ಮೈದಾನದಲ್ಲಿ ಸಿಕ್ಸರ್-ಬೌಂಡರಿ ಮೂಲಕ ಅಭಿಮಾನಿಗಳನ್ನ ರಂಜಿಸಿರುವ ವೇರೇಂದ್ರ ಸೆಹ್ವಾಗ್ ಹಾಗೂ ಶಾಹಿದ್ ಆಫ್ರಿದಿ ವಿದಾಯ ಬಳಿಕ ಇದೀಗ ಅನುಕರಣೆ ಮೂಲಕ ಎಲ್ಲರ ಗಮನಸೆಳೆದಿದ್ದಾರೆ. ಇಲ್ಲಿದೆ ಸೆಹ್ವಾಗ್ ಹಾಗೂ ಅಫ್ರಿದಿ ಅನುಕರಣೆ.

ದುಬೈ(ಸೆ.22): ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್ ಹಾಗೂ ಪಾಕಿಸ್ತಾನ ಮಾಜಿ ಕ್ರಿಕೆಟಿಗ ಶಾಹಿದ್ ಆಫ್ರಿದಿ ವಿಶ್ವದ ಅತ್ಯಂತ ಶ್ರೇಷ್ಠ ಬ್ಯಾಟ್ಸ್‌ಮನ್. ಇಬ್ಬರೂ ಕೂಡ ತಮ್ಮ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಗೆ ಭರಪೂರ ಮನರಂಜನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕವೂ ಲೀಗ್, ಚಾರಿಟಿ ಕ್ರಿಕೆಟ್ ಮೂಲಕವೂ ಸೆಹ್ವಾಗ್ ಹಾಗೂ ಅಫ್ರಿದಿ ಅಬ್ಬರಿಸಿದ್ದಾರೆ. ಇದೀಗ ಇವರಿಬ್ಬರು ಕ್ರಿಕೆಟಿಗರನ್ನ ಅನುಕರಣೆ ಮಾಡೋ ಮೂಲಕ ಮತ್ತೆ ಅಭಿಮಾನಿಗಳಿಗೆ ಮನರಂಜನೆ ನೀಡಿದ್ದಾರೆ.

ಆಟಗಾರರ ಶೈಲಿ ಅನುಕರಿಸೋ ಮೂಲಕ ಅನುಕರಣೆ ಮಾಡಿದ ಕ್ರಿಕೆಟಿಗ ಯಾರು ಅನ್ನೋದನ್ನ ಊಹಿಸೋ ಚಾಲೆಂಜ್‌ನಲ್ಲಿ ಸೆಹ್ವಾಗ್ ಹಾಗೂ ಆಫ್ರಿದಿ ಸೈ ಎನಿಸಿಕೊಂಡಿದ್ದಾರೆ. ಖಾಸಗಿ ಕ್ವಿಂಟ್ ವೆಬ್‌ಸೈಟ್ ನಡೆಸಿದ ಈ ವಿಶೇಷ ಕಾರ್ಯಕ್ರಮದಲ್ಲಿ ಸೆಹ್ವಾಗ್ ಹಾಗೂ ಆಫ್ರಿದಿ ಅನುಕರಣೆ ಅಭಿಮಾನಿಗಳಿಗೆ ಸಂತಸ ನೀಡಿದೆ.

ಅಫ್ರಿದಿ, ಪಾಕಿಸ್ತಾನ ಮಾಜಿ ನಾಯಕ ಇಮ್ಜಮಾಮ್ ಉಲ್ ಹಕ್ ಅವರನ್ನ ಅದ್ಬುತವಾಗಿ ಅನುಕರಣೆ ಮಾಡಿದರೆ, ಸೆಹ್ವಾಗ್ ಹರ್ಭಜ್ ಸಿಂಗ್ ಗಂಗ್ನಮ್ ಡ್ಯಾನ್ಸ್ ಅನುಕರಣೆ ಮಾಡಿದರು. ಹಲವು ಕ್ರಿಕೆಟಿಗರ ಅನುಕರಣೆಯಲ್ಲಿ ಇಬ್ಬರು ಕ್ರಿಕೆಟಿಗರ ಪ್ರದರ್ಶನ ನಿಜಕ್ಕೂ ಉತ್ತಮವಾಗಿತ್ತು.