ರಾತ್ರಿ ಹೊತ್ತು ಅಂತಿಮ ಸಂಸ್ಕಾರ ಯಾಕೆ ಮಾಡಬಾರದು ಗೊತ್ತಾ?
ರಾತ್ರಿಯ ಹೊತ್ತಲ್ಲಿ ಅಂತಿಮ ಸಂಸ್ಕಾರ ವಿಧಾನಗಳನ್ನು ಮಾಡದಿರುವ ಸಂಪ್ರದಾಯವು ಹಿಂದೂ ಧರ್ಮ ಮತ್ತು ಪ್ರಾಚೀನ ನಂಬಿಕೆಗಳೊಂದಿಗೆ ಸಂಬಂಧ ಹೊಂದಿದೆ. ಇದನ್ನು ಏಕೆ ಮಾಡಲಾಗುತ್ತದೆ ಎಂದು ತಿಳಿಯೋಣ.

ಹಿಂದೂ ಧರ್ಮದ ಪ್ರಕಾರ, ಅಂತ್ಯಕ್ರಿಯೆಯು (funeral) ಸಾವಿನ ನಂತರದ ಅತ್ಯಂತ ಪವಿತ್ರ ಮತ್ತು ಪ್ರಮುಖ ಆಚರಣೆಯಾಗಿದ್ದು, ಇದನ್ನು ಹಗಲಿನಲ್ಲಿ ಮಾಡೋದು ಶುಭವೆಂದು ಪರಿಗಣಿಸಲಾಗುತ್ತದೆ. ಅಷ್ಟಕ್ಕೂ ರಾತ್ರಿ ಹೊತ್ತು ಮಾಡೋದು ಯಾಕೆ ಸರಿ ಅಲ್ಲ ನೋಡೋಣ.
ಹಗಲಿನಲ್ಲಿ ಸೂರ್ಯ ದೇವರ ಉಪಸ್ಥಿತಿ ಇರುತ್ತದೆ. ಹಿಂದೂ ಧರ್ಮದಲ್ಲಿ (Hindu Religion) ಸೂರ್ಯನಿಗೆ ಅತ್ಯಂತ ಉನ್ನತ ಸ್ಥಾನವನ್ನು ಕೂಡ ನೀಡಲಾಗಿದೆ. ಹಾಗಾಗಿ ಸಾವಿನ ನಂತರ ಸೂರ್ಯ ದೇವನು ಆತ್ಮವನ್ನು ಮೋಕ್ಷದ ಕಡೆಗೆ ಕರೆದೊಯ್ಯುತ್ತಾನೆ ಎನ್ನುವ ನಂಬಿಕೆ ಇದೆ. ಹಾಗಾಗಿಯೇ ಬೆಳಗ್ಗಿನ ಹೊತ್ತಲ್ಲೆ ಅಂತಿಮ ಸಂಸ್ಕಾರ ಮಾಡಲಾಗುತ್ತೆ.
ಇನ್ನು ರಾತ್ರಿಯನ್ನು ತಾಮಸಿಕ್ (ಅಶುಭ) ಸಮಯವೆಂದು ಪರಿಗಣಿಸಲಾಗುತ್ತದೆ, ಇದು ನಕಾರಾತ್ಮಕ ಶಕ್ತಿಗಳ ಪ್ರಭಾವವನ್ನು ಹೆಚ್ಚಿಸುತ್ತದೆ. ಹಾಗಾಗಿ ಅಂತ್ಯಕ್ರಿಯೆಯಂತಹ ಪವಿತ್ರ ಆಚರಣೆಗೆ ಈ ಸಮಯವನ್ನು ಸೂಕ್ತವೆಂದು ಪರಿಗಣಿಸಲಾಗುವುದಿಲ್ಲ.
