ಹಜಿರಾ ಪ್ಲಾಂಟ್ ಸ್ಟೀಲ್ ಕೇಂದ್ರದ ವಿಸ್ತರಣೆಯಿಂದ ಆರ್ಥಿಕತೆ ಸದೃಢ, ಪ್ರಧಾನಿ ಮೋದಿ ಭಾಷಣ!
ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ (AM/NS) ಸಮಗ್ರ ಸೌಲಭ್ಯದ ವಿಸ್ತರಣೆ ಕೇಂದ್ರದ ಭೂಮಿ ಪೂಜೆ ನೆರವೇರಿಸಿ ವರ್ಚುವಲ್ ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ, ಸ್ಟೀಲ್ ಉತ್ಪಾದನೆಯಲ್ಲಿ ಭಾರತವನ್ನು ಇತರ ದೇಶಗಳು ಆಶ್ರಯಿಸುವ ಕಾಲ ದೂರವಿಲ್ಲ ಎಂದಿದ್ದಾರೆ. ಮೋದಿ ಭಾಷಣದ ಹೈಲೈಟ್ಸ್ ಇಲ್ಲಿದೆ.
ವಡೋದರ(ಅ.28): ದೇಶದ ಅಭಿವೃದ್ಧಿ ಯಾತ್ರೆಯಲ್ಲಿ ಸ್ಟೀಲ್ ಉದ್ಯಮದ ಪಾತ್ರ ಮತ್ತಷ್ಟು ಬಲಿಷ್ಠವಾಗಲಿದೆ. ದೇಶದಲ್ಲಿ ಸ್ಟೀಲ್ ಕ್ಷೇತ್ರ ಯಾವಾಗ ವಿಸ್ತಾರವಾಗುತ್ತದೆ, ದೇಶದಲ್ಲಿನ ರಸ್ತೆ, ವಿಮಾನ ನಿಲ್ದಾಣ, ಸಂಪರ್ಕ ವಿಸ್ತಾರಗೊಳ್ಳಲಿದೆ. ಸ್ಟೀಲ್ ಸೆಕ್ಟರ್ ಬಲಿಷ್ಠವಾಗುತ್ತಿದ್ದಂತೆ ಭಾರತದ ಉತ್ಪಾದನೆ, ಕಟ್ಟಡ ನಿರ್ಮಾಣ ಹೆಚ್ಚಾಗಲಿದೆ. ಭಾರತದ ಡಿಫೆನ್ಸ್, ವಾಯುಸೇನೆ ಸೇರಿದಂತೆ ರಕ್ಷಣಾ ಪಡೆಗಳು ಬಲಿಷ್ಠಗೊಳ್ಳಲಿದೆ. ಸ್ಟೀಲ್ ಪ್ಲಾಂಟ್ ವಿಸರಣೆಯಿಂದ ದೇಶದ ಆದಾಯದಲ್ಲೂ ಹೆಚ್ಚಳವಾಗಲಿದೆ. ಉದ್ಯೋಗವಕಾಶಗಳು ಸೃಷ್ಟಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಗುಜರಾತ್‌ನ ಹಜಿರಾದಲ್ಲಿ ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ (AM/NS) ಸಮಗ್ರ ಸೌಲಭ್ಯದ ವಿಸ್ತರಣೆಯ ಭೂಮಿ ಪೂಜೆ ಕಾರ್ಯಕ್ರವನ್ನು ವರ್ಚುವಲ್ ಮೂಲಕ ನೆರವೇರಿಸಿದ್ದಾರೆ. ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತ್ ಅಡಿಯಲ್ಲಿ ಈ ವಿಸ್ತರಣೆ ಯೋಜನೆ ಸಾಕಾರಗೊಳ್ಳುತ್ತಿದೆ. ಬರೋಬ್ಬರಿ 60,000 ಕೋಟಿ ರೂಪಾಯಿ ಹೂಡಿಕೆಯ ಈ ಯೋಜನೆ ದೇಶದಲ್ಲಿ ವಿಫುಲ ಉದ್ಯೋಗವಕಾಶ ಸೃಷ್ಟಿಸಲಿದೆ. ಈ ಯೋಜನೆಯು ಮೌಲ್ಯವರ್ಧಿತ ಉಕ್ಕಿನ ಪ್ರಕಾರಗಳ ಉತ್ಪಾದನೆ ನೆರವಾಗಲಿದೆ. ಇಷ್ಟೇ ಅಲ್ಲ ವಿಶ್ವದಲ್ಲೇ ಭಾರತವೂ ಉಕ್ಕಿನ ಉತ್ಪಾದನಾ ಕೇಂದ್ರ ಸ್ಥಾನ ಪಡೆಯಲು ನರವಾಗಲಿದೆ.
