ರೈತ ಪ್ರತಿಭಟನೆ ಮುಂದಾಳತ್ವ ವಹಿಸಿರುವ ರಾಕೇಶ್ ಟಿಕೈಟ್ ಆಸ್ತಿ 80 ಕೋಟಿ!
ರೈತ ಪ್ರತಿಭಟನೆಯಲ್ಲಿ ಹೆಚ್ಚು ಕೇಳಿ ಬರುತ್ತಿರುವ ಹೆಸರು ರಾಕೇಶ್ ಟಿಕೈಟ್. ಕಿಸಾನ್ ಯೂನಿಯನ್ ಸಂಘಟ ರೈತ ಸದಸ್ಯರ ಮಾಸಿಕ ಆದಾಯ ಸರಾಸರಿ 6,400 ರೂಪಾಯಿ. ಆದರೆ ಇದೇ ಸಂಘಟನೆ ನಾಯಕ ರಾಕೇಶ್ ಟಿಕೈಟ್ ಆಸ್ತಿ 80 ಕೋಟಿ ರೂಪಾಯಿ. ಈ ಕುರಿತ ವಿವರ ಇಲ್ಲಿದೆ.
ರೈತ ಪ್ರತಿಭಟನೆ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಇದರ ನಡುವೆ ರೈತರ ಹೋರಾಟಗಾರರ ಪ್ರಮುಖ ನಾಯಕನಾಗಿ ಗುರುತಿಸಿಕೊಂಡಿರುವ ರಾಕೇಶ್ ಟಿಕೈಟ್ ಆಸ್ತಿ ವಿವರ ಬಹಿರಂಗಗೊಂಡಿದೆ.
ರಾಕೇಶ್ ಟಿಕೈಟ್ ಬಳಿ 80 ಕೋಟಿ ರೂಪಾಯಿ ಆಸ್ತಿ ಇದೆ ಎಂದು ಡಿಎನ್ಎ ವರದಿ ಮಾಡಿದೆ. ಇಷ್ಟೇ ಅಲ್ಲ ಹಲವು ರಾಜ್ಯಗಳಲ್ಲಿ ಟಿಕೈಟ್ ಆಸ್ತಿ ಇವೆ.
ದೆಹಲಿ ಪೊಲೀಸ್ ಕಾನ್ಸ್‌ಸ್ಟೇಬಲ್ ಆಗಿದ್ದ ರಾಕೇಶ್ ಟಿಕೈಟ್ ಬಳಿಕ ರೈತ ಸಂಘಟನೆಗಳಲ್ಲಿ ಗುರುತಿಸಿಕೊಂಡು, ನಾಯಕನಾಗಿ ಹೊರಹೊಮ್ಮಿದ್ದೆ ರೋಚಕವಾಗಿದೆ.
ಉತ್ತರ ಪ್ರದೇಶ, ಉತ್ತರಖಂಡ, ಮಹಾರಾಷ್ಟ್ರ ಹಾಗೂ ದೆಹಲಿಯಲ್ಲಿ ರಾಕೇಶ್ ಟಿಕೈಟ್ ಆಸ್ತಿ ಹೊಂದಿದ್ದಾರೆ. 13 ನಗರಗಳಲ್ಲಿ ರಾಕೇಶ್ ಟಿಕೈಟ್ ಮನೆ, ನಿವೇಶನ ಸೇರಿದಂತೆ ಹಲವು ಆಸ್ತಿ ಪಾಸ್ತಿ ಹೊಂದಿದ್ದಾರೆ.
ರಾಕೇಶ್ ಟಿಕೈಟ್ ರೈತ ನಾಯಕ ಮಾತ್ರವಲ್ಲ ಬಹುದೊಡ್ಡ ಉದ್ಯಮಿ ಕೂಡ ಹೌದು. ಪೆಟ್ರೋಲ್ ಪಂಪ್ ಮಾಲೀಕ, ಇಟ್ಟಿಗೆ ಫ್ಯಾಕ್ಟರಿ, ಶೂ ರೂಮ್ ಸೇರಿದಂತೆ ಹಲವು ಉದ್ಯಮಗಳಿವೆ
ರಾಕೇಶ್ ಟಿಕೈಟ್ ಇಬ್ಬರು ಹೆಣ್ಣು ಮಕ್ಕಳು ಆಸ್ಟ್ರೇಲಿಯಾದಲ್ಲಿದ್ದಾರೆ. ತಂದೆಯ ರೈತ ಹೋರಾಟಕ್ಕೆ ಮೆಲ್ಬೋರ್ನ್‌ನಿಂದ ಸಾಮಾಜಿಕ ಜಾಲತಾಣದಲ್ಲಿ ಹೋರಾಟಕ್ಕೆ ಮತ್ತಷ್ಟು ವೇಗ ನೀಡಿದ್ದರು.
ಜನವರಿ 26ರಂದು ಟ್ರಾಕ್ಟರ್ ರ್ಯಾಲಿ ಆಯೋಜನೆ ಬಳಿಕ ಕೆಲ ರೈತ ಸಂಘಟನೆಗಳು ಪ್ರತಿಭಟನೆಯಿಂದ ಹಿಂದೆ ಸರಿದಿದೆ. ಬಳಿಕ ರಾಕೇಶ್ ಟಿಕೈಟ್ ಏಕೈಕ ಹಾಗೂ ಪ್ರಮುಖ ರೈತ ಹೋರಾಟದ ನಾಯಕನಾಗಿ ಗುರುತಿಸಿಕೊಂಡಿದ್ದಾರೆ.
80 ಕೋಟಿ ರೂಪಾಯಿ ಆಸ್ತಿ ಹೊಂದಿರುವ ರಾಕೇಶ್ ಟಿಕೈಟ್ ಕಳೆದ ಮೂರು ತಿಂಗಳಿನಿಂದ ದೆಹಲಿ ಗಡಿಯಲ್ಲಿ ರೈತ ಸಂಘಟನೆಗಳನ್ನು ಮುನ್ನಡೆಸುತ್ತಿದ್ದಾರೆ. ಕೇಂದ್ರ ಸರ್ಕಾರ ತಂದಿರುವ ಕೃಷಿ ಕಾಯ್ದೆ ವಿರುದ್ದ ಹೋರಾಟ ಮಾಡುತ್ತಿರುವ ರೈತ ಸಂಘಟನೆ, ಮೂರು ಕಾಯ್ದೆಗಳನ್ನು ಹಿಂಪಡೆಯಲು ಆಗ್ರಹಿಸಿದ್ದಾರೆ.