ಮಕ್ಕಳ ನಿರ್ಧಾರದಿಂದ ಸತ್ತ ಮೇಲೂ ಕಣ್ಣೀರಿಟ್ಟ ತಂದೆ ಮೃತದೇಹ, ಕಂಡು ಕೇಳರಿಯದ ಅಂತ್ಯಸಂಸ್ಕಾರ
ತಂದೆಯ ಅಂತ್ಯಸಂಸ್ಕಾರದ ವೇಳೆ ಇಬ್ಬರು ಮಕ್ಕಳ ಜಗಳ ತಾರಕಕ್ಕೇರಿದೆ. ಜಟಾಪಟಿ ಶುರುವಾಗಿದೆ. ಇದರ ಪರಿಣಾಮ ಈ ವರೆಗೆ ಯಾರೂ ಕಂಡು ಕೇಳರಿಯದ ಅಂತ್ಯಸಂಸ್ಕಾರ ನಡೆಸಲು ಮುಂದಾದ ಘಟನೆ ನಡೆದಿದೆ

ಭೋಪಾಲ್(ಫೆ.4) ಹುಟ್ಟುತ್ತಾ ಅಣ್ಣತಮ್ಮಂದಿರು, ಬೆಳೆಯುತ್ತಾ ದಾಯಾದಿಗಳು ಅನ್ನೋ ಮಾತಿನಂತೆ ಹಲವು ಘಟನೆಗಳು ನಡೆದಿದೆ. ಹಣಕ್ಕಾಗಿ, ಜಮೀನಿಗಾಗಿ, ಆಂತರಿಕ ಕಲಹಗಳಿಂದ ಕುಟುಂಬವೇ ನಾಶಗೊಂಡ ಘಟನೆಗಳು ನಡೆದಿದೆ. ಮಕ್ಕಳ ಜಗಳದಿಂದ ಪೋಷಕರು ಬಲಿಯಾದ ಹಲವು ಉದಾಹರಣೆಗಳಿವೆ. ಆದರೆ ಈಗ ನಡೆದಿರುವ ಘಟನೆ ಅಚ್ಚರಿ ಮಾತ್ರವಲ್ಲ, ಇವರೆಂತಾ ಮಕ್ಕಳು ಅನ್ನೋು ಪ್ರಶ್ನೆ ಮೂಡಿಸಲಿದೆ. ತಂದೆ ಮೃತಪಟ್ಟಿದ್ದಾರೆ. ಅಂತ್ಯಸಂಸ್ಕಾರಕ್ಕೆ ತಯಾರಿ ಆರಂಭಗೊಂಡಿದೆ. ಇದರ ನಡುವೆ ಇಬ್ಬರು ಮಕ್ಕಳಿಗೆ ಜಗಳ ಶುರುವಾಗಿದೆ. ತಂದೆಯಲ್ಲಿ ಅಳಿದುಳಿದ ಆಸ್ತಿ ಪಡೆಯಲು ನಾನು ಅಂತ್ಯಸಂಸ್ಕಾರ ಮಾಡುತ್ತೇನೆ, ನಾನು ಮಾಡುತ್ತೇನೆ ಎಂದು ಜಗಳ. ಈ ಜಗಳ ಈ ಮಟ್ಟಿನ ತಿರುವು ಪಡೆದುಕೊಳ್ಳಲಿದೆ ಅನ್ನೋದು ಮಾತ್ರ ಯಾರೂ ಊಹಿಸಿಲ್ಲ. ಅಷ್ಟಕ್ಕೂ ಮೃತಪಟ್ಟ ತಂದೆಯ ಅಂತ್ಯಸಂಸ್ಕಾರವನ್ನು ಮಕ್ಕಳು ಮಾಡಿದ್ದು ಹೇಗೆ ಗೊತ್ತಾ?
