* ಕುಮ್ರಾಹಾರ್‌ದಲ್ಲಿನ ಸಂರಕ್ಷಿತ ಕೊಳದಲ್ಲಿ ಪತ್ತೆ: ಪುರಾತತ್ವ ಇಲಾಖೆ* 2,000 ವರ್ಷಗಳಷ್ಟು ಪುರಾತನವಾದ ಇಟ್ಟಿಗೆ ಗೋಡೆಗಳ ಅವಶೇಷ ಪತ್ತೆ* ಕುಶಾನರ ಕಾಲಕ್ಕೆ ಸೇರಿದ್ದಾಗಿರಬಹುದು ಎಂದು ಅಂದಾಜಿಸಿದ ಇಲಾಖೆ

ಪಟನಾ(ಜೂ.05): ಭಾರತೀಯ ಪುರಾತತ್ವ ಇಲಾಖೆಯು ಪಟನಾದಲ್ಲಿ ಸುಮಾರು 2,000 ವರ್ಷಗಳಷ್ಟು ಪುರಾತನವಾದ ಇಟ್ಟಿಗೆ ಗೋಡೆಗಳ ಅವಶೇಷವನ್ನು ಪತ್ತೆಹಚ್ಚಿದ್ದು, ಇದು ಕುಶಾನರ ಕಾಲಕ್ಕೆ ಸೇರಿದ್ದಾಗಿರಬಹುದು ಎಂದು ಅಂದಾಜಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಸರ್ಕಾರದ ‘ಅಮೃತ ಸರೋವರ’ ಉಪಕ್ರಮದಡಿಯಲ್ಲಿ ಪುರಾತತ್ವ ಇಲಾಖೆಯು ಕುಮ್ರಾಹಾರ್‌ನಲ್ಲಿರುವ ಸಂರಕ್ಷಿತ ಕೊಳವನ್ನು ಪುನರುಜ್ಜೀವನಗೊಳಿಸುವ ಕಾರ್ಯ ಕೈಗೊಂಡಿತ್ತು. ಈ ವೇಳೆ ಕೊಳದೊಳಗಡೆ ಪುರಾತನ ಇಟ್ಟಿಗೆಯ ಗೋಡೆ ಕಂಡು ಬಂದಿದೆ ಎಂದು ಪಟನಾದ ಪುರಾತತ್ವ ಶಾಸ್ತ್ರಜ್ಞೆ ಗೌತಮಿ ಭಟ್ಟಾಚಾರ್ಯ ತಿಳಿಸಿದ್ದಾರೆ.

‘ಈ ಇಟ್ಟಿಗೆಯ ಗೋಡೆಯು ಕುಶಾನರ ಕಾಲಕ್ಕೆ ಸೇರಿದ್ದಾಗಿರಬಹುದು. ಕುಶಾನರು ಅಪ್ಘಾನಿಸ್ತಾನ ಸೇರಿದಂತೇ ಇಡೀ ಉತ್ತರ ಭಾರತದ ಭಾಗದಲ್ಲಿ ಕ್ರಿಸ್ತಶಕ 30 ರಿಂದ ಸುಮಾರು ಕ್ರಿ.ಶ 375ರವರೆಗೆ ಆಳ್ವಿಕೆ ನಡೆಸಿದ್ದರು. ಇಟ್ಟಿಗೆ ಗೋಡೆಯ ವಿವರವಾದ ಅಧ್ಯಯನದ ಬಳಿಕ ಇನ್ನಷ್ಟುಮಾಹಿತಿ ತಿಳಿಯಲಿದೆ’ ಎಂದಿದ್ದಾರೆ.

ಕುಮ್ರಾಹಾರ್‌ನಲ್ಲಿ ಈ ಹಿಂದೆ ಮೌರ್ಯರ ಕಾಲಕ್ಕೆ ಸೇರಿದ ಪುರಾತನ ಅವಶೇಷಗಳೂ ಪತ್ತೆಯಾಗಿದ್ದವು.