Asianet Suvarna News Asianet Suvarna News

ಪಿವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್,ಎಂಎಸ್ ಸ್ವಾಮಿನಾಥನ್‌ಗೆ ಭಾರತ ರತ್ನ ಘೋಷಣೆ

ಮಾಜಿ ಪ್ರಧಾನಿ ಪಿವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್, ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್‌ಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಣೆ ಮಾಡಿದೆ.

EX PM PV Narsimha Rao Chaudhary Charan Singh and agricultural scientist MS Swaminathan  will be conferred Bharat Ratna ckm
Author
First Published Feb 9, 2024, 1:01 PM IST

ನವದೆಹಲಿ(ಫೆ.09) ಮಾಜಿ ಪ್ರಧಾನಿಗಳಾದ ಪಿವಿ ನರಸಿಂಹರಾವ್, ಚೌಧರಿ ಚರಣ್ ಸಿಂಗ್ ಹಾಗೂ  ಹಸಿರು ಕ್ರಾಂತಿ ಪಿತಾಮಹ ಕೃಷಿ ವಿಜ್ಞಾನಿ ಎಂಎಸ್ ಸ್ವಾಮಿನಾಥನ್‌ಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಣೆ ಮಾಡಿದೆ. ಇತ್ತೀಚಗೆ ಬಿಜೆಪಿಯ ಭೀಷ್ಮ ಎಲ್‌ಕೆ ಅಡ್ವಾಣಿ ಹಾಗೂ ಬಿಹಾರ ಮಾಜಿ ಮುಖ್ಯಮಂತ್ರಿ ಕರ್ಪೂರಿ ಠಾಕೂರ್‌ಗ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿತ್ತು. ಈ ಮೂಲಕ ಒಟ್ಟು 5 ಸಾಧಕರಿಗೆ ಕೇಂದ್ರ ಸರ್ಕಾರ ಭಾರತ ರತ್ನ ಘೋಷಿಸಿದೆ.

1991ರಿಂದ 1996ರ ವರೆಗೆ ಭಾರತದ ಪ್ರಧಾನಿಯಾಗಿದ್ದ ಪಿವಿ ನರಸಿಂಹರಾವ್, ಭಾರತದ ಆರ್ಥಿಕತೆ ಉದಾರೀಕರಣದ ರುವಾರಿ ಎಂದೇ ಗುರುತಿಸಿಕೊಂಡಿದ್ದಾರೆ. ಇತ್ತ 179ರಲ್ಲಿ ಅಲ್ಪ ಅವಧಿಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ ಚೌಧರಿ ಚರಣ್ ಸಿಂಗ್ ದೇಶದ ರೈತರ ಹಕ್ಕುಗಳ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ ನಾಯಕ. ಇನ್ನು ಭಾರತದಲ್ಲಿ ಹಸಿರು ಕ್ರಾಂತಿ ಮಾಡಿದ ಕೃಷಿ ವಿಜ್ಞಾನಿ  ಎಂಎಸ್ ಸ್ವಾಮಿನಾಥನ್ ಅವರ ಸಾಧನೆಯನ್ನು ಗುರುತಿಸಿ ಭಾರತದ ಅತ್ಯನ್ನತ ಭಾರತ ರತ್ನ ಪ್ರಶಸ್ತಿ ಘೋಷಿಸಲಾಗಿದೆ. 

