ಟ್ರಾಕ್ಟರ್ ರ‍್ಯಾಲಿ ಹಿಂಸಾಚಾರ ; ಮತ್ತೆ 20 ಗಲಭೆಕೋರರ ಫೋಟೋ ಬಿಡುಗಡೆ ಮಾಡಿದ ಪೊಲೀಸ್!
ಪ್ರತಿಭಟನಾ ನಿರತ ರೈತ ಸಂಘಟನೆಗಳು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಗಲಭೆ ಪ್ರಕರಣದ ತನಿಖೆ ತೀವ್ರಗೊಂಡಿದೆ. ದೆಹಲಿ ಪೊಲೀಸಲು ಎಲ್ಲಾ ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿದ್ದಾರೆ. ಇದೀಗ ಕೆಂಪು ಕೋಟೆ ಮುತ್ತಿಗೆ, ಟ್ರಾಕ್ಟರ್ ರ್ಯಾಲಿ ಹಿಂಸಾಚಾರದಲ್ಲಿ ತೊಡಗಿದ ಮತ್ತೆ 20 ಗಲಭೆಕೋರ ಫೋಟೋ ಬಿಡುಗಡೆ ಮಾಡಲಾಗಿದೆ.
ಗಣರಾಜ್ಯೋತ್ಸವ ದಿನ ರೈತರು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಹಿಂಸಾಚಾರವಾಗಿ ಮಾರ್ಪಟ್ಟಿತ್ತು. ಇತ್ತ ರೈತ ಸಂಘಟನೆಗಳು ಗಲಭೆಗೆ ನಾವು ಕಾರಣರಲ್ಲ ಎಂದು ಕೈತೊಳೆದುಕೊಂಡಿದ್ದಾರೆ. ಇತ್ತ ಗಲಭೆ ಕುರಿತು ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ಒಬ್ಬರ ಹಿಂದೆ ಒಬ್ಬರನ್ನು ಬಂಧಿಸುತ್ತಿದ್ದಾರೆ
ಪೊಲೀಸರ ಮೇಲೆ ಹಲ್ಲೆ, ಸಾರ್ವಜನಿಕ ಆಸ್ತಿ ಪಾಸ್ತಿ ನಷ್ಟ, ಐತಿಹಾಸಿಕ ಕೆಂಪು ಕೋಟೆಗೆ ಮುತ್ತಿಗೆ ಹಾಕಿದ ಗಲಭೆಕೋರರ ವಿಡಿಯೋಗಳನ್ನು ಪರಿಶೀಲಿಸಿ ಇದೀಗ 20 ಮಂದಿ ಫೋಟೋ ಬಿಡುಗಡೆ ಮಾಡಲಾಗಿದೆ.
ದೆಹಲಿ ಪೊಲೀಸರು ಫೇಶಿಯಲ್ ರೆಕಗ್ನಿಶನ್ ಟೆಕ್ನಾಲಜಿ ಬಳಸಿ ವಿಡಿಯೋಗಳಿಂದ ಗಲಭೆಕೋರ ಫೋಟೋ ತೆಗೆದಿದ್ದಾರೆ. ಇದೀಗ ಮತ್ತೆ 20 ಮಂದಿ ಈ ಗಲಭೆಯಲ್ಲಿ ನೇರವಾಗಿ ಪಾಲ್ಗೊಂಡಿರುವ ಕುರಿತು ದೆಹಲಿ ಪೊಲೀಸರು ವಿಡಿಯೋ ಹಾಗೂ ಫೋಟೋ ಮೂಲಕ ಸಾಕ್ಷ್ಯ ನೀಡಿದ್ದಾರೆ.
ಶುಕ್ರವಾರ ದೆಹಲಿ ಪೊಲೀಸರು ದೆಹಲಿ ಹಿಂಸಾಚಾರದಲ್ಲಿ ಪಾಲ್ಗೊಂಡ 200 ಮಂದಿ ಫೋಟೋ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಮತ್ತೆ 20 ಮಂದಿ ಫೋಟೋ ಬಿಡುಗಡೆ ಮಾಡಿದೆ
ದೆಹಲಿ ಗಲಭೆಯಲ್ಲಿ ಸಾವಿರಕ್ಕಿಂತಲೂ ಹೆಚ್ಚು ಮಂದಿ ತೊಡಗಿಸಿಕೊಂಡಿದ್ದರು. ಆದರೆ ವಿಡಿಯೋದಲ್ಲಿ ಸೆರೆ ಸಿಕ್ಕ ಮಂದಿಯ ಫೋಟೋ ರಿಲೀಸ್ ಮಾಡಲಾಗಿದೆ.
ದೆಹಲಿ ಹಿಂಸಾಚಾರಕ್ಕೆ ಕುರಿತ 2,7000 ವಿಡಿಯೋ ಹಾಗೂ ಅಷ್ಟೇ ಫೋಟೋಗ್ರಾಫ್‌ಗಳನ್ನು ಪರಿಶೀಲಿಸಲಾಗಿದೆ. ಸಿಸಿಟಿವಿ, ಮೊಬೈಲ್ ಫೋನ್ ಸೇರಿದಂತೆ ಹಲವು ಮೂಲಗಳಿಂದ ಈ ವಿಡಿಯೋ ಹಾಗೂ ಫೋಟೋಗಳನ್ನು ಸಂಗ್ರಹಿಸಲಾಗಿದೆ.
ದೆಹಲಿ ಗಲಭೆಕೋರರನ್ನು ಪತ್ತೆ ಹಚ್ಚಲು ದೆಹಲಿ ಪೊಲೀಸರು ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡಿದ್ದಾರೆ. ಈ ಮೂಲಕ ಗಲಭೆಕೋರರನ್ನು ಕಂಬಿ ಹಿಂದೆ ಕರಲು ಅವಿರತ ಪ್ರಯತ್ನ ನಡೆಯುತ್ತಿದೆ.