ನರೇಂದ್ರ ಮೋದಿ ವಿದೇಶಾಂಗ ನೀತಿ ಹೊಗಳಿ, ಭವಿಷ್ಯದಲ್ಲಿ ಎಲ್ಲವೂ ಭಾರತ ಎಂದ ಪುಟಿನ್!
ಸ್ಟೀಲ್ ಪ್ಲಾಂಟ್ ವಿಸ್ತಾರ ಮಾತ್ರವಲ್ಲ, ಇದರ ಜೊತೆಗೆ ಅತ್ಯಾಧುನಿಕ ತಂತ್ರಜ್ಞಾನ ಕೂಡ ಆಗಮಿಸುತ್ತಿದೆ. ಇದರಿಂದ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲೂ ಗಣನೀಯವಾಗಿ ಏರಿಕೆಯಾಗಲಿದೆ. ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ವಿಸ್ತರಣೆ ಆತ್ಮನಿರ್ಭರ್ ಭಾರತ್ ಯೋಜನೆ ಪ್ರಯತ್ನದ ಫಲವಾಗಿದೆ. ಇದೀಗ ವಿಶ್ವವೇ ಭಾರತವನ್ನು ಅತೀ ವಿಶ್ವಾಸದಿಂದ ನೋಡುತ್ತಿದೆ. ವಿಶ್ವದಲ್ಲೇ ಭಾರತ ಉತ್ಪಾದನಾ ಹಬ್ ಆಗುವತ್ತ ಹೆಜ್ಜೆ ಇಡುತ್ತಿದೆ. ಇದಕ್ಕೆ ಕೇಂದ್ರ ಸರ್ಕಾರ ಯೋಜನೆಗಳ ಮೂಲಕ ನೆರವು ನೀಡುತ್ತಿದೆ ಎಂದು ಮೋದಿ ಹೇಳಿದ್ದಾರೆ.
ಕಳೆದ 8 ವರ್ಷಗಳಲ್ಲಿ ಭಾರತದ ಸ್ಟೀಲ್ ಕ್ಷೇತ್ರ ವಿಶ್ವದ ಎರಡನೇ ಅತೀ ದೊಡ್ಡ ಸ್ಟೀಲ್ ಉತ್ಪಾದನಾ ಕ್ಷೇತ್ರವಾಗಿ ಹೊರಹೊಮ್ಮಿದೆ. ಈಹಿಂದೆ ನಾವು ಏರ್‌ಕ್ರಾಫ್ಟ್ ಉತ್ಪಾದನೆಯಲ್ಲಿ ಇತರ ದೇಶವನ್ನು ಅವಲಂಬಿಸುತ್ತಿದ್ದೇವು. ಪ್ರತಿ ಹಂತದಲ್ಲಿ ಸ್ಟೀಲ್‌ಗಗಾಗಿ ಇತರ ದೇಶವನ್ನು ಅವಲಂಬಿಸುವ ಕಾಲವಿತ್ತು. ಆದರೆ ಇದೀಗ ಎಲ್ಲವೂ ಬದಲಾಗಿದೆ. ಇದೀಗ ಎಲ್ಲಾ ಸ್ಟೀಲ್ ಹೈಗ್ರೇಡ್ ಸ್ಟೀಲ್ ಉತ್ಪಾದನೆ ಭಾರತದಲ್ಲೇ ಆಗುತ್ತಿದೆ. ಐಎನ್‌ಎಸ್ ವಿಕ್ರಾಂತ ಸಂಪೂರ್ಣವಾಗಿ ಸ್ವದೇಶದಲ್ಲಿ ನಿರ್ಮಾಣವಾಗಿದೆ. ಇದರಿಂದ ಭಾರತ ಸ್ವಾವಲಂಬಿಯಾಗಿದೆ. ಇದು ಆತ್ಮನಿರ್ಭರ್ ಭಾರತದ ಉದ್ದೇಶ ಎಂದು ಮೋದಿ ಹೇಳಿದ್ದಾರೆ.
