Asianet Suvarna News Asianet Suvarna News

ಹೊಲ ಉಳುತ್ತಿದ್ದ ರೈತನಿಗೆ ಸಿಕ್ತು 4 ಸಾವಿರ ವರ್ಷ ಹಳೆಯ ತಾಮ್ರದ ಆಯುಧಗಳು

ಲಕ್ನೋ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಹೊಲದ ಎತ್ತರ ತಗ್ಗನ್ನು ನೆಲಸಮ ಮಾಡುತ್ತಿದ್ದ ವೇಳೆ ರೈತನೋರ್ವನಿಗೆ ಸಾವಿರಾರು ವರ್ಷಗಳಷ್ಟು ಹಳೆಯ ಆಯುಧಗಳು ಸಿಕ್ಕಿವೆ. ಇಲ್ಲಿ ಸಿಕ್ಕ ಆಯುಧಗಳು ತಾಮ್ರದಿಂದ ತಯಾರಿಸಲ್ಪಟ್ಟಿವೆ.

farmer found thousands of years old weapons while levelling a field in Uttar Pradesh Mainpuri akb
Author
Bangalore, First Published Jun 24, 2022, 4:37 PM IST

ಲಕ್ನೋ: ಉತ್ತರ ಪ್ರದೇಶದ ಮೈನ್‌ಪುರಿ ಜಿಲ್ಲೆಯಲ್ಲಿ ಹೊಲದ ಎತ್ತರ ತಗ್ಗನ್ನು ನೆಲಸಮ ಮಾಡುತ್ತಿದ್ದ ವೇಳೆ ರೈತನೋರ್ವನಿಗೆ ಸಾವಿರಾರು ವರ್ಷಗಳಷ್ಟು ಹಳೆಯ ಆಯುಧಗಳು ಸಿಕ್ಕಿವೆ. ಇಲ್ಲಿ ಸಿಕ್ಕ ಆಯುಧಗಳು ತಾಮ್ರದಿಂದ ತಯಾರಿಸಲ್ಪಟ್ಟಿವೆ. ಕತ್ತಿಗಳು, ಚಾಕುಗಳು, ತ್ರಿಶೂಲಗಳು ಮತ್ತು ಈಟಿಗಳು ಇಲ್ಲಿ ಸಿಕ್ಕಿವೆ. ಕೂಡಲೇ ಈ ವಿಚಾರವನ್ನು ಸ್ಥಳೀಯ ಆಡಳಿತಕ್ಕೆ ತಿಳಿಸಲಾಯಿತು. ನಂತರ ಸ್ಥಳೀಯ ಪೊಲೀಸರು ಹಾಗೂ ಭಾರತೀಯ ಪುರಾತತ್ವ ಇಲಾಖೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶಸ್ತ್ರಾಸ್ತ್ರಗಳು ಪತ್ತೆಯಾದ ಸ್ಥಳವನ್ನು ಸೀಲ್ ಮಾಡಿದ್ದಾರೆ. ಇಲ್ಲಿ ಸುಮಾರು 39 ಶಸ್ತ್ರಾಸ್ತ್ರಗಳು ಸಿಕ್ಕಿವೆ ಎಂದು ಹೇಳಲಾಗುತ್ತಿದೆ.

ಮೈನ್‌ಪುರಿ ಜಿಲ್ಲೆ ತಹಸ್ಲಿ ಕುರವಲಿ ಪ್ರದೇಶದ (Tahasli Kuravali area) ಗಣೇಶಪುರ ಗ್ರಾಮದಲ್ಲಿ (Ganeshpur village) ಈ ಪುರಾತನ ವಸ್ತುಗಳು ಪತ್ತೆಯಾಗಿವೆ. ರೈತ ಬಹದ್ದೂರ್ ಸಿಂಗ್ ಫೌಜಿ (Bahadur Singh Fauji) ಎಂಬುವವರು ತಮ್ಮ ಜಮೀನಿನಲ್ಲಿ ಭೂಮಿಯನ್ನು ಕೃಷಿ ಕಾರ್ಯಕ್ಕಾಗಿ ಉಳುಮೆ ಮಾಡುತ್ತಿದ್ದಾಗ ಈ ಆಯುಧಗಳು ಪತ್ತೆಯಾಗಿವೆ. ಉಳುಮೆ ಮಾಡುತ್ತಿದ್ದಾಗ ಮಣ್ಣಿನಲ್ಲಿ ಸುತ್ತಿದ ಆಯುಧಗಳು ನೆಲದಿಂದ ಹೊರಬರಲು ಪ್ರಾರಂಭಿಸಿದವು. ಮತ್ತಷ್ಟು ಉತ್ಖನನ ನಡೆಸಿದಾಗ ಒಟ್ಟು 39 ಲೋಹದ ಶಸ್ತ್ರಾಸ್ತ್ರಗಳು ಪತ್ತೆಯಾಗಿವೆ.

