ದೇವಸ್ಥಾನ ದರ್ಶನಕ್ಕೆ ತೆರಳಿದ್ದ ಕುಟುಂಬ ಟೀ ಬ್ರೇಕ್‌ಗಾಗಿ ವಾಹನ ನಿಲ್ಲಿಸಿದ್ದಾರೆ. ತಿಂಡಿ ಸವಿದು ಎಲ್ಲರೂ ವಾಹನ ಹತ್ತಿದ್ದಾರೆ. ಆಧರೆ 80 ಕಿಲೋಮೀಟರ್ ಕ್ರಮಿಸಿದ ಬಳಿಕವಷ್ಟೇ ತಮ್ಮ 8 ವರ್ಷದ ಮಗ ವಾಹನ ಹತ್ತಿಲ್ಲ ಅನ್ನೋದು ಗೊತ್ತಾಗಿದೆ.
ಹಿಮಾಚಲ ಪ್ರದೇಶ (ಅ.08) ಶಕ್ತಿಪೀಠಗಳ ದರ್ಶನ ಪಡೆಯಲು ದೊಡ್ಡ ಕುಟುಂಬ ಟೆಂಪೋ ಟ್ರಾವಲರ್ ಮೂಲಕ ಹಿಮಾಚಲ ಪ್ರದೇಶಕ್ಕೆ ತೆರಳಿದೆ. ಶಕ್ತಿಪೀಠಗಳ ದರ್ಶನಕ್ಕೆ ತೆರಳಿದ್ದ ಕುಟುಂಬ ಟೀ ಹಾಗೂ ತಿಂಡಿಗಾಗಿ ವಾಹನ ನಿಲ್ಲಿಸಿದ್ದಾರೆ. ಢಾಬಾದಲ್ಲಿ ನಿಲ್ಲಿಸಿ ಕುಟುಂಬ ಸಮೇತ ತಿಂಡಿ ಸವಿಸು ಚಹಾ ಕುಡಿದಿದ್ದಾರೆ. ಬಳಿಕ ಟೆಂಪೋ ಟ್ರಾವಲರ್ ಹತ್ತಿ ತೆರಳಿದ್ದಾರೆ. ಬರೋಬ್ಬರಿ 80 ಕಿಲೋಮೀಟರ್ ಪ್ರಯಾಣದ ಬಳಿಕ, ತಮ್ಮ 8 ವರ್ಷದ ಮಗ ವಾಹನ ಹತ್ತಿಲ್ಲ ಅನ್ನೋದು ಗೊತ್ತಾಗಿದೆ. ಮಗನ ಢಾಬಾದಲ್ಲಿ ಬಿಟ್ಟು ಬಂದಿದ್ದೇವೆ ಅನ್ನೋದು ಗೊತ್ತಾದಾಗ ಸರಿಸುಮಾರು ಎರಡೂವರೆ ಗಂಟೆ ದೂರ ಪ್ರಯಾಣ ಮಾಡಿದ್ದರು. ಮುಂದೆ ನಡೆದಿದ್ದ ರೋಚಕ ಘಟನೆ.
ಢಾಬಾದಲ್ಲಿ ಟೀ ಬ್ರೇಕ್
ಉತ್ತರ ಪ್ರದೇಶದ ಲಖನೌದಿಂದ 21 ಮಂದಿಯ ದೊಡ್ಡ ಕುಟುಂಬವೊಂದು ಹಿಮಾಚಲ ಪ್ರದೇಶದಲ್ಲಿನ ಪ್ರಸಿದ್ಧ ಶಕ್ತಿಪೀಠಗಳ ದರ್ಶನಕ್ಕೆ ತೆರಳಿದೆ. ಉನಾ ಜಿಲ್ಲೆಯ ಅಂಬ್ ಬಳಿ ಟೆಂಪೋ ಟ್ರಾವಲರ್ ನಿಲ್ಲಿಸಲು ಸೂಚಿಸಿದ್ದಾರೆ. ವಾಹನ ನಿಲ್ಲಿಸಿ ತಿಂಡಿ, ಟೀ ಕುಡಿದು ಪ್ರಯಾಣ ಬೆಳೆಸಲು ಪ್ಲಾನ್ ಮಾಡಿದ್ದಾರೆ. ಇದರಂತೆ ವಾಹನ ಚಾಲಕ ಢಾಬಾ ಬಳಿ ಗಾಡಿ ನಿಲ್ಲಿಸಿದ್ದಾನೆ. 21 ಸದಸ್ಯರು ವಾಹನದಿಂದ ಇಳಿದು ಢಾಬಾದಲ್ಲಿ ತಿಂಡಿ ಸವಿದಿದ್ದಾರೆ. ಅರ್ಧ ಗಂಟೆಗೂ ಹೆಚ್ಚು ಕಾಲ ಢಾಬಾದಲ್ಲಿ ಕುಳಿತು ಆಹಾರ ಸವಿದಿದ್ದಾರೆ. ಜೊತೆ ಚಹಾ ಕುಡಿದು ತೆರಳಿದ್ದಾರೆ.
