ನವದೆಹಲಿ(ಫೆ.12): ಕೃಷಿ ಕಾಯ್ದೆ ಹಾಗೂ ರೈತ ಪ್ರತಿಭಟನೆ ಮುಗಿಯದ ಸಮಸ್ಯೆಯಾಗಿ ಪರಿಣಮಿಸಿದೆ. ಕೇಂದ್ರ ತಂದಿರುವ 3 ಕೃಷಿ ಕಾಯ್ದೆಗಳನ್ನು ಹಿಂಪಡೆಯಬೇಕು ಅನ್ನೋ ಹೋರಾಟಕ್ಕೆ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕೈಜೋಡಿಸಿದೆ. ಇತ್ತ ಕೇಂದ್ರ ಕಾಯ್ದೆಯ ಯಾವ ಅಂಶ ಮಾರಕ ಎಂಬ ಪ್ರಶ್ನೆಗೆ ರೈತ ಸಂಘಟನೆಗಳು ಉತ್ತರ ನೀಡಿಲ್ಲ. ಇದರ ನಡುವೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ತಂದಿರುವ ಕೃಷಿ ಕಾಯ್ದೆ ಮಂಡಿ ಬಂದ್ ಮಾಡಲು ತಂದಿದೆ ಎಂದಿದ್ದಾರೆ. ಇದಕ್ಕೆ ರಾಜ್ಯ ಹಣಕಾಸು ಹಾಗೂ ಕಾರ್ಪೋರೇಟ್  ಅಫೈರ್ಸ್ ಸಚಿವ ಅನುರಾಗ್ ಠಾಕೂರ್ ಖಡಕ್ ಉತ್ತರ ನೀಡಿದ್ದಾರೆ.

ರೈತ ಪ್ರತಿಭಟನೆ ಮುಂದಾಳತ್ವ ವಹಿಸಿರುವ ರಾಕೇಶ್ ಟಿಕೈಟ್ ಆಸ್ತಿ 80 ಕೋಟಿ!

ಸದನದಲ್ಲಿ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಸರ್ಕಾರದ ವಿರುದ್ದ ಗಂಭೀರ ಆರೋಪ ಮಾಡಿತು. ಕೇಂದ್ರ ತಂದಿರುವ ಕೃಷಿ ಕಾಯ್ದೆ ಮಾರುಕಟ್ಟೆ(ಮಂಡಿ) ಬಂದ್ ಮಾಡಲು ಉದ್ದೇಶಿಸಿ ತರಲಾಗಿದೆ ಎಂದು ಆರೋಪಿಸಿದರು. ರಾಹುಲ್ ಗಾಂಧಿ, ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಗೆ ತಿರುಗೇಟು ನೀಡಿದ ಠಾಕೂರ್, ಕಾಯ್ದೆಯ ಯಾವ ಕ್ಲಾಸ್‍‌ನಲ್ಲಿ ಮಂಡಿ ಬಂದ್ ಆಗುತ್ತಿರುವ ಅಂಶ ಇದೆ? ಸದನದಲ್ಲಿ ಉತ್ತರಿಸಿ ಎಂದು ಸವಾಲು ಹಾಕಿದರು.

 

ಇಲ್ಲಿರುವ ಸಂಸದರೂ ಉತ್ತರ ನೀಡಿ, ಕಾಯ್ದೆಯ ಯಾವ ಕ್ಲಾಸ್, ಯಾವ ವಾಕ್ಯದಲ್ಲಿ ಮಂಡಿ ಬಂದ್ ಮಾಡುವ ಉಲ್ಲೇಖವಿದೆ. ಕಾಂಗ್ರೆಸ್ ಸಂಸದರೇ, ವಿಪಕ್ಷಗಳೇ ಉತ್ತರಿಸಿ ಎಂದರು.  ಠಾಕೂರ್ ಸವಾಲಿಗೆ ರಾಹುಲ್ ಗಾಂಧಿ ಸೇರಿದಂತೆ ವಿಪಕ್ಷಗಳು ಮೌನವಹಿಸಿತು. ಇಷ್ಟಕ್ಕೆ ನಿಲ್ಲಿಸಿದ ಠಾಕೂರ್, ಕಾಂಗ್ರೆಸ್ ಹಾಗೂ ವಿಪಕ್ಷ ದೇಶದ ಜನರನ್ನು ಹಾಗೂ ರೈತರನ್ನು ಮೂರ್ಖರನ್ನಾಗಿ ಮಾಡುತ್ತಿದೆ. ತಪ್ಪು ಮಾಹಿತಿಯನ್ನು ನೀಡುತ್ತಿದೆ. ಎಲ್ಲರ ಬಂಡವಾಳ ಬಯಲಾಗಿದೆ ಎಂದರು.

ರೈತರನ್ನು ಮಾತುಕತೆಗೆ ಆಹ್ವಾನಿಸಿದ ಬೆನ್ನಲ್ಲೇ ಪ್ರತಿಭಟನೆಗೆ ತೀವ್ರಗೊಳಿಸಿದ ಸಂಘಟನೆ!

ರಾಹುಲ್ ಗಾಂಧಿ ಇದು ಮಂಡಿ ಮಾರುಕಟ್ಟೆಯನ್ನು ನಿಲ್ಲುಸುವ ಉದ್ದೇಶದಿಂದ ಈ ಕಾಯ್ದೆ ತರಲಾಗಿದೆ. ಇದರ ಹೊರತು ಈ ಕಾಯ್ದೆಗೆ ಇನ್ಯಾವ ಉದ್ದೇಶವೂ ಇಲ್ಲ ಎಂದಿದ್ದರು. ವಿಪಕ್ಷಗಳು ಎಪಿಎಂಸಿ ಮಾರುಕಟ್ಟೆ ಬಂದ್ ಮಾಡಿ, ಖಾಸಗಿ ಮಂಡಿ ತೆರಯಲು ಈ ರೀತಿ ಕಾಯ್ದೆ ತರಲಾಗಿದೆ ಎಂದಿತ್ತು.