ನವದೆಹಲಿ(ಜ.26): ಕೃಷಿ ಕಾನೂನು ವಿರೋಧಿಸಿ ರೈತರು ನಡೆಸಿದ ಟ್ರಾಕ್ಟರ್ ರ್ಯಾಲಿ ಹಿಂಸಾರೂಪಕ್ಕೆ ತಿರುಗಿದೆ. ದೆಹಲಿಯಲ್ಲಿ ದಂಗೆ ಎಬ್ಬಿಸಿ ದೇಶದ ಮಾನ ಮೂರುಕಾಸಿಗೆ ಹರಾಜು ಹಾಕಿದ್ದಾರೆ. ರೈತರ ಪ್ರತಿಭಟನೆ, ದೆಹಲಿ ಪೊಲೀಸರ ಮೇಲಿನ ದಾಳಿ, ಕೆಂಪು ಕೋಟೆಗೆ ಮುತ್ತಿಗೆ, ರಾಷ್ಟ್ರಧ್ವಜ ಸ್ಥಾನದಲ್ಲಿ ಸಿಖ್ ಧ್ವಜ ಹಾರಾಟ ಸೇರಿದಂತೆ  ಹಲವು ಹಿಂಸಾಚಾರ ಘಟನೆಗಳ ಬಳಿಕ ಇದೀಗ ರೈತ ಸಂಘಟನೆಗಳು ಟ್ರಾಕ್ಟರ್ ರ್ಯಾಲಿಯನ್ನು ಹಿಂಪಡೆದಿದೆ.

ಉನ್ನತಮಟ್ಟದ ಸಭೆ ನಡೆಸಿದ ಮುಖ್ಯಮಂತ್ರಿ; ಪೊಲೀಸ್ ಮತ್ತು ಜಿಲ್ಲಾಡಳಿತಕ್ಕೆ ಖಡಕ್ ಸೂಚನೆ!.

ಮಾಡಿದೆಲ್ಲಾ ಮಾಡಿ ಇದೀಗ ನಮಗೇನು ಗೊತ್ತಿನಲ್ಲ. ನಮ್ಮ ಪ್ರತಿಭಟನೆ ಶಾಂತವಾಗಿದೆ. ಆದರೆ ಕೆಲ ಸಮಾಜ ಘಾತುಕ ಶಕ್ತಿ ಪ್ರತಿಭಟನೆಯಲ್ಲಿ ನುಸುಳಿ ಹಿಂಸಾಚಾರದಲ್ಲಿ ತೊಡಗಿದೆ. ಕೆಂಪು ಕೋಟೆಗೆ ಮುತ್ತಿಗೆ, ಧ್ವಜ ಹಾರಾಟದಲ್ಲಿ ರೈತ ಪ್ರತಿಭಟನಾಕಾರರ ಪಾತ್ರವಿಲ್ಲ. ಹಿಂಸಾಚಾರಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಕಿಸಾನ್ ಮೋರ್ಚಾ ಸಂಘಟನೆ ಹೇಳಿದೆ.

 

ದೆಹಲಿ ಪೊಲೀಸ್ ಕಮಿಶನರ್, ಗುಪ್ತಚರ ಅಧಿಕಾರಿಗಳೊಂದಿಗೆ ಅಮಿತ್ ಶಾ ತುರ್ತು ಸಭೆ!

ಹಿಂಸೆ ಕಾರಣ ತಕ್ಷಣದಿಂದ ಟ್ರಾಕ್ಟರ್ ರ್ಯಾಲಿಯನ್ನು ಹಿಂಪಡೆದಿದ್ದೇವೆ. ಎಲ್ಲಾ ರೈತರು ದೆಹಲಿ ಗಡಿಗೆ ತೆರಳಿ ಎಂದಿನ ಪ್ರತಿಭಟನೆ ಮುಂದುವರಿಸಬೇಕು ಎಂದು ಕಿಸಾನ್ ಮೋರ್ಚಾ ಸಂಘಟನೆ ಹೇಳಿದೆ. ನಮ್ಮ ಪ್ರತಿಭಟನೆ ಶಾಂತಿಯುತವಾಗಿ ಮುಂದುವರಿಯಲಿದೆ. ಮುಂದಿನ ಹೋರಾಟದ ಕುರಿತು ಇತರ ಸಂಘಟನೆ ಹಾಗೂ ಮುಖಂಡರೊಂದಿಗೆ ಚರ್ಚಿಸಿ ನಿರ್ಧಾರ ಪ್ರಕಟಿಸಲಾಗುವುದು ಎಂದಿದೆ.