Asianet Suvarna News Asianet Suvarna News

ಛತ್ತೀಸ್‌ಗಢ ಸ್ಪೀಕರ್‌ ಸ್ಥಾನಕ್ಕೆ ಮಾಜಿ ಸಿಎಂ ರಮಣ್ ಸಿಂಗ್‌ ನಾಮಪತ್ರ ಸಲ್ಲಿಕೆ: ಅವಿರೋಧ ಆಯ್ಕೆ ಬಹುತೇಕ ಖಚಿತ

ರಮಣ್‌ ಸಿಂಗ್ ಅವರಿಗೆ ಪ್ರತಿಪಕ್ಷದ ಭೂಪೇಶ್‌ ಬಘೇಲ್‌ ಅವರೂ ಬೆಂಬಲ ಸೂಚಿಸಿರುವುದರಿಂದ ಅವರ ಸ್ಪೀಕರ್ ಹಾದಿ ಸುಗಮವಾಗಿದೆ. ರಾಜನಂದಗಾಂವ್‌ನಿಂದ ಸತತ ನಾಲ್ಕು ಬಾರಿ ಶಾಸಕರಾಗಿರುವ ರಮಣ್‌ ಸಿಂಗ್‌, 2003 ರಿಂದ 2018ರವರೆಗೆ ಸತತ ಮೂರು ಅವಧಿಗೆ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿದ್ದರು.

ex cm raman singh files nomination for speaker post of the chhattisgarh legislative assembly ash
Author
First Published Dec 18, 2023, 1:08 PM IST

ರಾಯ್ಪುರ (ಡಿಸೆಂಬರ್ 18, 2023): ಇತ್ತೀಚೆಗಷ್ಟೇ ಚುನಾವಣೆ ಗೆದ್ದು ಅಧಿಕಾರ ವಹಿಸಿಕೊಂಡಿರುವ ಛತ್ತೀಸ್‌ಗಢ ರಾಜ್ಯದಲ್ಲಿ ಬಿಜೆಪಿಯ ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್‌ ವಿಧಾನಸಭಾಧ್ಯಕ್ಷರ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದು, ಅವಿರೋಧವಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ರಮಣ್‌ ಸಿಂಗ್ ಅವರಿಗೆ ಪ್ರತಿಪಕ್ಷದ ಭೂಪೇಶ್‌ ಬಘೇಲ್‌ ಅವರೂ ಬೆಂಬಲ ಸೂಚಿಸಿರುವುದರಿಂದ ಅವರ ಹಾದಿ ಸುಗಮವಾಗಿದೆ. ರಾಜನಂದಗಾಂವ್‌ನಿಂದ ಸತತ ನಾಲ್ಕು ಬಾರಿ ಶಾಸಕರಾಗಿರುವ ರಮಣ್‌ ಸಿಂಗ್‌, 2003 ರಿಂದ 2018ರವರೆಗೆ ಸತತ ಮೂರು ಅವಧಿಗೆ ಛತ್ತೀಸ್‌ಗಢದ ಮುಖ್ಯಮಂತ್ರಿಯಾಗಿದ್ದರು. ಆದರೆ ಇತ್ತೀಚೆಗೆ ಅವರಿಗೆ ಸಿಎಂ ಪಟ್ಟ ನಿರಾಕರಿಸಲಾಗಿತ್ತು.

ಇದನ್ನು ಓದಿ: ಛತ್ತೀಸ್‌ಗಢದ ನೂತನ ಸಿಎಂ ಹೆಸರಲ್ಲಿದೆ 66 ಲಕ್ಷದ ಸಾಲ, ಇರುವ ಒಟ್ಟು ಆಸ್ತಿ ಎಷ್ಟು?