Breaking: ಬಿಜೆಪಿಯ ಭೀಷ್ಮ ಎಲ್‌ ಕೆ ಅಡ್ವಾಣಿಗೆ ಭಾರತರತ್ನ ಘೋಷಣೆ

ಈ ಕುರಿತು ಪ್ರಧಾನಿ ನರೇಂದ್ರ ಮೋದಿ ಸಂತಸ ಹಂಚಿಕೊಂಡಿದ್ದಾರೆ. ನಮ್ಮ ಮಾಜಿ ಪ್ರಧಾನಿ ಪಿವಿ ನರಸಿಂಹ ರಾವ್ ಅವರಿಗೆ ಭಾರತ ರತ್ನ ನೀಡಿ ಗೌರವಿಸುತ್ತಿರುವ ಮಾಹಿತಿ ಹಂಚಿಕೊಳ್ಳಲು ಸಂತಸವಾಗುತ್ತಿದೆ. ವಿದ್ದಾಂಸ, ರಾಜನೀತಿ ತಜ್ಞರಾಗಿ ಪಿವಿ ನರಸಿಂಹ ರಾವ್ ದೇಶದಲಲ್ಲಿ ಹಲವು ಮಹತ್ತರ ಜವಾಬ್ದಾರಿಗಳನ್ನು ನಿರ್ವಹಿಸಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿಯಾಗಿ, ಕೇಂದ್ರದ ಸಚಿವರಾಗಿ, ಸಂಸತ್ ಹಾಗೂ ವಿಧಾಸಭೆ ಸದಸ್ಯರಾಗಿ ನರಸಿಂಹ ರಾವ್ ಮಾಡಿದ ಕೆಲಸವನ್ನು ಜನರೂ ಈಗಲೂ ನೆನಪಿಸಿಕೊಳ್ಳುತ್ತಾರೆ. ನರಸಿಂಹ ರಾವ್ ದೂರದೃಷ್ಟಿ ನಾಯಕತ್ವ ಭಾರತವನ್ನು ಆರ್ಥಿಕವಾಗಿ ಮುನ್ನಡೆಸಲು ಪ್ರಮುಖ ಪಾತ್ರ ನಿರ್ವಹಿಸಿತ್ತು. ಇದು ದೇಶದ ಸಮೃದ್ಧಿ ಹಾಗೂ ಅಭಿವೃದ್ಧಿಗೆ ಅಡಿಪಾಯ ಹಾಕಿತ್ತು ಎಂದು ಮೋದಿ ಟ್ವೀಟ್ ಮಾಡಿದ್ದಾರೆ.  

ಪಿವಿ ನರಸಿಂಹ ರಾವ್ ಪ್ರಧಾನಿಯಾಗಿ ಭಾರತವನ್ನು ಜಾಗತಿಕ ಮಾರುಕಟ್ಟೆಗೆ ತೆರೆದುಕೊಳ್ಳುವಂತೆ ಮಾಡಿದ ನಾಯಕ.  ವಿದೇಶಾಂಗ ನೀತಿ, ಭಾಷೆ, ಶಿಕ್ಷಣಗಳಿಗೆ ನರಸಿಂಹ ರಾವ್ ಕೊಡುಗೆ ಅಪಾರ. ಭಾರತದಲ್ಲಿ ಸಾಂಸ್ಕೃತಿಕ, ಬೌದ್ಧಿಕ ಪರಂಪರೆಯನ್ನು ಶ್ರೀಮಂತಗೊಳಿಸಿ ಧೀಮಂತ ನಾಯಕ ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.   

