Asianet Suvarna News Asianet Suvarna News

ಕೆಂಪು ಕೋಟೆ ತ್ಯಜಿಸಲು ಪ್ರತಿಭಟನಾ ರೈತರು ನಕಾರ; ಗಾಯಗೊಂಡ ಪೊಲೀಸರ ಸಂಖ್ಯೆ 109ಕ್ಕೆ ಏರಿಕೆ!

ಕೇಂದ್ರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಗಣತಂತ್ರ ದಿನ ನಡೆಸಿದ ಟ್ರಾಕ್ಟರ್ ರ್ಯಾಲಿ ಹಿಂಸಾರೂಪ ಪಡೆದುಕೊಂಡಿದೆ. ರೈತ ಸಂಘಟನೆ ಟ್ರಾಕ್ಟರ್ ರ್ಯಾಲಿ ಹಿಂಪಡೆದರು ಎಲ್ಲಾ ರೈತರು ಹಿಂದುರಿಗಿಲ್ಲ. ಸಿಕ್ಕ ಸಿಕ್ಕ ಪೊಲೀಸರ ಮೇಲೆ ದಾಳಿ ಮಾಡುತ್ತಲೇ ಇದ್ದಾರೆ. ರೈತ ಪ್ರತಿಭಟನೆಯ ಸದ್ಯದ ಮಾಹಿತಿ ಇಲ್ಲಿದೆ.

Farmer Protest number of policemen injured in tractor rally violence in Delhi has risen to 109 ckm
Author
Bengaluru, First Published Jan 26, 2021, 9:47 PM IST

ನವೆದೆಹಲಿ(ಜ.26): ಕೃಷಿ ಕಾಯ್ದೆ ವಿರೋಧಿಸಿ ರೈತರು ಆಯೋಜಿಸಿದ್ದ ಟ್ರಾಕ್ಟರ್ ರ್ಯಾಲಿ ಇದೀಗ ದಂಗೆಯಾಗಿ ಮಾರ್ಪಟ್ಟಿದೆ. ಹಿಂಸಾರೂಪ ಪಡೆದ ಟ್ರಾಕ್ಟರ್ ರ್ಯಾಲಿಯನ್ನು ರೈತ ಸಂಘಟನೆ ಹಿಂಪಡೆದಿದೆ. ಆದರೆ ಪ್ರತಿಭಟನಾಕಾರರು ದೆಹಲಿಯಿಂದ ಹಿಂದೆ ಸರಿದಿಲ್ಲ. ಕೆಂಪು ಕೋಟೆ ಮುತ್ತಿಗೆ ಹಾಕಿದ ಹಲವು ರೈತರನ್ನು ಹೊರದಬ್ಬಿದ್ದರೂ, ಇದೀಗ ಕೆಲ ರೈತರ ಗುಂಪು ಕೆಂಪು ಕೋಟೆಯಲ್ಲಿ ಠಿಕಾಣಿ ಹೂಡಿದೆ.

ಮಾಡಿದ್ದೆಲ್ಲಾ ಮಾಡಿ, ಟ್ರಾಕ್ಟರ್ ರ‍್ಯಾಲಿ ಹಿಂಪಡೆದ ರೈತ ಸಂಘಟನೆ!.

ಕೆಂಪು ಕೋಟೆಯಲ್ಲೇ ಬೀಡುಬಿಟ್ಟಿರುವ ರೈತರನ್ನು ಹೊರಕಳಿಸುವ ಪ್ರಯತ್ನ ಮುಂದುವರಿದೆ. ಇತ್ತ ಇಂದಿನ ಟ್ರಾಕ್ಟರ್ ರ್ಯಾಲಿಯಲ್ಲಿ ಅತೀ ಹೆಚ್ಚು ಗಾಯಗೊಂಡಿರುವುದು ಪೊಲೀಸ್ ಪಡೆ. ಇದೀಗ ಗಾಯಗೊಂಡ ಪೊಲೀಸರ ಸಂಖ್ಯೆ 109ಕ್ಕೇರಿದೆ.  ಹಲವು ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದಾರೆ.

"

ಕಿಸಾನ್ ಮೋರ್ಚಾ ಸೇರಿದಂತೆ ಹಲವು ರೈತ ಸಂಘಟನೆಗಳು ಗಲಭೆಗೂ ತಮಗೂ ಸಂಬಂಧವಿಲ್ಲ ಎಂದಿದೆ. ಗಲಭೆ ಮಾಡಿದವರು ನಾವಲ್ಲ ಎಂದು ಹೊಸ ಕತೆ ಕಟ್ಟಿದೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡಲು ಕಟ್ಟು ನಿಟ್ಟಿನ ಸೂಚನೆ ನೀಡಿದ್ದಾರೆ.
 

Follow Us:
Download App:
  • android
  • ios