ಬೆಂಗ್ಳೂರಿನ ಮೋದಿ ಶೋಗೆ ಭರ್ಜರಿ ಸಿದ್ಧತೆ: 3 ಲಕ್ಷ ಜನ ಭಾಗಿ ನಿರೀಕ್ಷೆ
ಮುಂದಿನ 10 ವರ್ಷಗಳ 300 ಮಿಲಿಯನ್ ಟನ್ ಸ್ಟೀಲ್ ಉತ್ಪಾದನೆ ಗುರಿ ಇಟ್ಟುಕೊಂಡಿದ್ದೇವೆ. ಸ್ಟೀಲ್ ಉತ್ಪಾದನೆಯಲ್ಲಿ ಕಾರ್ಬನ್ ಹೊರಸೂಸುವಿಕೆಯಿಂದ ಪರಿಸರ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಇದಕ್ಕಾಗಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ಪರಿಸರಕ್ಕೆ ಪೂರಕವಾಗಿ ಕ್ಷೇತ್ರ ವಿಸ್ತಾರವಾಗುತ್ತಿದೆ. ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ ವಿಸ್ತರಣೆ ಯೋಜನೆಯಿಂದ ದೇಶದಲ್ಲಿ ವಿಫುಲ ಉದ್ಯೋಗವಕಾಶ ಸೃಷ್ಟಿಯಾಗುತ್ತಿದೆ. ಇದರಿಂದ ದೇಶದ ಅಭಿವೃದ್ಧಿಗೆ ಮತ್ತಷ್ಟು ವೇಗ ಸಿಗಲಿದೆ. ಖಾಸಗಿ ಹಾಗೂ ಸರ್ಕಾರ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಈ ವಿಸ್ತಾರ ಯೋಜನೆಯಿಂದ ಭಾರತ ಸ್ಟೀಲ್ ಉತ್ಪಾದನೆಯಲ್ಲಿ ಮಹತ್ತರ ಸಾಧನೆ ಮಾಡಲಿದೆ. ಮುಂಬರುವ ದಿನಗಳಲ್ಲಿ ಭಾರತವನ್ನು ಬಹುತೇಕ ದೇಶಗಳು ಆಶ್ರಯಿಸಲಿದೆ ಎಂದು ಮೋದಿ ಹೇಳಿದ್ದಾರೆ.
ಆರ್ಸೆಲರ್ ಮಿತ್ತಲ್ ನಿಪ್ಪಾನ್ ಸ್ಟೀಲ್ (AM/NS) ಸಮಗ್ರ ಸೌಲಭ್ಯದ ವಿಸ್ತರಣೆಯ ಯೋಜನೆಗೆ ಸಂಪೂರ್ಣ ನೆರವು ನೀಡಿದ ಗುಜರಾತ್ ಸರ್ಕಾರವನ್ನು ಈ ಸಂದರ್ಭದಲ್ಲಿ ಮೋದಿ ಅಭಿನಂದಿಸಿದರು. ಮುಂದಿನ ದಿನಗಳಲ್ಲಿ ಸ್ಟೀಲ್ ಕ್ಷೇತ್ರ ಹಾಗೂ ಈ ವಿಸ್ತರಣೆ ಕೇಂದ್ರ ಭಾರತ ಹಾಗೂ ವಿಶ್ವದಲ್ಲಿ ಗುರುತಿಸಿಕೊಳ್ಳಲಿದೆ ಎಂದು ಮೋದಿ ಶುಭಹಾರೈಸಿದ್ದಾರೆ.