Asianet Suvarna News Asianet Suvarna News

Exit poll 2022 ಸತತ 2ನೇ ಬಾರಿಗೆ ಬಿಜೆಪಿ ಅಧಿಕಾರಕ್ಕೆ ಎಂದ ಸಮೀಕ್ಷೆ, 35 ವರ್ಷಗಳ ಬಳಿಕ ಉತ್ತರ ಪ್ರದೇಶದಲ್ಲಿ ದಾಖಲೆ ಸಾಧ್ಯತೆ!

  • ಉತ್ತರಪ್ರದೇಶದಲ್ಲಿ ಬಿಜೆಪಿ ಇತಿಹಾಸ ಸೃಷ್ಟಿ?
  • ಮೋದಿ-ಯೋಗಿ ಜೋಡಿಯಿಂದ ಕಮಾಲ್‌?
  • ಡಬಲ್‌ ಎಂಜಿನ್‌ ಸರ್ಕಾರದ ಮೋದಿ ಮಂತ್ರ ನೀಡಬಹುದು ಫಲ
Exit Polls survey says BJP will break 35 year jinx and come back to power in Uttar pradesh ckm
Author
Bengaluru, First Published Mar 8, 2022, 1:04 AM IST | Last Updated Mar 8, 2022, 1:04 AM IST

ಲಖನೌ(ಮಾ.08): ಉತ್ತರಪ್ರದೇಶದಲ್ಲಿ ಕಳೆದ 35 ವರ್ಷದಲ್ಲಿ ಸತತ 2ನೇ ಬಾರಿ ಪಕ್ಷವೊಂದು ಅಧಿಕಾರಕ್ಕೆ ಬಂದ ಉದಾಹರಣೆ ಇರಲಿಲ್ಲ. ಆದರೆ ಈ ಸಲ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ಪ್ರಧಾನಿ ನರೇಂದ್ರ ಮೋದಿ ಜೋಡಿ ಮ್ಯಾಜಿಕ್‌ ನಡೆಸುವ ಸಾಧ್ಯತೆ ಇದೆ.

ಕಳೆದ ಸಲಕ್ಕಿಂತ ಕಡಿಮೆ ಸ್ಥಾನ ಗಳಿಸಿದರೂ ಆಡಳಿತ ವಿರೋಧಿ ಅಲೆ ಮೆಟ್ಟಿನಿಂತು ರಾಜ್ಯದಲ್ಲಿ ನಿರಂತರವಾಗಿ ಬಿಜೆಪಿ ಅಧಿಕಾರಕ್ಕೆ ಬರುವುದು ಪಕ್ಕಾ ಎಂದು ಸಮೀಕ್ಷೆಗಳು ಹೇಳಿವೆ. ತೀವ್ರ ಸ್ಪರ್ಧೆ ನೀಡಿದರೂ ಅಖಿಲೇಶ್‌ ಯಾದವ್‌ರ ಸಮಾಜವಾದಿ ಪಕ್ಷಕ್ಕೆ ಶತಕ ದಾಟಲು ಮಾತ್ರ ಸಾಧ್ಯವಾಗಲಿದೆ. ಬಿಎಸ್‌ಪಿ, ಕಾಂಗ್ರೆಸ್‌ ಇನ್ನಿಲ್ಲದಂತೆ ನೆಲಕಚ್ಚಲಿವೆ ಎಂದು ಹೇಳಲಾಗಿದೆ.’

Punjab Exit Poll 2022 ಪಂಜಾಬ್‌ನಲ್ಲಿ ಕಾಂಗ್ರೆಸ್ ಧೂಳೀಪಟ, ಕೇಜ್ರಿವಾಲ್ ಪಕ್ಷಕ್ಕೆ ಪಟ್ಟ, ಸಮೀಕ್ಷಾ ವರದಿ ಪ್ರಕಟ!