ಇತ್ತ ಸ್ವಾಮಿನಾಥನ್ ಅವರಿಗೆ ಭಾರತ ರತ್ನ ಘೋಷಣೆ ಕುರಿತು ಮೋದಿ ಟ್ವೀಟ್ ಮಾಡಿದ್ದಾರೆ. ಡಾ.ಎಂಎಸ್ ಸ್ವಾಮಿನಾಥನ್ ಅರ ಕೃಷಿ ಹಾಗೂ ರೈತರ ಕಲ್ಯಾಣದಲ್ಲಿ ಭಾರತಕ್ಕೆ ನೀಡಿದ ಕೊಡುಗೆ ಗುರುತಿಸಿ ಭಾರತ ರತ್ನ ಗೌರವ ನೀಡಲಾಗುತ್ತಿದೆ. ಇದು ನನಗೆ ಅತ್ಯಂತ ಸಂತೋಷದಾಯಕವಾಗಿದೆ. ಭಾರತ ಎದುರಿಸುತ್ತಿದ್ದ ಹಲವು ಸವಾಲುಗಳ ನಡುವೆ ದೇಶವನ್ನು ಕೃಷಿಯಲ್ಲಿ ಸ್ವಾವಲಂಬನೆ ಸಾಧಿಸಲು ಸ್ವಾಮಿನಾಥ್ ನೀಡಿದ ಕೊಡುಗೆ ಅಪಾರ. ಭಾರತೀಯ ಕೃಷಿ ಪದ್ಧತಿಯನ್ನು ಆಧುನೀಕರಣಗೊಳಿಸುವಲ್ಲಿ ಪ್ರಯತ್ನ ಮಾಡಿದರು. ಸ್ವಾಮಿನಾಥನ್ ಅವರು, ಭಾರತೀಯ ಕೃಷಿಯನ್ನು ಪರಿವರ್ತನೆಗೊಳಿಸಿ ಉತ್ಪನ್ನದಾಯಕ ಹಾಗೂ ಲಾಭದಾಯಕ ಮಟ್ಟಕ್ಕೆ ತಿರುಗಿಸಿ ದೇಶದ ಆಹಾರ ಭದ್ರತೆ ಹಾಗೂ ಸಮೃದ್ಧಿಯನ್ನು ತಂದ ವಿಜ್ಞಾನಿ. ನನಗೆ ಆತ್ಮೀಯರಾಗಿರುವ ನಾನು ಅತ್ಯಂತ ಗೌರವಿಸುವ ವ್ಯಕ್ತಿ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. 

ಭಾರತ ರತ್ನ ಘೋಷಿಸಿದ ಕೇಂದ್ರ ಸರ್ಕಾರ, ಬಿಹಾರ ಮಾಜಿ ಸಿಎಂ ಕರ್ಪೂರಿ ಠಾಕೂರ್‌ಗೆ ಮರಣೋತ್ತರ ಪ್ರಶಸ್ತಿ!

ದೇಶದ ಮಾಜಿ ಪ್ರಧಾನಿ ಚರಣ್ ಸಿಂಗ್ ಚೌಧರಿ ಅವರಿಗೆ ಭಾರತ ರತ್ನ ನೀಡಿ ಗೌರವಿಸುತ್ತಿರುವುದು ನಮ್ಮ ಸರ್ಕಾರದ ಸೌಭಾಗ್ಯ ಎಂದು ಭಾವಿಸುತ್ತೇನೆ. ದೇಶಕ್ಕೆ ನೀಡಿದ ಕೊಡುಗೆ ಅಪಾರ. ಈ ಕೊಡುಗೆಯನ್ನು ಗುರುತಿಸಿ ಭಾರತ ರತ್ನ ಗೌರವ ಸಲ್ಲಿಸಲಾಗುತ್ತಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ. ಚರಣ್ ಸಿಂಗ್ ಚೌಧರಿ ತಮ್ಮ ಇಡೀ ಜೀವನವನ್ನು ರೈತರ ಹಕ್ಕು ಹಾಗೂ ಕಲ್ಯಾಣಕ್ಕೆ ಮುಡಿಪಾಗಿಟ್ಟ ಅಪರೂಪದ ನಾಯಕ. ಉತಚ್ತರ ಪ್ರದೇಶದ ಮುಖ್ಯಮಂತ್ರಿಯಾಗಿ, ಭಾರತದ ಗೃಹ ಸಚಿವರಾಗಿ,  ಶಾಸಕರಾಗಿ ದೇಶ ನಿರ್ಮಾಣಕ್ಕೆ ಪ್ರಮುಖ ಆದ್ಯತೆ ನೀಡಿದ ನಾಯಕ. ತುರ್ತು ಪರಿಸ್ಥಿತಿ ವಿರುದ್ದ ನಿಂತ ಧೀಮಂತ ಹೋರಾಟಗಾರ. ಪ್ರಜಾಪ್ರಭುತ್ವಕ್ಕೆ ಚೌಧರಿ ಅರ ಬದ್ಧತೆ ದೇಶಕ್ಕೆ ಸ್ಪೂರ್ತಿಯಾಗಿದೆ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.  


 

Follow Us:
Download App:
  • android
  • ios