ಮುಂಬೈ(ಮಾ.02): ಬಾಲಿವುಡ್ ನಟ ಅಜಯ್ ದೇವಗನ್ ವಿಚಿತ್ರ ಪ್ರತಿಭಟನೆ ಎದುರಿಸಬೇಕಾದ ಘಟನೆ ನಡೆದಿದೆ. ಹೆಚ್ಚಾಗಿ ವಿವಾದಗಳಿಂದ ದೂರ ಉಳಿದಿರುವ ಅಜಯ್ ದೇವಗನ್ ಇದೀಗ ರೈತ ಪ್ರತಿಭಟನೆ ಬಿಸಿ ಎದುರಿಸಿದ್ದಾರೆ. ಮುಂಬೈ ರಸ್ತೆಗಿಳಿದ ಅಜಯ್ ದೇವಗನ್ ಕಾರಿನ ಮುಂದೆ ರೈತನೆಂದು ಹೇಳಿಕೊಂಡು ರಂಪಾಟ ಮಾಡಿದ್ದಾನೆ.

ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರದ ಹಿಂದೆ ಯಾರಿದ್ದಾರೆ? ಮಾಹಿತಿ ಬಹಿರಂಗ ಪಡಿಸಿದ ಕೇಜ್ರಿವಾಲ್!

ಗೊರೆಗಾಂವ್‌ನಲ್ಲಿ ಪ್ರಯಾಣಿಸುತ್ತಿದ್ದ ಅಜಯ್ ದೇವಗನ್ ಕಾರಿಗೆ ಅಡ್ಡ ಬಂದ ವ್ಯಕ್ತಿಯನ್ನು ರಾಜದೀಪ್ ರಮೇಶ್ ಸಿಂಗ್ ಎಂದು ಗುರುತಿಸಲಾಗಿದೆ. ಈತ ದೇವಗನ್ ಕಾರು ತಡೆದು ಹಿಗ್ಗಾ ಮುಗ್ಗಾ ಬಯ್ಯಲು ತೊಡಗಿದ್ದಾನೆ. ಇಷ್ಟೇ ಅಲ್ಲ ತಕ್ಷಣವೇ ರೈತ ಪ್ರತಿಭಟನೆ ಬೆಂಬಲಿಸುವಂತೆ ಆಗ್ರಹಿಸಿದ್ದಾನೆ.

ಈ ರಂಪಾಟದಿಂದ ಟ್ರಾಫಿಕ್ ಜಾಮ್ ಆಗಿತ್ತು. ಕಾರಿನೊಳಗೆ ತಾಳ್ಮೆಯಿಂದ ದೇವಗನ್ ಈ ವ್ಯಕ್ತಿಯ ಎಲ್ಲಾ ಮಾತುಗಳನ್ನು ಕೇಳಿಸಿಕೊಂಡಿದ್ದಾರೆ. ಇತ್ತ ಪೊಲೀಸರು ಸ್ಥಳಕ್ಕೆ ಆಗಮಿಸಿ ರಾಜದೀಪ್‌ನನ್ನು ವಶಕ್ಕೆ ಪಡೆದಿದ್ದಾರೆ. ದೇವಗನ್ ಬಾಡಿಗಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರ ; ಮತ್ತೆ 20 ಗಲಭೆಕೋರರ ಫೋಟೋ ಬಿಡುಗಡೆ ಮಾಡಿದ ಪೊಲೀಸ್!

ವಿದೇಶಿ ಸೆಲೆಬ್ರೆಟಿಗಳು ಭಾರತ ವಿರೋಧ ಷಡ್ಯಂತ್ರದ ವಿರುದ್ಧ ಟ್ವೀಟ್ ಮಾಡಿದ್ದರು. ಭಾರತ ಸಾರ್ವಭೌಮತ್ವಕ್ಕೆ ಧಕ್ಕೆ ತರುವ ಯಾವುದೇ ವಿಚಾರಕ್ಕೆ ಅವಕಾಶ ಕೊಡುವುದಿಲ್ಲ. ಭಾರತದ ಆಂತರಿಕ ವಿಚಾರದಲ್ಲಿ ಮೂಗು ತೂರಿಸಬೇಡಿ ಎಂದು ಸಚಿನ್ ತೆಂಡುಲ್ಕರ್, ಅಜಯ್ ದೇವಗನ್ ಸೇರಿದಂತೆ ಹಲವು ಸೆಲೆಬ್ರೆಟಿಗಳು ಎಚ್ಚರಿಕೆ ನೀಡಿದ್ದರು.