Asianet Suvarna News Asianet Suvarna News

Punjab Exit Poll 2022 ಪಂಜಾಬ್‌ನಲ್ಲಿ ಕಾಂಗ್ರೆಸ್ ಧೂಳೀಪಟ, ಕೇಜ್ರಿವಾಲ್ ಪಕ್ಷಕ್ಕೆ ಪಟ್ಟ, ಸಮೀಕ್ಷಾ ವರದಿ ಪ್ರಕಟ!

  • ಪಂಜಾಬ್‌ನಲ್ಲಿ ಆಮ್ ಆದ್ಮಿ ಪಾರ್ಟಿಗೆ ಪೂರ್ಣ ಬಹುಮತ
  • ಬಹುತೇಕ ಸಮೀಕ್ಷಾ ವರದಿಗಳಲ್ಲಿ ಆಪ್ ಪಕ್ಷಕ್ಕೆ ಅಧಿಕಾರ
  • ಅಮರಿಂದರ್ ಸಿಂಗ್ ನಿರ್ಗಮನದ ಮೂಲಕ ಕಾಂಗ್ರೆಸ್ ನಿರ್ನಾಮ
     
Exit Poll 2022 survey predicted AAP clean Sweeps in Punjab assembly Election Result ckm
Author
Bengaluru, First Published Mar 7, 2022, 8:45 PM IST | Last Updated Mar 7, 2022, 8:45 PM IST

ನವದೆಹಲಿ(ಮಾ.07): ಪಂಚ ರಾಜ್ಯ ಚುನಾವಣೆಗಳ ಪೈಕಿ ಎರಡು ರಾಜ್ಯಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಒಂದು ಉತ್ತರ ಪ್ರದೇಶ ಹಾಗೂ ಮತ್ತೊಂದು ಪಂಜಾಬ್. ಯುಪಿ ಚುನಾವಣೋತ್ತರ ಸಮೀಕ್ಷೆಗಳು ಬಿಜೆಪಿ ಮತ್ತೊಮ್ಮೆ ಅಧಿಕಾರ ನೀಡಿದರೆ, ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷ ಸರ್ಕಾರ ರಚಿಸವು ಸೂಚನೆ ನೀಡಿದೆ. ಬಹುತೇಕ ಎಲ್ಲಾ ಚುನಾವಣೆಗಳಲ್ಲಿ ಆಮ್ ಆದ್ಮಿ ಪಕ್ಷ ಪೂರ್ಣ ಬಹುಮತದೊಂದಿದೆ ಸರ್ಕಾರ ರಚಿಸಲಿದೆ ಎಂದಿದೆ.

ಬಹುತೇಕ ಎಲ್ಲಾ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಆಮ್ ಆದ್ಮಿ ಪಾರ್ಟಿ ಅಭೂತ ಪೂರ್ವ ಗೆಲುವು ಸಾಧಿಸಿದೆ. ದೆಹಲಿಯಲ್ಲಿ ಅಧಿಕಾರದಲ್ಲಿರುವ ಆಮ್ ಆದ್ಮಿ ಪಾರ್ಟಿ ಇದೀಗ ಮತ್ತೊಂದು ರಾಜ್ಯದಲ್ಲಿ ಅಧಿಕಾರಕ್ಕೇರುವುದು ಬಹುತೇಕ ಖಚಿತವಾಗಿದೆ. ಆದರೆ ಆಡಳಿತರೂಢ ಕಾಂಗ್ರೆಸ್ ಎರಡನೇ ಪಕ್ಷವಾಗಲಿದೆ ಎಂದಿದೆ. ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಾಂಗ್ರೆಸ್ ತೊರೆಯುವ ಮೂಲಕ ಹಳೇ ಪಕ್ಷ ಅಧಪತನದಲ್ಲಿದೆ.

Manipur Exit Poll 2022: ಮಣಿಪುರದಲ್ಲಿ ಕಮಲ ಅರಳೋದು ಪಕ್ಕಾ ಎಂದ ಮತಗಟ್ಟೆ ಸಮೀಕ್ಷೆಗಳು!

ಜನ್‌ಕಿ ಬಾತ್ ಪಂಜಾಬ್ Exit poll 2022 ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 60 ರಿಂದ 80
ಕಾಂಗ್ರೆಸ್: 18 ರಿಂದ 31
ಶಿರೋಮಣಿ ಅಕಾಲಿ ದಳ+ : 12 ರಿಂದ 19
ಬಿಜೆಪಿ+: 03 ರಿಂದ 7
 
ಇಂಡಿಯಾ ಟುಡೆ ಆಕ್ಸಿಸ್ ಪಂಜಾಬ್ Exit poll 2022 ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ:  76-90
ಕಾಂಗ್ರೆಸ್:19-31
ಬಿಜೆಪಿ+: 1-4
ಶಿರೋಮಣಿ ಅಕಾಲಿ ದಳ+: 7-11

Goa Exit Poll 2022 ಗೋವಾದಲ್ಲಿ ಬಿಜೆಪಿ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿನ ಸ್ಪರ್ಧೆ,ಯಾರಿಗೆ ಗದ್ದುಗೆ?