ಪೋಷಕರು ಗಮನಿಸಲಿಲ್ಲ, ಕುಟುಂಬಸ್ಥರಿಗೂ ಗೊತ್ತೇ ಇಲ್ಲ
ಎಲ್ಲರು ವಾಹನ ಹತ್ತಿದರೆ ಈ ಕುಟುಂಬದಲ್ಲಿದ್ದ 8 ವರ್ಷದ ಬಾಲಕ ಇನ್ನು ವಾಹನ ಹತ್ತಿರಲಿಲ್ಲ. ನಿಧಾನವಾಗಿ ಚಹಾ ಕುಡಿಯುತ್ತಿದ್ದ ಬಾಲಕ ಟೇಬಲ್ ಮೇಲೆ ಗ್ಲಾಸ್ ಇಟ್ಟು ನೋಡಿದಾಗ ತಮ್ಮ ಕುಟುಂಬಸ್ಥರು, ಪೋಷಕರು ಯಾರೂ ಇರಲಿಲ್ಲ. ಅತ್ತ ವಾಹನವೂ ಇಲ್ಲ. ವಾಹನ ಹತ್ತಿದ ಬಳಿಕ ಪೋಷಕರು ತಮ್ಮ ಮಗನ ಬಗ್ಗೆ ವಿಚಾರಿಸಲು ಹೋಗಿಲ್ಲ, ಕುಟುಂಬಸ್ಥರಿಗೂ ಗೊತ್ತೇ ಇಲ್ಲ. ವಾಹನ ಹೊರಟಿದೆ.
ಢಾಬದಲ್ಲಿ ಅಳುತ್ತಾ ನಿಂತ ಬಾಲಕ
ಬಾಲಕ ವಾಹನ ಹತ್ತಲು ಬಂದಾಗ ಟೆಂಪೋ ಟ್ರಾವಲರ್ ನಾಪತ್ತೆ. ಇತ್ತ ಪೋಷಕರು ಇಲ್ಲ. ಹೀಗಾಗಿ ಬಾಲಕನ ಆತಂಕ ಹೆಚ್ಚಾಗಿದೆ. ಭಯದಿಂದ ಅಳಲು ಆರಂಭಿಸಿದ್ದಾನೆ. ಹೊಟೆಲ್ ಸಿಬ್ಬಂದಿ ಗಮನಿಸಿ ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಬಾಲಕನ ಬಳಿ ಬಂದು ವಿಚಾರಿಸಿದಾಗ ಕುಟುಂಬಸ್ಥರು ಬಾಲಕನ ಬಿಟ್ಟು ತೆರಳಿರುವುದು ಗೊತ್ತಾಗಿದೆ. ಹೀಗಾಗಿ ಹೊಟೆಲ್ ಮಾಲೀಕ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ತಕ್ಷಣವೇ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದಾರೆ. ಬಳಿಕ ಸಿಸಿಟಿವಿ ಮೂಲಕ ಪರಿಶೀಲಿಸಿದ್ದಾರೆ.
ವಾಹನದ ನೋಂದಣಿ ಸಂಖ್ಯೆ ಪರಿಶೀಲಿಸಿದ್ದಾರೆ. ಬಳಿಕ ವಾಹನ ಮಾಲೀಕರನ್ನು ಪೊಲೀಸರು ಸಂಪರ್ಕಿಸಿದ್ದಾರೆ. ಮಾಲೀಕರಿಂದ ಟೆಂಪೋ ಟ್ರಾವಲರ್ ನಂಬರ್ ಪಡೆದು ಚಾಲಕನ ಸಂಪರ್ಕಿಸಿದ್ದಾರೆ. ಅಷ್ಟರೊಳಗೆ ವಾಹನ ಬರೋಬ್ಬರಿ 80 ಕಿಲೋಮೀಟರ್ ದೂರ ಸಾಗಿದೆ. ಚಾಲಕನಿಗೆ 8 ವರ್ಷದ ಬಾಲಕ ಇಲ್ಲೇ ಬಿಟ್ಟು ಹೋಗಿದ್ದೀರಿ. ಅವರ ಪೋಷಕರಿಗೆ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ. ಇಷ್ಟೇ ಅಲ್ಲ ತಕ್ಷಣವೇ ಮರಳಿ ಬರುವಂತೆ ಸೂಚಿಸಲಾಗಿದೆ.
ಪೊಲೀಸರು ಚಾಲಕನಿಗೆ ಫೋನ್ ಮಾಡಿ ತಿಳಿಸಿದ ಬಳಿಕವಷ್ಟೇ ಪೋಷಕರಿಗೆ ತಮ್ಮ 8 ವರ್ಷದ ಬಾಲಕ ವಾಹನ ಹತ್ತಿಲ್ಲ ಅನ್ನೋದು ಗೊತ್ತಾಗಿದೆ. ಬಳಿಕ ಸುಮಾರು ಎರಡೂವರೆ ಗಂಟೆ ಬಳಿಕ ಅಂಬ್ ಬಳಿಯ ಢಾಬಾಗೆ ಟಿಟಿ ವಾಹನ ಆಗಿಮಿಸಿದೆ. ಪೊಲೀಸರು ಬಾಲಕನನ್ನು ಪೋಷಕರಿಗೆ ಹಸ್ತಾಂತರಿಸಿದ ಘಟನೆ ನಡೆದಿದೆ.


