Asianet Suvarna News Asianet Suvarna News

ಪುಟ್ಬಾಲ್ ಮ್ಯಾಚ್ ವೇಳೆ ಅಪ್ಪನ ಅವತಾರ ಅನುಕರಿಸಿದ ಪುಟಾಣಿ: ವಿಡಿಯೋ ವೈರಲ್

ಇಲ್ಲೊಂದು ಕಡೆ ಮಗು ಅಪ್ಪನೊಂದಿಗೆ ಕುಳಿತು ಪುಟ್ಭಾಲ್ ಮ್ಯಾಚ್ ಆಟವಾಡುತ್ತಿದ್ದು, ಅಪ್ಪ ಏನು ಮಾಡುತ್ತಿದ್ದಾರೋ ಅದನ್ನೇ ಈ ಪುಟ್ಟ ಮಗನೂ ಮಾಡುತ್ತಿರುವುದು ನೋಡಿದರೆ ನಗೆಯುಕ್ಕುತ್ತದೆ.

Father son due Watching Football Match in home Little baby imitates his father reaction goes viral akb
Author
First Published Dec 28, 2022, 7:40 PM IST

ಮನೆಯಲ್ಲಿ ಪುಟ್ಟ ಮಕ್ಕಳಿದ್ದರೆ ಅವರ ಮುಂದೆ ಬಹಳ ಜಾಗರೂಕತೆಯಿಂದ ಇರಬೇಕಾಗುತ್ತದೆ. ತನ್ನ ಸುತ್ತಮುತ್ತಲೂ ನಡೆಯುವ ಪ್ರತಿ ಚಟುವಟಿಕೆಯನ್ನು ಮಗು ಎಚ್ಚರದಿಂದ ಗಮನಿಸುವ ಜೊತೆ ಅದನ್ನು ಅನುಕರಿಸಲು ಆರಂಭಿಸುತ್ತದೆ. ಮೊದಲ ತೊದಲು ನುಡಿಯಿಂದ ಆರಂಭಿಸಿ ಆಹಾರ ಸೇವಿಸುವುದು, ಆಟವಾಡುವುದು, ಎಲ್ಲವನ್ನು ಮಗು ಅನುಕರಣೆಯಿಂದಲೇ ಕಲಿಯುತ್ತದೆ. ಅದೇ ರೀತಿ ಇಲ್ಲೊಂದು ಕಡೆ ಮಗು ಅಪ್ಪನೊಂದಿಗೆ ಕುಳಿತು ಪುಟ್ಭಾಲ್ ಮ್ಯಾಚ್ ಆಟವಾಡುತ್ತಿದ್ದು, ಅಪ್ಪ ಏನು ಮಾಡುತ್ತಿದ್ದಾರೋ ಅದನ್ನೇ ಈ ಪುಟ್ಟ ಮಗನೂ ಮಾಡುತ್ತಿರುವುದು ನೋಡಿದರೆ ನಗೆಯುಕ್ಕುತ್ತದೆ.

ಕ್ರಿಕೆಟ್(cricket), ಪುಟ್ಬಾಲ್(Football), ಕಬಡ್ಡಿ (Kabaddi) ಮುಂತಾದ ಆಟಗಳನ್ನು ನೋಡುವಾಗ, ಪಂದ್ಯ ರೋಚಕವಾಗಿದ್ದಲ್ಲಿ ಕ್ರೀಡಾಭಿಮಾನಿಗಳು ಕುಳಿತಲ್ಲೇ ರೋಮಾಂಚನಗೊಳ್ಳುತ್ತಾರೆ. ಕ್ರಿಕೆಟ್ ಆದರೆ ಒಂದು ಬಾಲ್‌ನಲ್ಲಿ ಸಿಕ್ಸ್ ಹೊಡೆದರಷ್ಟೇ ಗೆಲುವು ಎಂಬಂತಹ ರೋಚಕ ಸನ್ನಿವೇಶ ಇದ್ದಾಗ ಕ್ರಿಕೆಟ್‌ ನೋಡುಗರೆಲ್ಲರೂ ತುದಿಗಾಲಲ್ಲಿ ನಿಲ್ಲುತ್ತಾ ಬ್ಯಾಟ್ಸ್‌ಮನ್ ಸಿಕ್ಸ್ ಹೊಡೆಯಲೆಂದು ಬಹಳ ಕಾತರದಿಂದ ಕಾಯುತ್ತಾ ಬೇಡುತ್ತಾ ಕ್ಷಣ ಕ್ಷಣವನ್ನು ಕೌತುಕದಿಂದ ನೋಡುವುದನ್ನು ನೋಡಬಹುದು. ಇದೇ ವೇಳೆ ಬ್ಯಾಟ್ಸ್‌ಮನ್ (Batsman) ಸಿಕ್ಸ್ ಹೊಡೆಯಲಾಗದೇ ಸೋಲಾದಾಗ ಕುಳಿತಲ್ಲೇ ತಲೆಗೆ ಕೈ ಇಡುವುದು ಅಲ್ಲೇ ಬಿದ್ದುಕೊಂಡು ಆಘಾತಕ್ಕೊಳಗಾದವರಂತೆ ಮಾಡುವುದನ್ನು ಕೂಡ ನೋಡಬಹುದು. ಅದೇ ರೀತಿ ಇಲ್ಲಿ. ತಂದೆ ಮಗ ಪುಟ್ಬಾಲ್ ಮ್ಯಾಚ್ (Football Match) ನೋಡುತ್ತಿದ್ದಾರೆ.  ಈ ವೇಳೆ ಏನಾಗಿದೆ ಎಂಬುದು ಗೊತ್ತಿಲ್ಲ ಏಕೆಂದರೆ ವಿಡಿಯೋದಲ್ಲಿ ಈ ಅಪ್ಪ ಮಗನ ರಿಯಾಕ್ಷನ್ ಮಾತ್ರವೇ ಕಾಣಿಸುತ್ತಿದೆ. 

ಅಪ್ಪ ಹೋ ಎಂದು ಬೊಬ್ಬೆ ಹೊಡೆದು ತಲೆಗೆ ಕೂ ಇಟ್ಟು ಹಿಂದಿದ್ದ ಸೋಫಾಗೆ ಒರಗಿಕೊಂಡರೆ ಇದನ್ನು ನೋಡಿದ ಮಗುವೂ ಕೂಡ ಯಾ ಎಂದು ತನ್ನೆರಡು ಕೈಗಳನ್ನು ಮೇಲೆತ್ತುತ್ತ ಖುಷಿ ಪಡುತ್ತಿದೆ. ಈ ವೇಳೆ ಅಪ್ಪ ಸೋಫಾಗೆ ಒರಗಿ ಕೈ ಹಣೆಗಿಟ್ಟಿರುವುದನ್ನು ನೋಡಿದ ಮಗು ಅದೂ ಕೂಡ ತನ್ನೆರಡು ಕೈಗಳನ್ನು ಮೇಲೆತ್ತಿ ಸೋಫಾದ ಮೇಲೆ ಬಿದ್ದುಕೊಳ್ಳುತ್ತದೆ. ಅಪ್ಪನ ರಿಯಾಕ್ಷನ್ ನೋಡಿದರೆ ಮ್ಯಾಚ್ ಸೋತಿರುವಂತೆ ಕಾಣಿಸುತ್ತಿದೆ. ಆದರೆ ಈ ಎರಡು ವರ್ಷದ ಪುಟ್ಟ ಕಂದನಿಗೆ ಅದು ಗೊತ್ತಾಗಿಲ್ಲ. ಅದು ಖುಷಿಯಿಂದಲೇ ಅಪ್ಪನ ಅನುಕರಿಸಿ ಕೈಗಳನ್ನು ಮೇಲೆತ್ತಿ ಬೊಬ್ಬೆ ಹೊಡೆಯುತ್ತಿದೆ. 12 ಸೆಕೆಂಡ್‌ಗಳ ಈ ವಿಡಿಯೋವನ್ನು 2.4 ಮಿಲಿಯನ್‌ಗೂ ಹೆಚ್ಚು ಜನ ವೀಕ್ಷಿಸಿದ್ದಾರೆ. ಅನೇಕರು ವಿವಿಧ ರೀತಿಯ ಕಾಮೆಂಟ್ ಮಾಡಿದ್ದು, ಮಗುವಿನ ರಿಯಾಕ್ಷನ್‌ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಆ್ಯಷಸ್ ಸರಣಿ: 2 ವರ್ಷಗಳ ಬಳಿಕ ಇಶಾಂತ್‌ ಅನುಕರಣೆ ಮಾಡಿದ ಸ್ಮಿತ್!

Buitengebieden ಎಂಬ ಟ್ವಿಟ್ಟರ್ ಪೇಜ್‌ನಿಂದ ಈ ವಿಡಿಯೋ ಅಪ್‌ಲೋಡ್ ಆಗಿದೆ. 2 ವರ್ಷದ ಮಗು ಥಿಯೋ ತನ್ನ ಅಪ್ಪನೊಂದಿಗೆ ಗೇಮ್ ನೋಡುತ್ತಿದೆ ಎಂದು ಬರೆದುಕೊಂಡು ಈ ವಿಡಿಯೋವನ್ನು ಪೋಸ್ಟ್ ಮಾಡಲಾಗಿದೆ. ಈ ವಿಡಿಯೋ ನೋಡಿದ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಮಕ್ಕಳು ನಿಜವಾಗಿಯೂ ಪ್ರಾಮಾಣಿಕರು ಎಂದು ಕಾಮೆಂಟ್ ಮಾಡಿದ್ದಾರೆ. ಇದೊಂದು ನಾನು ನೋಡಿದ ಅತ್ಯುತ್ತಮ ವಿಡಿಯೋ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ನನ್ನ ತಾತನ ಜೊತೆ ಕ್ರಿಕೆಟ್ ಮ್ಯಾಚ್ ನೋಡುವ ವೇಳೆ ನಾನು ಹೀಗೆ ಮಾಡುತ್ತೇನೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಆದರೆ ಆರು ಬಾಲ್ ಆದರೆ ಒಂದು ಒವರ್ ಆಗುತ್ತದೆ ಎಂಬುವ ಜ್ಞಾನವೂ ಆಗ ನನಗೆ ಇರಲಿಲ್ಲ. ಈಗ ತಾತನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಮತ್ತೊಬ್ಬರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.  ಒಟ್ಟಿನಲ್ಲಿ ಮಕ್ಕಳು ಎಲ್ಲವನ್ನು ಅನುಕರಣೆ ಮಾಡುತ್ತಾರೆ ಎಂಬುದಂತೂ ನಿಜ ಇದೇ ಕಾರಣಕ್ಕೆ ಮಕ್ಕಳ ಮುಂದೆ ಒಳ್ಳೆಯ ಮಾತಾಡಬೇಕು ಎಂದು ಹಿರಿಯರು ಹೇಳುವುದನ್ನು ನೀವು ಕೇಳಿರಬಹುದು. 

ಅನುಕರಣೆ ಮೂಲಕ ಅಭಿಮಾನಿಗಳನ್ನ ರಂಜಿಸಿದ ಸೆಹ್ವಾಗ್-ಆಫ್ರಿದಿ

Follow Us:
Download App:
  • android
  • ios