ಭೋಪಾಲ್‌ನ ತಾಲ್ ಲಿಧೋರ ಗ್ರಾಮದಲ್ಲಿ ನಡೆದಿದೆ. 85 ವರ್ಷದ ದಯಾನಿ ಸಿಂಗ್ ಘೋಷ್ ಅನಾರೋಗ್ಯದಿಂದ ಮೃತಪಟ್ಟಿದ್ದಾರೆ. ಇವರಿಗೆ ದಾಮೋದರ್ ಸಿಂಗ್ ಹಾಗೂ ಕಿಶನ್ ಸಿಂಗ್ ಎಂಬ ಇಬ್ಬರು ಮಕ್ಕಳು. ದಯಾನಿ ಸಿಂಗ್ ಘೋಷ್‌ಗೆ ಸೂಕ್ತ ಚಿಕಿತ್ಸೆ, ಸರಿಯಾದ ಆರೈಕೆ ಸಿಕ್ಕಿದ್ದರೆ ಒಂದಷ್ಟು ಕಾಲ ಆರೋಗ್ಯವಾಗಿರುತ್ತಿದ್ದರು. ಈ ಪೈಕಿ ದಾಮೋದರ್ ಜೊತೆ ತಂದೆ ದಯಾನಿ ಸಿಂಗ್ ಘೋಷ್ ಉಳಿದುಕೊಂಡಿದ್ದರು. ತಂದೆಯನ್ನು ಒಂದಷ್ಟು ಆರೈಕೆ ಮಾಡಿದ್ದಾರೆ. ತನ್ನಲ್ಲಿರುವ ಆರ್ಥಿಕ ಶಕ್ತಿಗೆ ಅನುಗುಣವಾಗಿ ದಾಮೋದರ್ ತಂದೆಯನ್ನು ನೋಡಿಕೊಂಡಿದ್ದಾರೆ. ಆದರೆ ಈ ವೇಳೆ ಕಿಶನ್ ಸಿಂಗ್ ತಿರುಗಿ ನೋಡಿಲ್ಲ.
ರಾತ್ರಿ ಹೊತ್ತು ಅಂತಿಮ ಸಂಸ್ಕಾರ ಯಾಕೆ ಮಾಡಬಾರದು ಗೊತ್ತಾ?
ತಂದೆ ಮೃತಪಟ್ಟ ಹಿನ್ನಲೆಯಲ್ಲಿ ದಾಮೋದರ್ ಸಿಂಗ್ ಅಂತ್ಯಸಂಸ್ಕಾರಕ್ಕೆ ತಯಾರಿ ಮಾಡಿದ್ದಾರೆ. ತಂದೆಯಿಂದ ಪಾಲು ಸಿಕ್ಕ ಜಮೀನನಲ್ಲಿ ಅಂತ್ಯಸಂಸ್ಕಾರ ನಡೆಸಲು ದಾಮೋಜರ್ ಸಿಂಗ್ ನಿರ್ಧರಿಸಿದ್ದಾನೆ. ಇದರಿಂದ ತಯಾರಿಗಳು ಆರಂಭಗೊಂಡಿದೆ. ತಂದೆ ಮೃತಪಟ್ಟ ವಿಚಾರ ಮತ್ತೊಬ್ಬ ಪುತ್ರ ಕಿಶನ್ ಸಿಂಗ್ ಕಿವಿಗೂ ಬಿದ್ದಿದೆ. ಕುಟುಂಬ ಸಮೇತ ದಾಮೋದರ್ ಸಿಂಗ್ ಮನೆಯತ್ತ ಧಾವಿಸಿದ ಸಹೋದರ ಕಿಶನ್ ಸಿಂಗ್, ಜಗಳ ಶುರುಮಾಡಿದ್ದಾನೆ.
ಕುಟುಂಬಸ್ಥರು, ಆಪ್ತರು ದುಃಖದಲ್ಲಿರುವಾಗ ಕಿಶನ್ ಸಿಂಗ್ ಜಗಳ ಆರಂಭಗೊಂಡಿದೆ. ತಂದೆಯ ಅಂತ್ಯಸಂಸ್ಕಾರ ತಾನು ಮಾಡುತ್ತೇನೆ ಎಂದು ಕಿಶನ್ ಸಿಂಗ್ ತಗಾದೆ ತೆಗೆದಿದ್ದಾನೆ. ಇತ್ತ ದಾಮೋದರ್ ಸಿಂಗ್ ಮನ ಒಲಿಸುವ ಪ್ರಯತ್ನ ಮಾಡಿದ್ದಾನೆ. ತಂದೆ ಇಲ್ಲೇ ಹುಟ್ಟಿ ಬೆಳೆದಿದ್ದಾರೆ. ಇದೇ ಮನೆಯಲ್ಲಿ ಉಳಿದುಕೊಂಡಿದ್ದರು. ಹೀಗಾಗಿ ಇಲ್ಲೆ ಮಾಡುವುದು ಸೂಕ್ತ. ಕುಟುಂಬಸ್ಥರು ಎಲ್ಲರೂ ಇಲ್ಲೇ ಇದ್ದಾರೆ. ಇಲ್ಲಿಂದ ಮತ್ತೆ ಮೃತದೇಹ ಸಾಗಿಸುವುದು, ಅಂತ್ಯಸಂಸ್ಕಾರ ಮಾಡುವುದು ಕಷ್ಟವಾಗಲಿದೆ ಎಂದು ಮನವಿ ಮಾಡಿಕೊಂಡಿದ್ದರೆ. ಆದರೆ ಕಿಶನ್ ಸಿಂಗ್ ಕೇಳಿಲ್ಲ.
