ಶ್ರೀನಗರ(ಮೇ.23): ಕೊರೋನಾ ಲಸಿಕೆ ಹಾಕಿಸಿಕೊಂಡ 120 ವರ್ಷದ ಕಾಶ್ಮೀರಿ ವೃದ್ಧೆ ಲಸಿಕೆ ಹಾಕಿಸಿಕೊಂಡ ಮೇಲೆ ಯಾರೂ ನನ್ನನ್ನು ಅಭಿನಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಜಮ್ಮುಕಾಶ್ಮೀರದ ಉಧಾಮ್‌ಪುರ ಜಿಲ್ಲೆಯ ದುಡು ಗ್ರಾಮದ ಧೋಲಿ ದೇವಿಗೆ 120 ವರ್ಷ.

ದುಡು ಉಪವಿಭಾಗದ ಕಟಿಯಾಸ್‌ನಲ್ಲಿ ವಾಸಿಸುವ ಧೋಲಿ ಈ ಬಗ್ಗೆ ಪ್ರತಿಕ್ರಿಯಿಸಿ, ವ್ಯಾಕ್ಸಿನ್ ಪಡೆಯುವುದು ಸುರಕ್ಷಿತ, ನನಗೆ ಒಳ್ಳೆಯ ಅನುಭವ ಆಯಿತು. ಹಾಗಾದ್ರೆ ಎಲ್ರೂ ಯಾಕೆ ತಗೊಳ್ಬಾರ್ದು ? ಎಂದು ಪ್ರಶ್ನಿಸಿದ್ದಾರೆ.

ಆಸ್ಪತ್ರೆಗೆ ಹೋಗಿದ್ದೆ ಎಂದು ವ್ಯಕ್ತಿಯ ಕಳ್ಳಾಟ, ಬೆಂಝ್ ಕಾರು ಸೀಜ್..!

ಮಾಸ್ಕ್ ಹಾಕ್ಕೊಂಡು ಸ್ಟ್ರೆಸ್ ಅನುಭವಿಸುತ್ತಾ, ಮನೆಯಿಂದ ಹೊರ ಬಾರದೆ, ಕೊರೋನಾ ರೂಲ್ಸ್ ಅನುಸರಿಸಿಕೊಂಡಿರುವ ಜೊತೆಗೆ ವ್ಯಾಕ್ಸೀನ್ ಪಡೆಯುವ ಅಗತ್ಯ ಎಂದಿದ್ದಾರೆ.

ಈ ಪ್ರದೇಶವನ್ನು ಕಟಿಯಾ ಎನ್ನುತ್ತಾರೆ. ಇದು ಒಂದು ಪ್ರತ್ಯೇಕ ಸ್ಥಳ. ಮುಖ್ಯ ಸ್ಥಳ ತಲುಪಲು ಒಂದು ದಿನ ಬೇಕು. 120 ವರ್ಷದ ನಮ್ಮ ತಾಯಿ ಅವರೇ ಲಸಿಕೆ ಹಾಕಿಸಿಕೊಂಡರು. ಎಲ್ಲರೂ ಕೊರೋನಾದಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಆಕೆಯನ್ನು ಉದಾಹರಣೆಯನ್ನಾಗಿ ತೆಗೆದುಕೊಳ್ಳಬೇಕು. ಆಕೆ ಆರಾಮವಾಗಿದ್ದಾಳೆ, ಯಾವುದೇ ಕಾಂಪ್ಲಿಕೇಷನ್ಸ್ ಇಲ್ಲ ಎಂದು ಧೋಲಿ ದೇವಿಯ ಸಂಬಂಧಿ ಶಂಭು ರಾಮ್ ಹೇಳಿದ್ದಾರೆ.

ರಾಜ್ಯದ ಸೋಂಕಿತರಿಗೆ NRI ವೈದ್ಯರ ಫೋನ್ ಟ್ರೀಟ್ಮೆಂಟ್!

ಅಜ್ಜಿ ವ್ಯಾಕ್ಸೀನ್ ಪಡೆದು ಯಾವುದೇ ಅಡ್ಡ ಪರಿಣಾಮ ಇಲ್ಲ ಎಂದಿದ್ದಾರೆ ಎಂದು ಧೋಲಿ ಅವರ ಮೊಮ್ಮಗ ಪ್ರದೀಪ್ ಕುಮಾರ್ ಹೇಳಿದ್ದಾರೆ. 120 ವರ್ಷದ ವೃದ್ಧೆಗೆ ಲಸಿಕೆ ಪಡೆದು ಯಾವುದೇ ಸಮಸ್ಯೆಯಾಗದಿದ್ದರೆ, ಮತ್ಯಾರೂ ಭಯಪಡಬೇಕಾಗಿಲ್ಲ ಎಂದಿದ್ದಾರೆ. ಉತ್ತರ ಸೇನೆ ಕಮಾಂಡರ್ ಲೆ. ಜನರಲ್ ಯೋಗೇಶ್ ಕುಮಾರ್ ಜೋಶಿ ಜನರಿಗೆ ಪ್ರೇರಣೆಯಾಗಿದ್ದಕ್ಕೆ ಧೋಲಿಯವರನ್ನು ಅಭಿನಂದಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona