ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ನಡುವಿನ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾ ವೇಗಿಯನ್ನು ಅನುಕರಣೆ ಮಾಡಲಾಗಿದೆ. 2 ವರ್ಷಗಳ ಹಿಂದೆ ಇಶಾಂತ್ ಶರ್ಮಾ ಮಾಡಿದ ಸ್ಲೆಡ್ಜಿಂಗ್‌ನ್ನು ಇದೀಗ ಅನುಕರಣೆ ಮಾಡಿ ತಿರುಗೇಟು ನೀಡಲಾಗಿದೆ.
ಎಡ್ಜ್‌ಬಾಸ್ಟನ್(ಆ.05): ಇಂಗ್ಲೆಂಡ್ ವಿರುದ್ಧದ ಆ್ಯಷಸ್ ಟೆಸ್ಟ್ ಸರಣಿಯಲ್ಲಿ ಸ್ಟೀವ್ ಸ್ಮಿತ್ ದಿಟ್ಟ ಹೋರಾಟದ ಮೂಲಕ ಗಮನಸೆಳೆದಿದ್ದಾರೆ. ಇದೇ ವೇಳೆ ಸ್ಮಿತ್‌ಗೆ ಅಭಿಮಾನಿಗಳು ಬಾಲ್ ಟ್ಯಾಂಪರ್ ವಿಚಾರ ಮುಂದಿಟ್ಟು ಕಿಚಾಯಿಸಿದ್ದಾರೆ. ಆದರೆ ಎಲ್ಲದಕ್ಕೂ ಬ್ಯಾಟ್ ಮೂಲಕ ಉತ್ತರಿಸಿದ ಸ್ಮಿತ್ ಇದೀಗ ಟೀಂ ಇಂಡಿಯಾ ವೇಗಿ ಇಶಾಂತ್ ಶರ್ಮಾಗೆ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಇಶಾಂತ್ ಶರ್ಮಾ ಸ್ಟೈಲ್ ಕಾಫಿ ಮಾಡಿದ ಕ್ರಿಕೆಟ್ ದಿಗ್ಗಜರು
ಪ್ರತಿ ದಿನ ಸ್ಮಿತ್ ಬ್ಯಾಟಿಂಗ್ ಅಥವಾ ಫೀಲ್ಡಿಂಗ್ ಇಳಿದಾಗ ಅಭಿಮಾನಿಗಳು ಸ್ಮಿತ್‌ನ್ನು ಕಾಡಿದ್ದಾರೆ. ಬ್ಯಾಟಿಂಗ್ ವೇಳೆ ಸ್ಮಿತ್ ಇಶಾಂತ್ ಶರ್ಮಾ ಸ್ಲೆಡ್ಜಿಂಗ್ ಅನುಕರಣೆ ಮಾಡಿದ್ದಾರೆ. 2017ರ ಟೆಸ್ಟ್ ಪಂದ್ಯದಲ್ಲಿ ವೇಗಿ ಇಶಾಂತ್ ಶರ್ಮಾ, ಸ್ಟೀವ್ ಸ್ಮಿತ್‌ರನ್ನು ಅಣಕಿಸಿದ್ದರು. ಸ್ಮಿತ್ ಶೈಲಿಯನ್ನು ಅತಿರೇಕದಿಂದ ಅನುಕರಣೆ ಮಾಡಿದ್ದರು. ಇದೇ ಶೈಲಿಯನ್ನು ಸ್ಮಿತ್ ಇದೀಗ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಅನುಕರಣೆ ಮಾಡಿ ತಿರುಗೇಟು ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಇಶಾಂತ್ ಶರ್ಮಾ ಹಾಗೂ ಸ್ಟೀವ್ ಸ್ಮಿತ್ ಅನುಕರಣೆ ವೈರಲ್ ಆಗುತ್ತಿದೆ. ಇವರಿಬ್ಬರ ಅನುಕರಣೆ ಅಭಿಮಾನಿಗಳಿಗೆ ಮನರಂಜನೆ ನೀಡಿದೆ.