 

ಪ್ರಾರಂಭದಲ್ಲಿ ರೈತ ಬಹದ್ದೂರ್ ಸಿಂಗ್ ಈ ಆಯುಧಗಳನ್ನು ಬಂಗಾರ ಅಥವಾ ಬೆಳ್ಳಿಯ ವಸ್ತುಗಳು ಎಂದು ಭಾವಿಸಿ ತನ್ನ ಮನೆಗೆ ತೆಗೆದುಕೊಂಡು ಹೋಗಿದ್ದ. ಆದರೆ ಗದ್ದೆಯಲ್ಲಿ ಆಯುಧಗಳು ಸಿಕ್ಕಿದ ಸುದ್ದಿ ಬೆಂಕಿಯಂತೆ ಗ್ರಾಮದಾದ್ಯಂತ ಹರಡಿದ್ದು, ಸ್ಥಳೀಯ ಪೊಲೀಸರಿಗೆ ಈ ಬಗ್ಗೆ ಎರಡು ಕಡೆಯಿಂದ ಮಾಹಿತಿ ಸಿಕ್ಕಿತ್ತು. ನಂತರ ಪೊಲೀಸರು ರೈತನ ಮನಗೆ ಆಗಮಿಸಿ ಎಲ್ಲಾ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಅಲ್ಲದೇ  ಶಸ್ತ್ರಾಸ್ತ್ರಗಳು ಪತ್ತೆಯಾದ ಸ್ಥಳವನ್ನು ಸೀಲ್ ಮಾಡಲಾಗಿದೆ. 

ಪಟನಾದಲ್ಲಿ 2000 ವರ್ಷ ಹಳೆಯ ಇಟ್ಟಿಗೆ ಗೋಡೆ ಪತ್ತೆ

ಈ ಆಯುಧಗಳನ್ನು ನೋಡುತ್ತಿದ್ದಂತೆ ಹಲವು ಆಯಾಮಗಳಲ್ಲಿ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್‌ನಲ್ಲಿ ಈ ಬಗ್ಗೆ ಇದು ಯಾರ ಕಾಲದ ಆಯುಧಗಳಾಗಿರಬಹುದು ಎಂಬ ಬಗ್ಗೆ ಭಾರಿ ಚರ್ಚೆ ನಡೆಯುತ್ತಿದೆ.  ಪುರಾತತ್ವಶಾಸ್ತ್ರಜ್ಞರ ಕುತೂಹಲವೂ ಹೆಚ್ಚಿದ್ದು, ತಾಮ್ರದ ಆಯುಧಗಳ ತನಿಖೆಯ (investigation) ನಂತರ ಹೊರಬರುವ ಸಂಶೋಧನಾ ಫಲಿತಾಂಶಗಳತ್ತ ಪುರಾತತ್ವಶಾಸ್ತ್ರಜ್ಞರು (Archaeologists) ದೃಷ್ಠಿ ನೆಟ್ಟಿದ್ದಾರೆ. ಪ್ರಾಚೀನ ಕಾಲದಲ್ಲಿಯೂ ಸಹ ಭಾರತೀಯ ಹೋರಾಟಗಾರರು ಸುಧಾರಿತ ಶಸ್ತ್ರಾಸ್ತ್ರಗಳನ್ನು ಹೊಂದಿದ್ದರು ಎಂಬುದಕ್ಕೆ ಈ ತಾಮ್ರದ ಆಯುಧಗಳು ಪುಷ್ಠಿ ನೀಡುತ್ತಿವೆ. ಕೆಲವು ತಜ್ಞರು ಈ ಆಯುಧಗಳು ದ್ವಾರಕಾ ಯುಗಕ್ಕೂ (Dwaraka era) ಹಿಂದಿನವು ಎಂದು ವಿವರಿಸುತ್ತಿದ್ದಾರೆ. ಈ ಆಯುಧಗಳು 4000 ವರ್ಷಗಳಷ್ಟು ಹಳೆಯವು ಎಂದು ನಂಬಲಾಗಿದೆ.

ಶವ ಹೂಳಲು ಗುಂಡಿ ಅಗೆಯುತ್ತಿದ್ದಾಗ ಸಿಕ್ತು ಭಗವಂತನ ಮೂರ್ತಿ, ಪುರಾತತ್ವ ಇಲಾಖೆಗೆ ಸೂಚನೆ
 

Follow Us:
Download App:
  • android
  • ios