ಎಬಿಪಿ ಸಿ ವೋಟರ್ ಪಂಜಾಬ್ Exit poll 2022 ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 51-61
ಕಾಂಗ್ರೆಸ್:22-28
ಶಿರೋಮಣಿ ಅಕಾಲಿ ದಳ:20-26
ಬಿಜೆಪಿ: 7-13 
ಇತರರು: 1-5

ಚಾಣಾಕ್ಯ ಪಂಜಾಬ್ Exit poll 2022 ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ: 100
ಕಾಂಗ್ರೆಸ್ : 10
ಬಿಜೆಪಿ: 1
ಅಕಾಲಿ ದಳ: 6

ಟೈಮ್ಸ್ ನೌ ಪಂಜಾಬ್ Exit poll 2022 ಸಮೀಕ್ಷೆ
ಆಮ್ ಆದ್ಮಿ ಪಾರ್ಟಿ:70
ಕಾಂಗ್ರೆಸ್ : 22
ಬಿಜೆಪಿ: 5
ಶಿರೋಮಣಿ ಅಕಾಲಿ ದಳ: 19

ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿನ 117 ಸ್ಥಾನದಲ್ಲಿ ಚಾಣಾಕ್ಯ ಸಮೀಕ್ಷೆ ಪ್ರಕಾರ 100 ಸ್ಥಾನಗಳಲ್ಲಿ ಗೆಲ್ಲಲಿದೆ ಎಂದಿದೆ.ಟೈಮ್ಸ್ ನೌ ಸಮೀಕ್ಷೆಯಲ್ಲಿ ಆಪ್‌ಗೆ 70 ಸ್ಥಾನ ದಕ್ಕಲಿದೆ ಎಂದಿದ್ದರೆ, ಎಬಿಪಿ ಸಿವೋಟರ್ ಸಮೀಕ್ಷೆಯಲ್ಲಿ 51 ರಿಂದ 61 ಸ್ಥಾನ ಗೆಲ್ಲಲಿದೆ ಎಂದಿದೆ. ಇಂಡಿಯಾ ಟುಡೆ ಎಕ್ಸಿಸ್ ಸಮೀಕ್ಷೆ ಪ್ರಕಾರ ಆಮ್ ಆದ್ಮಿ ಪಾರ್ಟಿ 76 ರಿಂದ 90 ಸ್ಥಾನ ಗೆಲ್ಲಲಿದೆ ಎಂದಿದೆ.

ಪಂಜಾಬ್‌ನಲ್ಲಿ ಅಧಿಕಾರ ದಕ್ಕಿಸಿಕೊಳ್ಳಲು ಮ್ಯಾಜಿಕ್ ನಂಬರ್ 59. 2017ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 76 ಸ್ಥಾನ ಗೆದ್ದಿತ್ತು. ಆಮ್ ಆದ್ಮಿ ಪಾರ್ಟಿ 12 ಸ್ಥಾನ ಗೆದ್ದಿತ್ತು. ಆದರೆ 2022ರ ವಿಧಾನಸಭಾ ಚುನಾವಣೆ ಆಪ್ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಸಮೀಕ್ಷೆಗಳು ಹೇಳುತ್ತಿದೆ. ಇನ್ನು ಬಿಜೆಪಿ 6 ಸ್ಥಾನಗಳನ್ನು ಗೆದ್ದುಕೊಂಡಿತು.

ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ನಾಲ್ಕು ರಾಜ್ಯಗಳಲ್ಲಿ ಗೆಲ್ಲಲಿದೆ ಎಂದು ಹಿರಿಯ ನಾಯಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆದರೆ ಪಂಜಾಬ್‌ನಲ್ಲಿ ಬಿಜೆಪಿಯ ಪರ್ಫಾಮೆನ್ಸ್ ಉತ್ತಮವಾಗಲಿದೆ ಎಂದಿದೆ. ಪಂಜಾಬ್‌ನಲ್ಲಿ ನಿಜಕ್ಕೂ ಕೇಜ್ರಿವಾಲ್ ಪಕ್ಷಕ್ಕೆ ಬಂಪರ್ ಎನ್ನುತ್ತಿದೆ ಸಮೀಕ್ಷೆ. ಕಾಂಗ್ರೆಸ್ ಪಕ್ಷದಲ್ಲಿನ ಒಳಜಗಳ, ಕ್ಯಾಪ್ಟನ್ ಅಮರಿಂದರ್ ಸಿಂಗ್ ನಿರ್ಗಮನ, ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು ರಾಜಕೀಯ ಪಂಜಾಬ್ ಕಾಂಗ್ರೆಸ್ ಮೇಲೆ ಪರಿಣಾಮ ಬೀರಿದೆ.

Latest Videos
Follow Us:
Download App:
  • android
  • ios