Asianet Suvarna News Asianet Suvarna News

Breaking: ಮಾಜಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಛತ್ತೀಸ್‌ಗಢ ಸಿಎಂ ಆಗಿ ಘೋಷಣೆ!


ಮಾಜಿ ಕೇಂದ್ರ ಸಚಿವ ಹಾಗೂ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಅವರನ್ನು ಬಿಜೆಪಿ ಹೈಕಮಾಂಡ್‌ ಛತ್ತೀಸ್‌ಗಢದ ಸಿಎಂ ಆಗಿ ಘೋಷಣೆ ಮಾಡಿದೆ.
 

BJP leader Vishnu Deo Sai to become the next Chief Minister of Chhattisgarh san
Author
First Published Dec 10, 2023, 4:15 PM IST

ನವದೆಹಲಿ (ಡಿ.10): ಬುಡಕಟ್ಟು ನಾಯಕ ಮತ್ತು ಮಾಜಿ ಕೇಂದ್ರ ಸಚಿವ ವಿಷ್ಣು ದೇವ್ ಸಾಯಿ ಅವರು ಛತ್ತೀಸ್‌ಗಢದ ಮುಂದಿನ ಮುಖ್ಯಮಂತ್ರಿಯಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಹೈಕಮಾಂಡ್‌ ಅಧಿಕೃತವಾಗಿ ಈ ಘೋಷಣೆ ಮಾಡಿದೆ. ಈವರೆಗೂ ಛತ್ತೀಸ್‌ಗಢದಲ್ಲಿ ಬಿಜೆಪಿಯ ಅತೀದೊಡ್ಡ ನಾಯಕರಾಗಿದ್ದ ಮಾಜಿ ಮುಖ್ಯಮಂತ್ರಿ ರಮಣ್‌ ಸಿಂಗ್‌ ಅವರಿಗೆ ಆಪ್ತರೂ ಆಗಿದ್ದಾರೆ. ವಿಷ್ಣು ದೇವ್‌ ಸಾಯಿ ಅವರು 2006 ರಲ್ಲಿ ಪಕ್ಷದ ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷರಾಗಿದ್ದರು ಮತ್ತು ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದರು. ಛತ್ತೀಸ್‌ಗಢದಲ್ಲಿ ಜಯಭೇರಿ ಬಾರಿಸಿದಾಗಿನಿಂದ ಬಿಜೆಪಿಯು ಮುಖ್ಯಮಂತ್ರಿ ಹುದ್ದೆಗೆ ಹಗ್ಗಜಗ್ಗಾಟ ನಡೆದಿತ್ತು. ಎಕ್ಸಿಟ್‌ ಪೋಲ್‌ನ ಪ್ರಕಾರ, ಛತ್ತೀಸ್‌ಗಢದಲ್ಲಿ ಕಾಂಗ್ರೆಸ್‌ ಅಧಿಕಾರ ಸ್ಥಾಪಿಸಲಿರುವ ಸೂಚನೆಯನ್ನು ಸಂಪೂರ್ಣವಾಗಿ ಬಿಜೆಪಿ ಧ್ವಂಸ ಮಾಡಿತ್ತು. ಆ ಬಳಿಕ ಬಿಜೆಪಿ ಛತ್ತೀಸ್‌ಗಢದಲ್ಲಿ ಯಾರನ್ನು ಮುಖ್ಯಮಂತ್ರಿ ಮಾಡಲಿದ್ದಾರೆ ಎನ್ನುವುದೇ ಸಸ್ಪೆನ್ಸ್‌ ಆಗಿ ಉಳಿದುಕೊಂಡಿತ್ತು. ಮಾಜಿ ಮುಖ್ಯಮಂತ್ರಿ ರಮಣ್ ಸಿಂಗ್ ಜೊತೆಗೆ ಸಾಯಿ ಅವರ ಹೆಸರನ್ನು ಬಿಜೆಪಿ ಹೈಕಮಾಂಡ್‌ ದೊಡ್ಡ ಮಟ್ಟದಲ್ಲಿ ಚರ್ಚೆ ಮಾಡಿತ್ತು.

ವಿಷ್ಣು ದೇವ ಸಾಯಿ ಛತ್ತೀಸ್‌ಗಢದ ಮೊದಲ ಬುಡಕಟ್ಟು ಮುಖ್ಯಮಂತ್ರಿಯಾಗಲಿದ್ದಾರೆ. ಸಾಯಿ ಅವರು 2020 ರಿಂದ 2022 ರವರೆಗೆ ಬಿಜೆಪಿಯ ರಾಜ್ಯಾಧ್ಯಕ್ಷರಾಗಿದ್ದರು. ಅವರು ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಅವಧಿಯಲ್ಲಿಕೇಂದ್ರದ  (ಉಕ್ಕು) ರಾಜ್ಯ ಸಚಿವರಾಗಿದ್ದರು. ಅವರು ಛತ್ತೀಸ್‌ಗಢದ ರಾಯ್‌ಪುರ ಕ್ಷೇತ್ರದಲ್ಲಿ ಬಿಜೆಪಿಯಿಂದ ಲೋಕಸಭಾ ಸದಸ್ಯರಾಗಿದ್ದರು. ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದಾರೆ. 2018 ರಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾದ ನಂತರ, ಬಿಜೆಪಿ ತನ್ನ ಸಂಘಟನೆಯನ್ನು ಪುನರ್ರಚಿಸಿದಾಗ, ವಿಷ್ಣು ದೇವ್ ಸಾಯಿ ಅವರನ್ನು ಬಿಜೆಪಿಯ ರಾಜ್ಯಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಪ್ರಸ್ತುತ ಅವರು ಬಿಜೆಪಿಯ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯರಾಗಿದ್ದಾರೆ.  2022 ರಲ್ಲಿ, ಅರುಣ್ ಸಾವೊ ಅವರನ್ನು ಪಕ್ಷದ ರಾಜ್ಯ ಘಟಕದ ಮುಖ್ಯಸ್ಥರನ್ನಾಗಿ ಮಾಡಿದಾಗ ಈ ಹುದ್ದೆಯನ್ನು ತೊರೆದಿದ್ದರು.