ಜಗಳ ಜೋರಾಗಿದೆ. ಅಷ್ಟರಲ್ಲೇ ಕುಟುಂಬಸ್ಥರು ಜಾಗ ಖಾಲಿ ಮಾಡಿದ್ದಾರೆ. ಸ್ಥಳೀಯರು ಸ್ಥಳದಿಂದ ತೆರಳಿದ್ದಾರೆ. ಇತ್ತ ತಂದೆಯ ಮೃತದೇಹ ಸುಮಾರು 4 ರಿಂದ 5 ಗಂಟೆ ಕಾಲ ಅನಾಥವಾಗಿ ಬಿದ್ದಿತ್ತು. ಇತ್ತ ಅದೇನೆ ಮಾಡಿದರೂ ತಂದೆಯ ಅಂತ್ಯಸಂಸ್ಕಾರಕ್ಕೆ ಕಿಶನ್ ಸಿಂಗ್ ಒಪ್ಪುತ್ತಿರಲಿಲ್ಲ. ಕೊನೆಗೆ ಕಿಶನ್ ಸಿಂಗ್ ಖಡಕ್ ಆಗಿ ಒಂದು ಮಾತು ಹೇಳಿದ್ದಾನೆ. ತಂದೆ ಮೃತದೇಹನ್ನು ಇಬ್ಬಾಗ ಮಾಡಿ ಇಬ್ಬರೂ ಅಂತ್ಯಸಂಸ್ಕಾರ ಮಾಡುವ ಐಡಿಯಾ ನೀಡಿದ್ದಾನೆ. ಇದಕ್ಕೆ ದಾಮೋದರ್ ಸಿಂಗ್ ಒಪ್ಪಿಲ್ಲ. ತಂದೆಯನ್ನು ನಾನು ಅಂತ್ಯಸಂಸ್ಕಾರ ಮಾಡುತ್ತೇನೆ, ಇಲ್ಲದಿದ್ದರೆ ಇಬ್ಬಾಗ ಮಾಡಬೇಕು, ಎರಡಲ್ಲಿ ಒಂದು ಒಪ್ಪಿಕೊಳ್ಳಬೇಕು ಎಂದು ಕಿಶನ್ ಸಿಂಗ್ ತಾಕೀತು ಮಾಡಿದ್ದಾನೆ. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದು ಗಮಮಿಸಿದ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿದ್ದಾರೆ. ಕೊನೆಗೆ ದಾಮೋದರ್ ನೇತೃತ್ವದಲ್ಲಿ ಅಂತ್ಯಸಂಸ್ಕಾರ ನಡೆಸಲು ಪೊಲೀಸರು ಅನುಮತಿಸಿದ್ದಾರೆ. ಸಂಪೂರ್ಣ ಪೊಲೀಸ್ ಬಂದೋಬಸ್ತ್‌ನಲ್ಲಿ ಅಂತ್ಯಂಸ್ಕಾರ ನಡೆದಿದೆ.
ಬದುಕಿರುವಾಗಲೇ ಪಿಂಡದಾನ! ನಾಗಾಸಾಧುಗಳ ಅಂತ್ಯಕ್ರಿಯೆ ಪ್ರಕ್ರಿಯೆಯೇ ಕುತೂಹಲ: ಹೀಗಿರುತ್ತೆ ನೋಡಿ ಪದ್ಧತಿ