ನವದೆಹಲಿ(ಫೆ.13): ಗಣರಾಜ್ಯೋತ್ಸ ದಿನ ಹಿಂದೆಂದು ಕಾಣದ ಪ್ರತಿಭಟನೆಗೆ ಸಾಕ್ಷಿಯಾಗಿತ್ತು. ಕೃಷಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳು ಆಯೋಜಿಸಿದ ಟ್ರಾಕ್ಟರ್ ಪರೇಡ್ ಹಿಂಸಾಚಾರಕ್ಕೆ ತಿರುಗಿತ್ತು. ಆದರೆ ಈ ಘಟನೆಗೂ ರೈತ ಸಂಘಟನಗಳಿಗೂ ಸಂಬಂಧವಿಲ್ಲ ಎಂದು ರೈತ ನಾಯಕರು ಹೇಳಿದ್ದರು. ಇದೀಗ ರೈತರ ಮೇಲೆ ಸುಳ್ಳು ಕೇಸ್ ದಾಖಲಿಸಲಾಗುತ್ತಿದೆ ಎಂದು ರೈತ ನಾಯಕರು ಆರೋಪಿಸಿದ್ದಾರೆ.

ರೈತ ಪ್ರತಿಭಟನೆ ಮುಂದಾಳತ್ವ ವಹಿಸಿರುವ ರಾಕೇಶ್ ಟಿಕೈಟ್ ಆಸ್ತಿ 80 ಕೋಟಿ!

ದೆಹಲಿ ಗಡಿಯಲ್ಲಿ ಪ್ರತಿಭಟನೆ ಮಾಡುತ್ತಿರುವ ರೈತರ ಮೇಲೆ ಪೊಲೀಸರು ಸುಳ್ಳು ಕೇಸ್ ದಾಖಲಿಸುತ್ತಿದ್ದಾರೆ. ವಿಚಾರಣೆ ಹಾಜರಾಗಲು ಸೂಚನೆ ನೀಡುತ್ತಿದ್ದಾರೆ.  ಹಿಂಸಾಚಾರಕ್ಕೂ ರೈತರಿಗೂ ಯಾವುದೇ ಸಂಬಂಧವಿಲ್ಲ. ಆದರೆ ಪೊಲೀಸರು ರೈತರನ್ನು ಸಿಲುಕಿಸುವ ಪ್ರಯತ್ನ ಮಾಡುತ್ತಿದ್ದಾರೆ. ಹೀಗಾಗಿ ಜನವರಿ 26ರ ಹಿಂಸಾಚಾರ ಕುರಿತು ನ್ಯಾಯಾಂಗ ತನಿಖೆಯಾಗಲಿ ಎಂದು ಸಂಯುಕ್ತ ಕಿಸಾನ್ ಮೋರ್ಚ ರೈತ ಸಘಟನೆ ಆಗ್ರಹಿಸಿದೆ.

ಕೃಷಿ ಕಾಯ್ದೆಯಲ್ಲಿ ಮಂಡಿ ಬಂದ್ ಮಾಡುವ ಉಲ್ಲೇಖ ಎಲ್ಲಿದೆ? ಠಾಕೂರ್ ಸವಾಲಿಗೆ ವಿಪಕ್ಷ ಗಪ್‌ಚುಪ್!

ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿ ತನಿಖೆ ನಡೆಸಬೇಕು ಎಂದು ರೈತ ಸಂಘಟನೆಗಳು ಆಗ್ರಹಿಸಿದೆ. ದೆಹಲಿ ಪೊಲೀಸರು ಅರೆಸ್ಟ್ ಮಾಡಿರುವ ಎಲ್ಲಾ ರೈತರಿಗೆ ಕಾನೂನು ಹೋರಾಟದ ಹಾಗೂ ಇತರ ಆರ್ಥಿಕ ನೆರವನ್ನು ಕಿಸಾನ್ ಮೋರ್ಚ ಸಂಘಟನೆ ನೀಡಲಿದೆ ಎಂದಿದೆ.