ಬಿಜೆಪಿ ಜಯಕ್ಕೆ ಕಾರಣವೇನು?:
ರಾಜ್ಯದಲ್ಲಿ, ಕೇಂದ್ರದ ಕೃಷಿ ಕಾಯ್ದೆ ವಿರುದ್ಧ ಆಕ್ರೋಶವಿದ್ದರೂ ಬಿಜೆಪಿ ಗೆಲ್ಲಲಿದೆ ಎಂಬ ಸಮೀಕ್ಷೆಗಳ ಭವಿಷ್ಯಕ್ಕೆ, ಮೋದಿ-ಆದಿತ್ಯನಾಥ್‌ ಪ್ರಬಲ ಜೋಡಿಯ ಜಾದೂ ಕಾರಣ ಎಂದು ಹೇಳಲಾಗಿದೆ. ಕೃಷಿ ಕಾಯ್ದೆಗಳು ಬಿಜೆಪಿಗೆ ಮುಳುವಾಗಬಹುದು ಎಂಬ ಸುಳುಹು ಮೋದಿಗೆ ಸಿಕ್ಕ ಕಾರಣ ಅವರು ಆ ಕಾಯ್ದೆಗಳನ್ನು ಹಿಂಪಡೆದರು. ಹೀಗಾಗಿ ಕಾಯ್ದೆ ವಿರುದ್ಧವಿದ್ದ ಜಾಟ್‌ ಸಮುದಾಯದ ಆಕ್ರೋಶ ತಣಿಯಿತು ಎನ್ನಲಾಗಿದೆ.

ಇದೇ ವೇಳೆ, ಎಸ್‌ಪಿಯ ಅಖಿಲೇಶ್‌ ಯಾದವ್‌ ಈ ಸಲ ಏಕಾಂಗಿಯಾಗಿದ್ದಾರೆ. ತಂದೆ ಮುಲಾಯಂ ಅನಾರೋಗ್ಯದ ಕಾರಣ ಅಖಾಡಕ್ಕೆ ಇಳಿಯದೇ ಇರುವುದು ಅವರಿಗೆ ಮುಳುವಾಗಬಹುದು. ಇನ್ನುಮಾಯವತಿ ಹಾಗೂ ಕಾಂಗ್ರೆಸ್‌ ಕಳಾಹೀನವಾಗಿರುವುದು ಮೊದಲೇ ಮತದಾರರಿಗೆ ಮನವರಿಕೆಯಾಗಿತ್ತು. ಹೀಗಾಗಿ ಈ ಪಕ್ಷಗಳು ಪ್ರಬಲ ಪ್ರಚಾರ ನಡೆಸಲೇ ಇಲ್ಲ. ಇವರ ವಿರುದ್ಧ ‘ಮಾಫಿಯಾ ಮಟ್ಟಹಾಕಿದ್ದೇವೆ’ ಎಂದು ಯೋಗಿ-ಮೋದಿ ಜೋಡಿ ಮಾಡಿದ ಪ್ರಚಾರದ ಅಬ್ಬರ ಹಾಗೂ ಮೋದಿ ಅವರ ‘ಡಬಲ್‌ ಎಂಜಿನ್‌’ ಸರ್ಕಾರದ ಮಂತ್ರ ಬಿಜೆಪಿಗೆ ವರವಾಗಬಹುದು ಎಂದು ಸಮೀಕ್ಷೆಗಳು ಹೇಳಿವೆ.

Uttarakhand Exit Poll 2022: ಬಿಜೆಪಿಗೆ ಕಹಿ, ಕಾಂಗ್ರೆಸ್‌ಗೆ ಅಧಿಕಾರ? ಹೀಗಿದೆ ಸಮೀಕ್ಷೆ ರಿಸಲ್ಟ್

ಉತ್ತರಪ್ರದೇಶ ಕೊನೆ ಹಂತದ ಚುನಾವಣೆ: 55.13% ಮತದಾನ
ಉತ್ತರ ಪ್ರದೇಶ ವಿಧಾನಸಭೆಗೆ ಸೋಮವಾರ 7 ಮತ್ತು ಕಡೆಯ ಹಂತದ ಚುನಾವಣೆ ನಡೆದಿದ್ದು, ಶೇ.55.13ರಷ್ಟುಮತದಾನವಾಗಿದೆ. ಇದರೊಂದಿಗೆ ಈವರೆಗೆ ನಡೆದ ಒಟ್ಟು 7 ಹಂತಗಳಲ್ಲಿ ಒಟ್ಟಾರೆ ಶೇ.57.5ರಷ್ಟುಮತ ಚಲಾವಣೆಯಾಗಿದೆ. 2017ರಲ್ಲಿ ಶೇ.61.04ರಷ್ಟುಮತದಾನವಾಗಿತ್ತು.

5 ರಾಜ್ಯಗಳ ವಿಧಾನಸಭಾ ಚುನಾವಣೆ ಅಂತ್ಯ ಮಾ.10ಕ್ಕೆ ಫಲಿತಾಂಶ
ಕೋವಿಡ್‌ ಭೀತಿಯ ನಡುವೆಯೇ ಉತ್ತರಪ್ರದೇಶ, ಉತ್ತರಾಖಂಡ, ಪಂಜಾಬ್‌, ಮಣಿಪುರ ಮತ್ತು ಗೋವಾ ವಿಧಾನಸಭೆಗೆ ನಿಗದಿಯಾಗಿದ್ದ ವಿಧಾನಸಭಾ ಚುನಾವಣೆಗಳು ಸೋಮವಾರ ಮುಕ್ತಾಯಗೊಂಡಿದೆ. ಸೋಮವಾರ ಉತ್ತರಪ್ರದೇಶದಲ್ಲಿ 7 ಮತ್ತು ಕಡೆಯ ಹಂತದ ಮತದಾನ ನಡೆಯುವುದರೊಂದಿಗೆ ಹಲವು ಹಂತಗಳಲ್ಲಿ ನಡೆದಿದ್ದ ಪ್ರಕ್ರಿಯೆ ಸಮಾಪ್ತಿಯಾಗಿದೆ. ಈ ಎಲ್ಲಾ ರಾಜ್ಯಗಳ ಫಲಿತಾಂಶ ಮಾ.10ಕ್ಕೆ ಪ್ರಕಟವಾಗಲಿದ್ದು, ಎಲ್ಲರ ಗಮನ ಗುರುವಾರದತ್ತ ನೆಟ್ಟಿದೆ.

5 ರಾಜ್ಯಗಳ ಚುನಾವಣಾ ಪ್ರಕ್ರಿಯೆಯು ಫೆ.10ರಂದು ಆರಂಭವಾಗಿತ್ತು. ಉತ್ತರಪ್ರದೇಶದ 403 ಸ್ಥಾನಗಳಿಗೆ 7 ಹಂತ, ಉತ್ತರಾಖಂಡದ 70 ಸ್ಥಾನಕ್ಕೆ ಒಂದೇ ಹಂತ, ಪಂಜಾಬ್‌ನ 117 ಸ್ಥಾನಕ್ಕೆ ಒಂದೇ ಹಂತ, ಮಣಿಪುರದ 60 ಸ್ಥಾನಕ್ಕೆ 2 ಹಂತ ಮತ್ತು ಗೋವಾದ 40 ಸ್ಥಾನಕ್ಕೆ ಒಂದೇ ಹಂತದಲ್ಲಿ ಮತದಾನ ನಡೆದಿತ್ತು. ಹೀಗೆ ಮೊದಲ ಹಂತದ ಮತದಾನ ನಡೆದ ತಿಂಗಳ ಬಳಿಕ ಫಲಿತಾಂಶ ಪ್ರಕಟವಾಗುತ್ತಿದೆ.

ಉತ್ತರ ಪ್ರದೇಶದಲ್ಲಿ ಒಟ್ಟಾರೆ ಶೇ.58, ಗೋವಾದಲ್ಲಿ ಶೇ.79, ಉತ್ತರಾಖಂಡದಲ್ಲಿ ಶೇ.63, ಪಂಜಾಬ್‌ನಲ್ಲಿ ಶೇ.64 ಮತ್ತು ಮಣಿಪುರದಲ್ಲಿ ಶೇ.77ರಷ್ಟುಮತದಾನವಾಗಿದೆ.

Latest Videos
Follow Us:
Download App:
  • android
  • ios