ದೇಗುಲಗಳಿಂದ ಸಾಯಿಬಾಬಾ ಪ್ರತಿಮೆ ತೆರವು; ಕಾಶೀಲಿ ಶಿವನಿಗಷ್ಟೇ ಪೂಜೆ ಎಂದ ಸನಾತನ ದಳ

ಕಾಶೀಲಿ ಶಿವನಿಗಷ್ಟೇ ಪೂಜೆ ಎಂದ ಸನಾತನ ದಳ ವಾರಾಣಸಿಯಲ್ಲಿರುವ  10ಕ್ಕೂ ಹೆಚ್ಚೂ ದೇಗುಲಗಳಲ್ಲಿನ ಸಾಯಿಬಾಬಾ ಪ್ರತಿಮೆಗಳನ್ನು ತೆರವು ಮಾಡಲಾಗಿದೆ.

Sai Baba idols removed from temples in Varanasi mrq

ವಾರಾಣಸಿ: ವಾರಾಣಸಿಯಲ್ಲಿ ಸಾಯಿಬಾಬಾ ಪೂಜೆ ಸರಿಯಲ್ಲ ಎಂಬ ಕಾರಣ ನೀಡಿ ‘ಸನಾತನ ರಕ್ಷಕ ದಳ’ ಎಂಬ ಸಂಘಟನೆ ಆರಂಭಿಸಿರುವ ಅಭಿಯಾನದ ಭಾಗವಾಗಿ ನಗರದ 10ಕ್ಕೂ ಹೆಚ್ಚೂ ದೇಗುಲಗಳಲ್ಲಿನ ಸಾಯಿಬಾಬಾ ಪ್ರತಿಮೆಗಳನ್ನು ಮಂಗಳವಾರ ತೆರವು ಮಾಡಲಾಗಿದೆ.

‘ಕಾಶಿ (ವಾರಾಣಸಿ)ಯಲ್ಲಿ ಕೇವಲ ಶಿವನನ್ನು ಪೂಜಿಸಬೇಕು. ಧರ್ಮಗ್ರಂಥಗಳ ಪ್ರಕಾರ ಸಾಯಿಬಾಬಾ ಪೂಜೆ ನಿಷಿದ್ಧ. ಅದರ ಜ್ಞಾನವಿಲ್ಲದೆ ಪೂಜೆ ನಡೆಸಲಾಗುತ್ತಿತ್ತು. ಈಗಾಗಲೇ 10 ದೇವಸ್ಥಾನಗಳಿಂದ ಪ್ರತಿಮೆ ತೆಗೆಯಲಾಗಿದೆ. ಮುಂದಿನ ದಿನಗಳಲ್ಲಿ ಅಗಸ್ತ್ಯಕುಂಡ ಮತ್ತು ಭೂತೇಶ್ವರ ದೇವಸ್ಥಾನದಲ್ಲಿರುವ ಪುತ್ಥಳಿ ತೆರವುಗೊಳಿಸಲಾಗುವುದು’ ಎಂದು ದಳದ ಅಧ್ಯಕ್ಷ ಅಜಯ್‌ ಶರ್ಮಾ ತಮ್ಮ ನಡೆ ಸಮರ್ಥಿಸಿಕೊಂಡಿದ್ದಾರೆ.

ತನಿಖೆಗೂ ಮುನ್ನವೇ ತುಪ್ಪದಲ್ಲಿ ಪ್ರಾಣಿ ಕೊಬ್ಬು ಇತ್ತೆಂದು ಹೇಳಿದ್ದೇಕೆ? ಆಂಧ್ರ ಸಿಎಂಗೆ ಸುಪ್ರೀಂ ತರಾಟೆ

ಇನ್ನೊಂದೆಡೆ ಅಯೋಧ್ಯೆಯ ಹನುಮಾನ್‌ಗಢಿ ದೇಗುಲದ ಮಹಾಂತ ರಾಜು ದಾಸ್‌ ಮಾತನಾಡಿ, ‘ಸಾಯಿಬಾಬಾ ಧರ್ಮ ಗುರು ಆಗಬಹುದು, ಮಹಾಪುರುಷ ಆಗಬಹುದು, ಆದರೆ ದೇವರಾಗಲು ಸಾಧ್ಯವಿಲ್ಲ’ ಎಂದು ತೆರವು ಸಮರ್ಥಿಸಿಕೊಂಡಿದ್ದಾರೆ.

ಇದಕ್ಕೆ ಬೇಸರ ವ್ಯಕ್ತಪಡಿಸಿರುವ ಸಂತ ರಘುವರದಾಸ್‌ ನಗರದ ಸಾಯಿ ದೇವಸ್ಥಾನದ ಅರ್ಚಕ ಅಮರ್‌ ಘೋಷ್, ‘ತಮ್ಮನ್ನು ತಾವು ಸನಾತನಿಗಳೆಂದು ಕರೆದುಕೊಳ್ಳುವವರೇ ದೇವಸ್ಥಾನಗಳಲ್ಲಿ ಸಾಯಿ ಬಾಬಾ ಪ್ರತಿಮೆಗಳನ್ನು ಸ್ಥಾಪಿಸಿದ್ದರು. ಈಗ ಅವರೇ ಅವುಗಳನ್ನು ತೆಗೆಯುತ್ತಿದ್ದಾರೆ. ಇದರಿಂದ ಜನರ ನಂಬಿಕೆಗಳಿಗೆ ಧಕ್ಕೆಯಾಗುತ್ತದೆ’ ಎಂದರು.

ರೋಮನ್‌ ಸಂಸ್ಕೃತಿಯ ಆಕಸ್ಮಿಕ ಹಿಂದುಗಳು ರಾಮಮಂದಿರವನ್ನ ಸ್ವೀಕರಿಸೋದಿಲ್ಲ: ಯೋಗಿ ಆದಿತ್ಯನಾಥ್‌!

Latest Videos
Follow Us:
Download App:
  • android
  • ios