20 ವರ್ಷದ ನಂತ್ರ ಕನಸಲ್ಲಿ ಬಂದು ಸಮಾಧಿ ಸರಿ ಮಾಡು ಮಗನೇ ಎಂದ ತಂದೆ; ಗೋರಿ ತೋಡಿದ್ರೆ ಊರಿಗೆ ಊರೇ ಶಾಕ್!
20 ವರ್ಷಗಳ ಹಿಂದೆ ಮೃತಪಟ್ಟ ತಂದೆಯೊಬ್ಬರು ಕನಸಿನಲ್ಲಿ ಬಂದು ತಮ್ಮ ಸಮಾಧಿಯನ್ನು ಸರಿಪಡಿಸುವಂತೆ ಮಗನಿಗೆ ಸೂಚಿಸಿದ್ದಾರೆ. ಈ ವಿಚಿತ್ರ ಘಟನೆ ಉತ್ತರ ಪ್ರದೇಶದ ಕೌಶಾಂಬೀ ಜಿಲ್ಲೆಯಲ್ಲಿ ನಡೆದಿದ್ದು, ಸಮಾಧಿ ತೆರೆದಾಗ ಕಂಡುಬಂದ ದೃಶ್ಯ ಊರಿಗೆ ಊರೇ ಬೆಚ್ಚಿ ಬೀಳುವಂತೆ ಮಾಡಿದೆ.
ಲಕ್ನೋ: 20 ವರ್ಷದ ನಂತರ ಮಗನ ಕನಸಿನಲ್ಲಿ ಬಂದ ತಂದೆ, ನನ್ನ ಸಮಾಧಿಯನ್ನು ಸರಿ ಮಾಡು ಎಂದು ಹೇಳಿದ್ದು, ಗೋರಿ ತೋಡಿದಾಗ ಇಡೀ ಊರಿಗೆ ಊರೇ ಶಾಕ್ ಆಗಿದೆ. ಮಗ ಸಮಾಧಿ ಸರಿಪಡಿಸಲು ಗೋರಿಯನ್ನು ಅಗೆಯುತ್ತಿರುವ ವಿಷಯ ತಿಳಿದು ಊರಿನ ಜನರೆಲ್ಲಾ ಸ್ಮಶಾನದಲ್ಲಿ ನೆರೆದಿದ್ದರು. ಈ ಘಟನೆ ಉತ್ತರ ಪ್ರದೇಶದ ಕೌಶಾಂಬೀ ಜಿಲ್ಲೆಯಲ್ಲಿ ನಡೆದಿದ್ದು, ಪ್ರಕರಣ ಸತ್ಯಾಸತ್ಯತೆಯ ಬಗ್ಗೆ ಹಲವು ಪ್ರಶ್ನೆಗಳು ಹಟ್ಟಿಕೊಂಡಿವೆ. ಈ ಬಗ್ಗೆ ಸಮಪರ್ಕ ತನಿಖೆಯ ಅಗತ್ಯವಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿ ಬಂದಿದೆ.
ಕೌಶಾಂಬೀ ಜಿಲ್ಲೆಯ ಸಿರಾಥೂ ತಹ್ಸೀಲ್‌ನ ದಾರಾನಗರ ಈ ವಿಚಿತ್ರ ಘಟನೆಗೆ ಸಾಕ್ಷಿಯಾಗಿದೆ. ದಾರಾನಗರದ ನಿವಾಸಿಯಾಗಿರುವ ಅಖ್ತರ್ ಸುಬ್ಹಾನಿ ಎಂಬವರ ತಂದೆ ಮೌಲಾನಾ ಅನ್ಸಾರ್ ಅಹಮದ್ 2003ರಲ್ಲಿ ಮೃತರಾಗಿದ್ದರು. ದಾರಾನಗರದ ಸ್ಮಶಾನಲ್ಲಿ ಅನ್ಸಾರ್ ಅಹಮದ್ ಅವರ ಅಂತ್ಯಕ್ರಿಯೆ ಮಾಡಲಾಗಿತ್ತು.