ಇಂದು ರಾಜಸ್ಥಾನ, ಛತ್ತೀಸ್‌ಗಢ ಸಿಎಂ ಘೋಷಣೆ? ನಾಳೆ ಮಧ್ಯಪ್ರದೇಶ ಸಿಎಂ ಆಯ್ಕೆ ಸಾಧ್ಯತೆ

ಛತ್ತೀಸ್‌ಗಢ ವಿಧಾನಸಭಾ ಚುನಾವಣೆಯಲ್ಲಿ, ಸಾಯಿ ಕುಂಕುರಿ ಬುಡಕಟ್ಟು ಕ್ಷೇತ್ರದಿಂದ 25000 ಮತಗಳ ಅಂತರದಿಂದ ಗೆದ್ದಿದ್ದಾರೆ. ಛತ್ತೀಸ್‌ಗಢದಲ್ಲಿ ಬಿಜೆಪಿ 54 ಸ್ಥಾನಗಳನ್ನು ಗೆದ್ದಿದ್ದರೆ, ಆಡಳಿತಾರೂಢ ಕಾಂಗ್ರೆಸ್ 35 ಸ್ಥಾನಗಳನ್ನು ಮಾತ್ರ ಗೆದ್ದಿದೆ.

ಲೋಕ ಚುನಾವಣೆ ಗೆಲ್ಲಲು ‘ಕೈ’ ಪಣ: 4 ರಾಜ್ಯಗಳಲ್ಲಿನ ಸೋಲಿನ ಪರಾಮರ್ಶೆ ನಡೆಸಿದ ಕಾಂಗ್ರೆಸ್‌ ನಾಯಕರು

ಸರ್ಗುಜಾ ವಲಯದ ಕಿಂಗ್‌: ಬಹುಶಃ ಛತ್ತೀಸ್‌ಗಢದ ರಾಜಕೀಯ ತಿಳಿದಿರುವವರಿಗೆ ಸರ್ಗುಜಾದ ಮಹತ್ವ ಗೊತ್ತೇ ಇರುತ್ತದೆ. ಸರ್ಗುಜಾ ವಲಯ ಗೆಲ್ಲದೇ ಛತ್ತೀಸ್‌ಗಢ ಗೆಲ್ಲೋದು ಸಾಧ್ಯವಿತ್ತ. ಉತ್ತರ ಛತ್ತೀಸ್‌ಗಢದಲ್ಲಿರುವ ಸರ್ಗುಜಾ ವಲಯದಲ್ಲಿರುವ 14 ಸೀಟ್‌ಗಳ ಪೈಕಿ 14 ಸೀಟ್‌ಗಳನ್ನೂ ಈ ಬಾರಿ ಬಿಜೆಪಿ ಜಯಿಸಿದೆ. ಅದಕ್ಕೆ ಕಾರಣ ಬುಡಕಟ್ಟು ಹಾಗೂ ಹಿಂದುತ್ವದ ನಾಯಕ ವಿಷ್ಣು ದೇವ್‌ ಸಾಯಿ. ಕಾಂಗ್ರೆಸ್‌ ಆಡಳಿತದ ವೇಳೆ ಉಪಮುಖ್ಯಮಂತ್ರಿಯಾಗಿದ್ದ ಟಿಎಸ್‌ ಸಿಂಗ್‌ ದೇವ್‌ ಕೂಡ ಇದೇ ಸರ್ಗುಜಾ ವಲಯದವರು. 2018ರ ಚುನಾವಣೆಯಲ್ಲಿ ಕಾಂಗ್ರೆಸ್‌ ಇಲ್ಲಿ 14ಕ್ಕೆ 14 ಸೀಟ್‌ ಗೆದ್ದರೂ ಟಿಎಸ್‌ ಸಿಂಗ್‌ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರಲಿಲ್ಲ. ಈ ಬಾರಿ ಬಿಜೆಪಿ ಅಧಿಕಾರಕ್ಕೇರುವಲ್ಲಿ ಸರ್ಗುಜಾ ಮಹತ್ವದ ಪಾತ್ರ ನಿಭಾಯಿಸಿದೆ. ಈ ಬಾರಿ ಮೋದಿ ಮಾಸ್ಟರ್‌ ಸ್ಟ್ರೋಕ್‌ ಎನ್ನುವಂತೆ ಇದೇ ವಿಭಾಗದ ನಾಯಕನನ್ನು ಛತ್ತೀಸ್‌ಗಢದ ಸಿಎಂ ಆಗಿ ಮಾಡಿದ್ದಾರೆ

Follow Us:
Download App:
  • android
  • ios