ಇವರು ವಿಧಾನಸಭಾಧ್ಯಕ್ಷರಾಗಿ ಆಯ್ಕೆಯಾದಲ್ಲಿ ಡಿಸೆಂಬರ್ 19ರಿಂದ ಪ್ರಾರಂಭವಾಗುವ ಅಧಿವೇಶನದಲ್ಲಿ ರಾಜ್ಯದ 6ನೇ ಅವಧಿಗೆ ಅಧಿಕಾರ ಸ್ವೀಕರಿಸುವ ಸಾಧ್ಯತೆ ಇದೆ. ಇದಕ್ಕೂ ಮೊದಲು ರಾಮ್‌ವಿಚಾರ್‌ ನೇತಂ ಅವರನ್ನು ಮಧ್ಯಂತರ ಸ್ಪೀಕರ್‌ ಅಗಿ ನೇಮಕ ಮಾಡಲಾಗಿತ್ತು. ಈ ಕುರಿತು ಮಾತನಾಡಿದ ರಮಣ್‌ ಸಿಂಗ್‌, ‘ಹೊಸ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತಿದ್ದು, ಆಡಳಿತ ಮತ್ತು ವಿಪಕ್ಷದ ನಡುವೆ ಸಮನ್ವಯತೆ ಸಾಧಿಸಲು ಮೊದಲ ಆದ್ಯತೆ ನೀಡುತ್ತೇನೆ’ ಎಂದು ತಿಳಿಸಿದ್ದಾರೆ.

ನಕ್ಸಲ್‌ ದಾಳಿಗೆ ಪಿಎಸ್‌ಐ ಬಲಿ: 1 ತಿಂಗಳಲ್ಲಿ 3ನೇ ಸಾವು
ರಾಯಪುರ: ನಕ್ಸಲರ ಜತೆ ನಡೆದ ಗುಂಡಿನ ಚಕಮಕಿಯಲ್ಲಿ ಪೊಲೀಸ್‌ ಸಬ್‌ಇನ್ಸ್‌ಪೆಕ್ಟರ್‌ ಹುತಾತ್ಮನಾಗಿ ಮತ್ತೊಬ್ಬ ಪೇದೆ ಗಾಯಗೊಂಡ ಘಟನೆ ಛತ್ತೀಸ್‌ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ. ಇದು ನಕ್ಸಲ್‌ ವಿರುದ್ಧ ಕಾದಾಟದಲ್ಲಿ ಸಂಭವಿಸಿದ ಈ ತಿಂಗಳಿನ ಮೂರನೇ ಪೊಲೀಸ್‌ ಸಿಬ್ಬಂದಿಯ ಸಾವಾಗಿದೆ.

Breaking: ಮಾಜಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಸಿಎಂ ಆಗಿ ಘೋಷಣೆ!

 

ಭಾನುವಾರ ಬೆಳಗ್ಗೆ ಸುಕ್ಮಾ ಬಳಿ ನಕ್ಸಲರು ಹಾಗೂ ಸಿಆರ್‌ಪಿಎಫ್‌ ನಡುವೆ ಗುಂಡಿನ ಚಕಮಕಿ ನಡೆಯಿತು. ಈ ವೇಳೆ ಸಬ್‌ ಇನ್ಸ್‌ಪೆಕ್ಟರ್‌ ಸುಧಾಕರ್‌ ರೆಡ್ಡಿ ಅವರಿಗೆ ಗುಂಡಿನ ತಾಗಿ ಸ್ಥಳದಲ್ಲೇ ಮೃತಪಟ್ಟರು. ಇನ್ನು ಗುಂಡೇಟು ತಿಂದು ಗಾಯಗೊಂಡ ಪೊಲೀಸ್‌ ಪೇದೆಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಾಲ್ವರು ಶಂಕಿತ ನಕ್ಸಲರನ್ನು ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ರಾಜ್ಯಗಳ ಗೆಲುವಿನೊಂದಿಗೆ ದೇಶದ 17 ರಾಜ್ಯಗಳಲ್ಲಿ ಬಿಜೆಪಿ ಅಧಿಪತ್ಯ

Follow Us:
Download App:
  • android
  • ios