ಇದೀಗ ಬರೋಬ್ಬರಿ 20 ವರ್ಷಗಳ ನಂತರ ಮೌಲಾನಾ ಮಗನ ಕನಸಿನಲ್ಲಿ ಬಂದಿದ್ದು, ಸಮಾಧಿಯನ್ನು ಸರಿ ಮಾಡುವಂತೆ ಮಗನಿಗೆ ಹೇಳಿದ್ದಾರೆ. ತಂದೆ ಕನಸಿನಲ್ಲಿ ಬಂದು ಸಮಾಧಿ ಸರಿಪಡಿಸುವಂತೆ ಹೇಳಿದ್ದಾರೆ ಎಂದು ಅಖ್ತರ್ ಕುಟುಂಬಸ್ಥರು ಮುಂದೆ ಹೇಳಿಕೊಂಡಿದ್ದಾರೆ. ನಂತರ ಸ್ಮಶಾನಕ್ಕೆ ತೆರಳಿ ಸಮಾಧಿ ನೋಡಿದ್ರೆ ಅದು ಸಂಪೂರ್ಣ ಅಸ್ತವ್ಯಸ್ತವಾಗಿತ್ತು. ಸಮಾಧಿಯ ಅರ್ಧ ಭಾಗ ನೆಲದಲ್ಲಿ ಕುಸಿದಿತ್ತು. ಸಮಾಧಿಯನ್ನು ಹೇಗೆ ಸರಿಪಡಿಸಬೇಕು ಎಂಬುದರ ಬಗ್ಗೆ ತಮ್ಮ ಸಮುದಾಯದ ಹಿರಿಯ ಮೌಲಾನ ಬಳಿ ಸಲಹೆ ಕೇಳಿದ್ದಾರೆ. ಸಮಾಧಿ ಸರಿಪಡಿಸಲು ಬರೇಲ್ವಿ ಸಮುದಾಯದ ಮೌಲಾನಾ ಅನುಮತಿ ನೀಡಿದ್ದಾರೆ.
ದೇಗುಲಗಳಿಂದ ಸಾಯಿಬಾಬಾ ಪ್ರತಿಮೆ ತೆರವು; ಕಾಶೀಲಿ ಶಿವನಿಗಷ್ಟೇ ಪೂಜೆ ಎಂದ ಸನಾತನ ದಳ
ಮೌಲಾನಾ ಅನುಮತಿ ನೀಡುತ್ತಿದ್ದಂತೆ ಅಖ್ತರ್ ಸಂಪೂರ್ಣವಾಗಿ ಸಮಾಧಿ ಸರಿಪಡಿಸಲು ಮುಂದಾಗಿದ್ದಾರೆ. ಗ್ರಾಮಸ್ಥರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿಯೇ ಸಮಾಧಿ ಸರಿ ಮಾಡುವ ಕಾರ್ಯ ಶುರುವಾಗಿತ್ತು. ಗೋರಿಯನ್ನು ಅಗೆದಾಗ ಮೌಲಾನಾ ಅನ್ಸಾರ್ ಅಹಮದ್ ಅವರನ್ನು ಹೇಗೆ ಅಂತ್ಯಕ್ರಿಯೆ ಮಾಡಲಾಗತ್ತೋ ಹಾಗೆಯೇ ಇತ್ತು. ನಂತರ ಮಣ್ಣು ಸರಿಗೊಳಿಸಿ ಮುಚ್ಚಲಾಯ್ತು ಎಂದು ವರದಿಯಾಗಿದೆ.
ಸಾಮಾನ್ಯವಾಗಿ ಶವ ಹೂತಾಗ ಅದು ಕೊಳೆಯಲು ಆರಂಭಿಸುತ್ತದೆ. ಕೆಲವೇ ದಿನಗಳಲ್ಲಿ ಶವ ಸಂಪೂರ್ಣ ಕೊಳೆಯುತ್ತದೆ. ಆದ್ರೆ ಮೌಲಾನಾ ಅನ್ಸಾರ್ ಅಹಮದ್ ಶವ 20 ವರ್ಷದ ಬಳಿಕವೂ ಏನು ಆಗಿರಲಿಲ್ಲ. ಅಂತ್ಯಸಂಸ್ಕಾರದ ವೇಳೆ ಮೃತದೇಹ ಹೇಗಿತ್ತೋ ಸಂಪೂರ್ಣವಾಗಿ ಹಾಗೆಯೇ ಇತ್ತು ಎಂದು ಧಾರಾನಗರದ ನಿವಾಸಿಗಳು ಮಾತನಾಡಿಕೊಳ್ಳುತ್ತಿದ್ದಾರೆ. ಮತ್ತೊಂದು ವರ್ಗದ ಜನರು ಇದೆಲ್ಲಾ ಸುಳ್ಳು ಎಂದು ವಾದಿಸುತ್ತಿದ್ದಾರೆ.
ಭಾರತದ ಈ ಫ್ಯಾಕ್ಟರಿಯಿಂದ ಯುರೋಪ್ ದೇಶಗಳಿಗೆ ಪೂರೈಕೆ ಆಗಲಿವೆ 2000 ಮಷೀನ್ ಗನ್