುವ ಮೂಲಕ ಅವನ ಜೀವನವನ್ನು ಚೆನ್ನಾಗಿರಿಸಲು ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.

ಧಾರ್‌ನಲ್ಲಿ ಉಳಿಯಬೇಕಾದ್ದರಿಂದ ತಂದೆ ಮಗ ತಮಗೆ ಬೇಕಾದ ಆಹಾರ ಹಾಗೂ ಇತರ ವಸ್ತುಗಳನ್ನೂ ಕಟ್ಟಿಕೊಂಡಿದ್ದರು. ನಾವು ಸೋಮವಾರ ಹೊರಟೆವು. ಮಾನಾವರ್ ನಗರದಲ್ಲಿ ರಾತ್ರಿ ಕಳೆದು ಧಾರ್‌ಗೆ ಗುರುವಾರ ತಲುಪಿದೆವು ಎಂದಿದ್ದಾರೆ.

Latest Videos
Follow Us:
Download App:
  • android
  • ios