ಹಗಲಿನಲ್ಲಿ ಮಾಡುವ ಆಚರಣೆಗಳು ಆತ್ಮಕ್ಕೆ ಶಾಂತಿ ಮತ್ತು ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ಹಿಂದೂ ಧರ್ಮದ ನಂಬಿಕೆ. ಆದರೆ ರಾತ್ರಿ ಹೊತ್ತು ಅಂತಿಮ ಸಂಸ್ಕಾರ ಮಾಡಿದರೆ ಬೇಗನೆ ಮೋಕ್ಷ ಸಿಗೋದಿಲ್ಲ, ಆತ್ಮಗಳು (spirits) ಅಲೆದಾಡುವಂತಾಗುತ್ತೆ ಎನ್ನುವ ನಂಬಿಕೆ ಇದೆ.
ಇನ್ನು ರಾತ್ರಿ ಹೊತ್ತು ಎಂದರೆ, ಆತ್ಮವು ಅಲೆದಾಡುವ ಅಥವಾ ನಕಾರಾತ್ಮಕ ಶಕ್ತಿಯಿಂದ ಪ್ರಭಾವಿತವಾಗುವ ಅಪಾಯ ಹೆಚ್ಚಾಗಿರುತ್ತೆ. ಈ ಹೊತ್ತಲ್ಲಿ ಸ್ಮಶಾನಕ್ಕೆ (cemetery) ಹೋಗುವುದನ್ನ ಸಹ ಯಾರೂ ಸಹ ಇಷ್ಟ ಪಡೋದಿಲ್ಲ. ಹಾಗಾಗಿ ರಾತ್ರಿಯ ಬದಲಾಗಿ ಹಗಲಿನಲ್ಲಿಯೇ ಅಂತ್ಯಕ್ರಿಯೆ ಮಾಡಲಾಗುತ್ತೆ.
ಇನ್ನು ಅಂತ್ಯಕ್ರಿಯೆ ಮಾಡುವ ಸಮಯದಲ್ಲಿ ಬೆಂಕಿಯನ್ನು ಬಳಸಲಾಗುತ್ತದೆ, ಇದನ್ನು ಪವಿತ್ರ ಮತ್ತು ಶಕ್ತಿಯ ಮೂಲವೆಂದು ಪರಿಗಣಿಸಲಾಗುತ್ತದೆ. ಬೆಂಕಿಯ ಪರಿಣಾಮ ಮತ್ತು ಶಕ್ತಿಯು ಹಗಲಿನಲ್ಲಿ ಹೆಚ್ಚಾಗಿರುತ್ತದೆ, ಈ ಕಾರಣದಿಂದಾಗಿ ಅಂತ್ಯಕ್ರಿಯೆಯ ವಿಧಿ ವಿಧಾನವನ್ನು ಯಶಸ್ವಿಯಾಗಿ ನಡೆಸಲಾಗುತ್ತದೆ.
ಇನ್ನೂ ಒಂದು ಕಾರಣ ಯಾವುದೆಂದರೆ ಹಗಲಿನಲ್ಲಿ, ಜನರು, ದೂರ ದೂರದ ಸಂಬಂಧಿಗಳು ಸ್ನೇಹಿತರು, ಸುಲಭವಾಗಿ ಅಂತ್ಯಕ್ರಿಯೆಯಲ್ಲಿ ಭಾಗವಹಿಸಬಹುದು. ಆದರೆ ಜನರು ರಾತ್ರಿಯಲ್ಲಿ ಒಟ್ಟುಗೂಡುವುದು ಕಷ್ಟ, ಈ ಕಾರಣದಿಂದಾಗಿ ವಿಧಿಗಳನ್ನು ಏಕಾಂಗಿಯಾಗಿ ನಡೆಸಬೇಕಾಗಬಹುದು. ಹಾಗಾಗಿಯೇ ಅಂತಿಮ ಸಂಸ್ಕಾರವನ್ನು ಹಗಲು ಹೊತ್ತಿನಲ್ಲಿಯೇ ನಡೆಸಿಕೊಂಡು ಬರಲಾಗಿದೆ.