ಪ್ರಯಾಣಿಕರ ರೈಲಿನ ಟಿಕೆಟ್‌ ದರ ನಿಗದಿ ಹೇಗೆ ಮಾಡಲಾಗುತ್ತದೆ ಎಂದು ಹೇಳಲಾಗದು. ಯಾಕೆಂದರೆ ಅದು ವ್ಯಾಪಾರದ ಸೀಕ್ರೆಟ್‌. ಈ ದರ ನಿಗದಿ ಪ್ರಕ್ರಿಯೆಗೆ ಮಾಹಿತಿ ಹಕ್ಕುಗಳ ಕಾಯ್ದೆಯಿಂದ ರಕ್ಷಣೆ ಇದೆ ಎಂದು ಭಾರತೀಯ ರೈಲ್ವೆಯು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ತಿಳಿಸಿದೆ.

ನವದೆಹಲಿ: ಪ್ರಯಾಣಿಕರ ರೈಲಿನ ಟಿಕೆಟ್‌ ದರ ನಿಗದಿ ಹೇಗೆ ಮಾಡಲಾಗುತ್ತದೆ ಎಂದು ಹೇಳಲಾಗದು. ಯಾಕೆಂದರೆ ಅದು ವ್ಯಾಪಾರದ ಸೀಕ್ರೆಟ್‌. ಈ ದರ ನಿಗದಿ ಪ್ರಕ್ರಿಯೆಗೆ ಮಾಹಿತಿ ಹಕ್ಕುಗಳ ಕಾಯ್ದೆಯಿಂದ ರಕ್ಷಣೆ ಇದೆ ಎಂದು ಭಾರತೀಯ ರೈಲ್ವೆಯು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ತಿಳಿಸಿದೆ.

ಆರ್‌ಟಿಐ ನಡಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಈ ಪ್ರತಿಕ್ರಿಯೆ

ತತ್ಕಾಲ್‌ ಬುಕ್ಕಿಂಗ್‌ ಸೇರಿ ಪ್ರಯಾಣಿಕರ ರೈಲು ಪ್ರಯಾಣದ ಮೂಲ ದರ ನಿಗದಿ ಕುರಿತ ಮಾಹಿತಿ ನೀಡುವಂತೆ ಕೋರಿ ಆರ್‌ಟಿಐ ನಡಿ ಸಲ್ಲಿಕೆಯಾಗಿದ್ದ ಅರ್ಜಿಗೆ ಸಂಬಂಧಿಸಿ ಈ ಪ್ರತಿಕ್ರಿಯೆ ನೀಡಲಾಗಿದೆ.

ವಿವಿಧ ಪ್ರಯಾಣ ವರ್ಗಗಳು,ಸೌಲಭ್ಯಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ

ಪ್ರಯಾಣಿಕರ ದರವನ್ನು ವಿವಿಧ ಪ್ರಯಾಣ ವರ್ಗಗಳು (ಎಸಿ, ನಾನ್‌ ಎಸಿ ಹೀಗೆ...) ಹಾಗೂ ಒದಗಿಸಲಾಗುವ ಸೌಲಭ್ಯಗಳನ್ನು ಆಧರಿಸಿ ನಿರ್ಧರಿಸಲಾಗುತ್ತದೆ. ಆದರೆ, ದರ ನಿಗದಿಗೆ ಯಾವ ಮಾರ್ಗ ಅನುಸರಿಸಲಾಗುತ್ತದೆ ಎಂಬುದು ವ್ಯಾಪಾರದ ರಹಸ್ಯವಾಗಿದೆ. ವ್ಯಾಪಾರ ರಹಸ್ಯಗಳು ಹಾಗೂ ಬೌದ್ಧಿಕ ಆಸ್ತಿ ಹಕ್ಕುಗಳನ್ನು ಆರ್‌ಟಿಐ ಕಾಯ್ದೆಯ ಸೆಕ್ಷನ್‌ 8ರಡಿ ಬಹಿರಂಗಪಡಿಸಲು ಆಗುವುದಿಲ್ಲ. ಇಂಥ ಮಾಹಿತಿ ಬಹಿರಂಗಪಡಿಸುವುದರಿಂದ ಕಾಯ್ದೆಯಡಿ ವಿನಾಯ್ತಿ ನೀಡಲಾಗಿದೆ ಎಂದು ಹೇಳಿದೆ.